ಮುಖಪುಟದ ಸಾಹಿತ್ಯ ಬಳಗಗಳಿಂದ ಪರಿಚಿತರಾದಂತ ಖ್ಯಾತ ಕವಿ ದಿಗ್ಗಜರಾದ ನಾರಾಯಣ ಸ್ವಾಮಿಯವರ ✍📖
ಪುಸ್ತಕದ ಹೆಸರು-ಮತ್ತದೇ ಧ್ಯಾನ
ಲೇಖಕರು-ನಾರಾಯಣ ಸ್ವಾಮಿ(ನಾನಿ)
ಪ್ರಥಮ ಮುದ್ರಣ 2023
ಪುಸ್ತಕದ ಬೆಲೆ-120/ರೂಪಾಯಿ
ಪ್ರಕಾಶನ-ಆಶಾ ಪ್ರಕಾಶನ
ಬಂಡಹಟ್ಟಿ ನಂ-34 ಬಂಡಹಟ್ಟಿ ಮಾಸ್ತಿ ಹೋಬಳಿ
ಮಾಲೂರು ತಾಲ್ಲೂಕು ಕೋಲಾರ ಜಿಲ್ಲೆ
ಮುನ್ನುಡಿ ಬರೆದವರು-ಸಾವಿತ್ರಮ್ಮ ಓಂಕಾರ್
ಬೆನ್ನುಡಿ -ಸುಮಾ ಕಿರಣ್ ಬಸ್ರೂರ ಶಿಕ್ಷಕರು
43 ಕವನಗಳು ಮತ್ತು ಚುಟುಕುಗಳ ಸಂಗ್ರಹವಿದೆ.
ಲೇಖಕರ ಮೊಬೈಲ್ ಸಂಪರ್ಕ ಸಂಖ್ಯೆ -9880932972
ಕವಿ ಮಿತ್ರರಾದ ಶ್ರೀಯುತ ನಾರಾಯಣ ಸ್ವಾಮಿ ವಕೀಲರು (ನಾನಿ)ಯವರು ನನಗೆ ತಿಳಿದ ಮಟ್ಟಿಗೆ ನಾನು ಪೂರ್ಣಿಮಾ ರಾಜೇಶ್ ಹವ್ಯಾಸಿ ಬರಹಗಾರ್ತಿ ಕವಯಿತ್ರಿ ಬೆಂಗಳೂರು
ಸ್ವರಚಿತ ಕವನ
ಕೋಲಾರ ಜಿಲ್ಲೆಯ ಮಾಸ್ತಿ ಗ್ರಾಮದಲ್ಲಿ ಜನಿಸಿದವರು
ತಂದೆ ಶ್ರೀ ವೆಂಕಟರಮಣಪ್ಪ ತಾಯಿ ಪಾಪಮ್ಮನವರು
ಮಾಲೂರು ತಾಲ್ಲೂಕಿನ ಬಂಡಹಟ್ಟಿ ಗ್ರಾಮದವರು
ನಾರಾಯಣ ಸ್ವಾಮಿಯೆಂಬ ನಾಮಧೇಯದವರು
ಕಡುಬಡತನ ಏಳು ಬೀಳುಗಳ ನಡುವೆ ಬೆಳೆದವರು
ಮಾಲೂರಿನಲ್ಲಿ ಪದವಿಯವರೆಗೂ ಓದಿದವರು
ತುಮಕೂರಿನ ವಿದ್ಯೋದಯ ಕಾಲೇಜಿನಲ್ಲಿವರು
ಕಾನೂನು ಪದವಿಯನ್ನು ಪಡೆದು ವಕೀಲರಾದವರು
ನಾನಿ ಎಂಬ ಕಾವ್ಯ ನಾಮದಿಂದ ಚಿರಪರಿಚಿತರು
ಕಥೆ ಕವನ ಗಜಲ್ ಬರೆಯುವ ಕವಿ ದಿಗ್ಗಜರಿವರು
ಮೌನದೊಳಗಣ ಭಾವ ಮತ್ತು ಅಂತರಂಗದ ಧ್ಯಾನ
ಮತ್ತದೇ ಧ್ಯಾನ ಕವನ ಸಂಕಲನಗಳ ಲೇಖಕರು
ಅಂತರಂಗದ ಧ್ಯಾನ ಗಜಲ್ ಕೃತಿಯ ರಚಿಸಿದವರು
ಈ ಕೃತಿಯಿಂದ ಅಪಾರ ಜನಮನ್ನಣೆ ಗಳಿಸಿದವರು
ಬಸವ ಶ್ರೀ ಕಾವ್ಯ ಚೂಡಾಮಣಿ ಕನ್ನಡ ಸೇವಾ ರತ್ನ
ಅತ್ಯುನ್ನತ ಪ್ರಶಸ್ತಿ ಪುರಸ್ಕಾರಗಳ ಪಡೆದವರಿವರು
ವಕೀಲರಾಗಿ ವೃತ್ತಿ ಪ್ರವೃತ್ತಿಯಾಗಿ ಕವಿಯಾಗಿವರು
ಉತ್ತಮ ಬರಹಗಾರರಾಗಿ ಗುರುತಿಸಿಕೊಂಡಿರುವರು
ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವದ ವ್ಯಕ್ತಿಯಿವರು
ಮೃದು ಸ್ವಭಾವದ ಕವಿದಿಗ್ಗಜರೆಂದು ಹೆಸರಾದವರು
ಮುಖಪುಟದ ಸಾಹಿತ್ಯ ಬಳಗಗಳಿಂದ ಪರಿಚಿತರಾದಂತ ಖ್ಯಾತ ಕವಿ ದಿಗ್ಗಜರಾದ ನಾರಾಯಣ ಸ್ವಾಮಿ ಅವರ ಮತ್ತದೇ ಧ್ಯಾನ ಕವನ ಸಂಕಲನದಲ್ಲಿ ಪ್ರೀತಿ ,ಪ್ರೇಮ ,ವಿರಹ, ಹಳ್ಳಿಯ ಸೊಗಡಿನ ಚಿತ್ರಣ ವಿಭಿನ್ನ ವಿಶೇಷ ಉತ್ತಮ ಸಂದೇಶ ಸಾರುವ ಚಂದದ ಕವನಗಳಿವೆ ಕೃತಿಯ ಮೊದಲ ಕವನ ಯಾವ ತರಹದ ಕವಿತೆ ಬರೆಯಲಿ ಕವಿತೆ ಬರೆಯುವುದೇ ನನ್ನ ಖಯಾಲಿಯಾಗಿದೆ ನನಗೆ ಅನ್ನುವ ಚಂದದ ಅರ್ಥಪೂರ್ಣ ಸಾಲುಗಳಿವೆ.ಅಪ್ಪ,ಕತ್ತಲನ್ನು ಕೂಡ ಸಂಭ್ರಮಿಸಿ ಬಿಟ್ಟೆ, ಬದುಕಿನ ಆ ಕ್ಷಣಗಳು, ಭರವಸೆಯ ಆಶಾಕಿರಣ ಹಳ್ಳಿಯ ಸೊಗಡು ,ಹೀಗೆ ಅನೇಕ ವಿಭಿನ್ನ ವಿಶೇಷವಾದ ಕವನಗಳಿವೆ.
ಈ ಚಂದದ ಕೃತಿಯ ಸೊಗಸಾದ ಪದಗಳಿಂದ ಕೂಡಿದ ಎರಡು ಕವನಗಳು ಹಾಗೂ ಮೂರು ಚುಟುಕುಗಳು ನನಗೆ ಬಹಳ ಇಷ್ಟವಾಯಿತು.
ಹಳ್ಳಿಯ ಸೊಗಡು
ಮಂಜು ಕವಿದ ಮಬ್ಬಿನೊಳಗೆ
ಸೂರ್ಯ ಕಿರಣ ಹೊರಬಂದಿದೆ
ನೊಗವನೊತ್ತು ಮೆರವಣಿಗೆ ಹೊರಟಿದ್ದಾರೆ
ಮಂಜು ಹನಿಯೂ ಕರಗುತ್ತಿದೆ
ಬೆವರಹನಿ ಮೂಡುತಲಿದೆ
ಬುತ್ತಿಯ ಚೀಲ ತಲೆ ಮೇಲಿಟ್ಟು ಹೊರಬಂದರು
ನಗರದೊಳಗೆ ನಡೆಯುತ್ತಾರೆ
ಹಳ್ಳಿಯೊಳಗೆ ದುಡಿಯುತ್ತಾರೆ
ಮನುಜರೆಲ್ಲಾ ಕಡಿಯುತ್ತಾರೆ ದಾಹ ತೀರಲು
ಬದುಕಲಿಕ್ಕೆ ಜೀವ ಸವೆಸಿ
ಮಲಗಿದ ದೇಹ ಬೆರೆಸಿ
ಮನರಂಜನೆ ಮಾತುಗಳಿಲ್ಲಾ ಹಳ್ಳಿಗೂಡಲಿ
ಬದುಕಿನಲಿ ಕತ್ತಲಾವರಿಸಿ
ರಾತ್ರಿ ಹೊತ್ತಲಿ ದಣಿವಾರಿಸಿ
ನಾಳಿನಾ ತುತ್ತು ಬೆಳೆಯುವುದೆ ನಿತ್ಯ ಕಾಯಕ
ಹಸಿದವರ ಒಡಲಿಗಾಗಿ
ದೇಶ ಜನರ ಉಳಿವಿಗಾಗಿ
ವರುಷಗಳ ಕರ್ಮಫಲವೆ ದೇಹದಂಡನೆ..
ಮುದ್ದೆಯುಂಡು ಮೂರು ಸಾರಿ
ಬೆಟ್ಟ ಕಡಿದು ನೂರಾರು ಬಾರಿ
ಸಮಾಜದಲ್ಲಿ ಸ್ವಾಭಿಮಾನದ ಸಂಕೇತದವ
ಪ್ರಕೃತಿಯಲ್ಲಿ ಅಭಿಮಾನವ
ಅಂತರಂಗದ ಮೌನಿಯಾಗುವ
ಕರುಣಾಮಯಿ ರೈತನಿವನು…
ಕಲ್ಪನೆಯೊಳಗಿನ ಕಾವ್ಯವಲ್ಲ ಅವಳು
ಕಲ್ಪನೆಯೊಳಗಿನ ಕಾವ್ಯವಲ್ಲ
ಕನ್ನಡಿಯೊಳಗಿನ ಬಿಂಬವಲ್ಲ
ನನ್ನದೆಯುಸಿರಿನ ಶ್ವಾಸವು ಅವಳು
ನೋವಿನೊಳಗೆ ಸೆಳೆತವಾಗಿ ಬಂದವಳು.
ಭಾವನೆಗಳೊಂದಿಗೆ ಮಿಳಿತವಾದವಳು
ನನ್ನೊಲುಮೆಯ ಜೀವದ ಸೆಲೆಯಾಗಿ ನಿಂತವಳು
ಪ್ರತಿಕ್ಷಣವೂ ಹೃದಯದೊಳಗೆ ಬಡಿತವಾದವಳು
ಪ್ರೀತಿಯನೊಲುಮೆಯ ಹರಿಸಿದವಳು
ಪ್ರೇಮದೊಲುಮೆಯನುಣಿದವಳು
ಜ್ಞಾನವೆಂಬ ಬೆಳಕನ್ನು ತೋರಿದವಳು
ನನ್ನೆದೆಯಲಿ ಜ್ಯೋತಿಯಾಗಿ ಬೆಳಗುತಿಹಳು
ಭ್ರಮೆಯೆಂಬ ಕತ್ತಲಿಗೆ ದೀಪವಾದವಳು
ಮೋಹದ ದಳ್ಳುರಿಗೆ ತಿಲಾಂಜಲಿಯಿಟ್ಟವಳು
ಮೌನವ ತಡೆದು ಮರೆಯೊಳಗೆ ನಿಂತವಳು
ಕವಿತೆಯಾಗಿ ಎದೆಯೊಳಗೆ ಅಡಗಿ ಕುಳಿತವಳು
ಹೃದಯದ ನೋವಿಗೆ ಮುಲಾಮು ಹಚ್ಚಿದವಳು
ಕಣ್ಣೊಳಗೆ ಕಾಂತಿಯ ತುಂಬಿ ಮಿನುಗಿದವಳು
ನಿದಿರೆಯೊಳಗೆ ದಿಗ್ಗನೆದ್ದು ಪ್ರೀತಿಯನಂಚಿದವಳು
ಬೆಚ್ಚನೆಯ ನನ್ನ ನೆನಪುಗಳನೆ ಹೊದ್ದು ಮಲಗಿದವಳು
ಚುಟುಕುಗಳು
1)ಮರುಭೂಮಿಯಲ್ಲಿ ನೀರ ಕಂಡಂತೆ
ಕತ್ತಲಲ್ಲಿ ಕಂದೀಲು ಸಿಕ್ಕಿದಂತೆ
ಬಿಸಿಲತಾಪದಲ್ಲಿ ಹೊಂಗೆಯ ನೆರಳಿನಂತೆ
ನೀ ಸಿಕ್ಕ ದೀವಿಗೆಯಂತೆ
2)ಶ್ರೀಮಂತಿಕೆಯ ತೋರಿ ಮೆರೆಯಬೇಡ
ಇಲ್ಲದವನ್ನೆಂದು ಜರಿಯಬೇಡ
ಬಡವನೆದೆಯ ಆಕ್ರೋಶಗಳು
ಸಿಡಿಯಬಹುದು ಅಗ್ನಿ ಪರ್ವತದಂತೆ…!
3)ಮತ್ತೊಮ್ಮೆ ಬನ್ನಿ ರಸ ಋಷಿಯೇ
ಮಂಕಾಗಿ ಕುಳಿತಿದೆ ಕವಿಶೈಲ
ನೀನು ಕೊಟ್ಟ ವಿಶ್ವ ಮಾನವ ಸಂದೇಶ
ಮರೆಯಾಗಿ ಹೋಗಿದೆ ಜಗದೊಳಗಿಂದು..
ಮತ್ತದೇ ಧ್ಯಾನ ಕವನ ಸಂಕಲನ ಕೃತಿಯಲ್ಲಿರುವ ಉತ್ತಮ ರಚನೆಯ ಕವನಗಳು ,ಚುಟುಕುಗಳು
ಓದುಗರ ಮನ ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ
ಕವಿಮಿತ್ರರಾದ ನಾನಿಯವರ ಸಾಹಿತ್ಯ ಸೇವೆ ಹೀಗೆಯೇ ಮುಂದುವರೆಯಲೆಂದು ಇವರಿಂದ ಮತ್ತಷ್ಟು ಉತ್ತಮ ಕೃತಿಗಳು ಲೋಕಾರ್ಪಣೆ ಯಾಗಲೆಂದು ಶುಭ ಕೋರಿ ಹರಸಿ ಹಾರೈಸುವೆ
🙏ಧನ್ಯವಾದ
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.