ಕರ್ನಾಟಕ ರಾಜ್ಯ ಆಗುವ ಮೊದಲು ನಾಲ್ಕು ದಿಕ್ಕುಗಳಲ್ಲಿ ಕನ್ನಡ ಮಾತನಾಡುವ ಭಾಷೆಯ ಪ್ರಾಂತಗಳಿದ್ದವು. ಮೈಸೂರು ಸoಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕ, ಹೀಗೆ ನಾಲ್ಕು ಪ್ರಾಂತ್ಯಗಳಿದ್ದವು ಇವುಗಳನ್ನು ಒಗ್ಗೂಡಿಸಲು ಕರ್ನಾಟಕ ರಾಜ್ಯ ಮಾಡಲು ಪಣ ತೊಟ್ಟರು.
ಒಂದೊಂದು ಆಡು ಭಾಷೆಯ ಜನಾಂಗ ನಾಲ್ಕು ದಿಕ್ಕುಗಳಲ್ಲಿ ಕನ್ನಡ ಮಾತನಾಡುವ ಭಾಷೆಯ ಮನಗಳು ಇದ್ದವು.
೧೯೫೬ ನವೆಂಬರ್ ಒಂದರಂದು ಎಲ್ಲ ಭಾಷೆಯ, ಕನ್ನಡ ಮನಗಳು ಒಂದಾದವು. ಇದಕ್ಕೆ ಕರ್ನಾಟಕ ಅಂದು ನಾಮಕರಣ ಮಾಡಿದರು. ಕರ್ನಾಟಕವು ಆರಂಭದಲ್ಲಿ ಮೈಸೂರು ಪ್ರಾಂತವಾಗಿತ್ತು.
ಕನ್ನಡದ ಮನಗಳು ಒಂದಾದವು, ಕನ್ನಡ ನುಡಿ ಜಾತ್ರೆಗೆ ಪ್ರತಿ ವರ್ಷ ನವೆಂಬರ್ ಒಂದರಂದು ಎಲ್ಲ ಕಚೇರಿ, ಶಾಲಾ ಕಾಲೇಜುಗಳಲ್ಲಿ ಗ್ರಾಮೀಣ ಗ್ರಂಥಾಲಯ ಕನ್ನಡ ನುಡಿ ನಮನಕ್ಕಾಗಿ ರಾಜ್ಯೋತ್ಸವ ಆಚರಣೆ ನಡೆಯುತ್ತದೆ. ಅಂದು ಹಲವಾರು ಸಾಹಿತ್ಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತದೆ. ರಾಜ್ಯ ಸರ್ಕಾರ ಸಾಹಿತ್ಯ, ಕಲೆ ಸಂಗೀತ ನಿರ್ದೇಶನ, ನಾಟಕ ಹೀಗೆ ಹಲವಾರು ದಿಗ್ಗಜರಿಗೆ ಪ್ರಶಸ್ತಿ ಪ್ರದಾನ,ಕರ್ನಾಟಕದ ಮುಖ್ಯ ಮಂತ್ರಿಗಳು ಶಾಸಕರು ಮಂತ್ರಿಗಳು,ಕಲಾಪದಲ್ಲಿ ಭಾಗವಹಿಸುವರು. ಕನ್ನಡ ರಾಜ್ಯೋತ್ಸವ ಮನೆ ಮನಗಳಲ್ಲೂ ಆಚರಿಸುವರು.
ಕನ್ನಡ ಅಕ್ಷರ ಮಾಲೆಯ ಪದಗಳಿಗೆ ಗೌರವ ಸಲ್ಲಿಸುವ ದಿನ. ಆದರೆ ಒಂದು ಕೊರಗು.೧೯೮೫ ರಲ್ಲಿ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾದ ಶ್ರೀ ಚಂದ್ರ ಶೇಖರ ಪಾಟೀಲ ಸಂಕ್ರಮಣ ಸಂಪಾದಕರು, ಶ್ರೀ. ಪಾಟೀಲ ಪುಟ್ಟಪ್ಪ ಪ್ರಪಂಚ ವಾರ ಪತ್ರಿಕೆ ಸಂಪಾದಕರು, ಇವರು ಎಲ್ಲಾ ಇಲಾಖೆಗಳಲ್ಲಿನ ಆಂಗ್ಲ ಭಾಷೆಯ ಬೆರಳಚ್ಚು ಯಂತ್ರ ಹೊರದಬ್ಬಿ ಅಲ್ಲಿ ಕನ್ನಡ ಬೆರಳಚ್ಚು ಯಂತ್ರ ಕೊಟ್ಟಿದ್ದರು.
ಕನ್ನಡ ಬೆರಳಚ್ಚು ಯಂತ್ರದಲ್ಲಿ ಐವತ್ತ ನಾಲ್ಕು ಅಕ್ಷರ, ಒತ್ತಕ್ಷರ, ಅಲ್ಪವಿರಾಮ ಪೂರ್ಣ ವಿರಾಮ ಚಿಹ್ನೆ ಕೀಗಳು ಇದ್ದವು.
ಅದರಲ್ಲಿ ಕನ್ನಡ ಪತ್ರ ವ್ಯವಹಾರ,ಲೀಲಾಜಾಲವಾಗಿ ನಡೆದಿತ್ತು. ಯಾವಾಗ ಆಧುನಿಕ ಯುಗ ಆವಿಷ್ಕಾರ ಆಗಿ ಕಂಪ್ಯೂಟರ್ , ಮೊಬೈಲ್, ಲ್ಯಾಪ ಟಾಪ, ಬಂದವು ಅಲ್ಲಿನ ಕೀ ಬೋರ್ಡ್ ನಲ್ಲಿ ಆಂಗ್ಲ ಭಾಷೆಯ ಇಪ್ಪತ್ತಾರು ಅಕ್ಷರದ ಕೀ ಇದ್ದು. ಅದರಲ್ಲಿ ಕನ್ನಡ ಮೊಳಗಬೇಕಿದೆ. ಆಗಲೇ ಕನ್ನಡ ಕೀ ಬೋರ್ಡ್ ಇರುವ ಬೆರಳಚ್ಚು ಯಂತ್ರ ಸಂಪೂರ್ಣ ಕನ್ನಡ ಇತ್ತು. ಈಗ ಹಾಗಿಲ್ಲ ಆಂಗ್ಲ ಭಾಷೆಯ ಇಪ್ಪತ್ತಾರು ಅಕ್ಷರದ ಕೀ ಬೋರ್ಡ್ ಇದೆ. ಹೇಗಿದೆ ನೋಡಿ ಕನ್ನಡ ಮೆರವಣಿಗೆ.
ರಾಜೇಂದ್ರ ಹೆಗಡೆ ಹಾವೇರಿ
Mo no.೮೩೧೦೩೮೪೫೪೦