ರೆಕ್ಕೆ ಪುಕ್ಕಗಳ ಗೊಡವೆ ಇಲ್ಲದೆಯೇ
ಮತಿಯೆಂಬ ಮರದಲಿ ಗೂಡು ಕಟ್ಟಿ
ಭಾವತರಂಗಗಳಲಿ ಗುರಿಗತಿ ತಪ್ಪುತ್ತ
ಹಾರುತ್ತಿದೆ ಮನಸ್ಸೆಂಬ ಹಕ್ಕಿ ಹಾರುತ್ತಿದೆ
ಕುಂತಲ್ಲೇ ಕೂರದೆ ನಿಂತಲ್ಲೆ ನಿಲ್ಲದೆಯೇ
ದಿಗಂತದಾಚೆಗೆ ಬಾನು ಭುಮಿಯ ಮೆಟ್ಟಿ
ನವಸಗಳ ಅರೆಬರೆಯಾಗಿ ಸವಿಯುತ್ತ
ಹಾರುತ್ತಿದೆ ಮನಸ್ಸೆಂಬ ಹಕ್ಕಿ ಹಾರುತ್ತಿದೆ
ರಹದಾರಿಯ ಭೀತಿ ಪಜೀತಿ ಇಲ್ಲದೆಯೇ
ಭಾವನಾ ಲೋಕದಲಿ ಆಶಾ ನಭವ ಮುಟ್ಟಿ
ನೋವು ನಲಿವುಗಳ ಭಾವಗಳ ಬಿಚ್ಚಿಡುತ್ತ
ಹಾರುತ್ತಿದೆ ಮನಸ್ಸೆಂಬ ಹಕ್ಕಿ ಹಾರುತ್ತಿದೆ
ದೂರದೂರವ ಅರೆಗಳಿಗೆಯಲಿ ಅಪ್ಪಿಯೇ
ಬಣ್ಣ ಬಣ್ಣದ ರೆಕ್ಕೆಗಳಲಿ ಕಲ್ಪನೆಗಳ ಕಟ್ಟಿ
ಅಳುನಗುವಿನ ಸಿಂಚನದಲಿ ಸಂಚರಿಸುತ್ತ
ಹಾರುತ್ತಿದೆ ಮಸಸ್ಸೆಂಬ ಹಕ್ಕಿ ಹಾರುತ್ತಿದೆ
ಡಾ.ಡಿ.ಫ್ರಾನ್ಸಿಸ್ ಕ್ಸೇವಿಯರ್
ಹರಿಹರ, ದಾವಣಗೆರೆ ಜಿಲ್ಲೆ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.
ಸುಂದರ ಕವನ
ಧನ್ಯವಾದಗಳು
ಧನ್ಯವಾದಗಳು