You are currently viewing ಮೋಕ್ಷದ ಬಯಲು

ಮೋಕ್ಷದ ಬಯಲು

ಬೇಡವಾದ ಮನಸ್ಥಿತಿಗಳ ಮಧ್ಯೆ ನಿತ್ಯವು
ಆಸೆಯಿತ್ತು ಸಾಗುವುದೇ ರೋಚಕ ಸಂಗತಿ

ಕತ್ತಲಿಂದ ಕಳಚಿ ಬೆಳಕಿನ ಹೋರಾಟ ಮಾಡಿದರೇನು
ಸುಡುವ ಮನಗಳಲಿ ಯಾವ ತೈಲವ ಸುರಿದರೇನು

ಕಾಣುವ ಕೆಸರಿನ ಕಂಗಳಲಿ ಕಾರ್ಮೋಡದ
ಚಲನೆಗೆ ಭಯಭೀತಿ ಬಿತ್ತಿದವರೆ
ಸಾಮ್ರಾಜ್ಯ ತೊರೆದಂತೆಯಿಲ್ಲಿ

ಅಜ್ಞಾನದ ಒಡಲಲ್ಲಿ ಸಿಕ್ಕಿ ಅರೆಬೆಂದ ಅನ್ನವು
ಪ್ರಯೋಜನವಿಲ್ಲದಂತೆ ಬಲ್ಲಿದರ ಬಾಳಿಗೆ
ಕೆಡಕುಂಟು ಮಾಡಲು ದೀಪವಿಡುವಂತೆ

ಭೋದಿವೃಕ್ಷಕೆ ಕಾಲವೇ ತಿಳಿಸಿ ಹೇಳಲು ಹಣ್ಣಾದ ಎಲೆಗಳು
ಮೆತ್ತಿಕೊಂಡಿವೆ ದಾಹವ ತೀರಿಸಲು ಬಿದ್ದ
ಬೇಲಿಯ ಮೇಲಂತೆ ಮೋಕ್ಷದ ಬಯಲು

ನಗುವನೇ ಮತ್ತೊಮ್ಮೆ ಬುದ್ಧನು ನಮ್ಮನು ನೋಡಿ
ಬರುವನೇ ಮತ್ತೊಮ್ಮೆ ಬುದ್ಧನು ಅಳಿಸಲು ಜಗದ
ಕತ್ತಲಿನ ಮನಸುಗಳಿಗೆ ಬೆಳಕಿನ ಕಿರಣ ಸೂಸಲು!

ಸವಿತಾ ಮುದ್ಗಲ್
ಗಂಗಾವತಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.