You are currently viewing ಮತ್ತೆ ಬಂತು ಯುಗಾದಿ

ಮತ್ತೆ ಬಂತು ಯುಗಾದಿ

ನವವರುಷಕೆ ನಾಂದಿ ಯುಗಾದಿಯು
ಚೈತ್ರದಲಿ ವಸಂತಾಗಮನ ಆಗಿಹುದು
ನವಸಂವತ್ಸರದ ಸಂಭ್ರಮದಿ ಸರ್ವರು
ಶುಭಕೃತವು ತರಲಿ ಶುಭವೆಲ್ಲರಿಗೂ

ಎಲ್ಲೆಡೆ ತಳಿರು ತೋರಣವು
ನಾಡು ಹಸಿರಿನಿಂದ ಸಿಂಗಾರಗೊಂಡಿಹುದು
ನವ ಉಲ್ಲಾಸ ಹರಷವು ಮೇಳೈಸಿಹುದು
ಮಧುವರಸಿ ಬಂದಿಹವು ದುಂಬಿಗಳು

ಮಾವು ಬೇವು ಗಿಡಮರಗಳು
ಚಿಗುರೊಡೆಯುವ ಪರ್ವವಿದು
ಕೋಗಿಲೆಗಿದುವೆ ಮುದವು
ಕುಹೂಗಾನ ಮನಕಾನಂದವು

ಹಸಿರು ಮಾವು ಬೇವಿನ ತೋರಣಕಟ್ಟಿ
ಎಲ್ಲರೂ ಕೂಡಿ ಹೋಳಿಗೆ ಸವಿದು
ಸಂಭ್ರಮದಿ ಕಾತುರದಿ ಚಂದಿರನ ನೋಡಿ
ಬೇವು ಬೆಲ್ಲವ ಹಂಚಿ ಹಿರಿಯರ
ಆಶೀರ್ವಾದವ ಪಡೆಯುವ

ಬೇವು ಬೆಲ್ಲದಂತೆ ಸಮನಾಗಿ
ಜೀವನವ ನಡೆಸೋಣ
ಹಳೆ ಎಲೆ ಕಳಚಿ ಹೊಸದಾಗಿ
ಚಿಗುರುವ ಪ್ರಕೃತಿಯಂತೆ

ಹಳೆಯದೆಲ್ಲಾ ಮರೆತು ಹೊಸತು
ಅಳವಡಿಸಿಕೊಳ್ಳೋಣ
ಹಸಿರು ತುಂಬಿರುವ ಪ್ರಕೃತಿಯಂತೆ
ಎಲ್ಲರ ಜೀವನವು ನಳನಳಿಸಲಿ

ಈ ಹೊಸ ವರುಷ ಹೊಸ ಹರುಷ
ಹೊಸ ಹುರುಪು ತರಲಿ ಎಲ್ಲರ ಬಾಳಲಿ

ಆಶಾ ಎಲ್ ಎಸ್
ಶಿವಮೊಗ್ಗ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.