You are currently viewing ಮಕ್ಕಳಾಗೋಣ

ಮಕ್ಕಳಾಗೋಣ

ದ್ವೇಷದ ಓಣಿಯಲ್ಲಿ
ಪ್ರೀತಿಯಿಂದ ಹೋಗಿ ಆಟ ಆಡುವ
ಮಕ್ಕಳ ಹಾಗೇ ನಾವೇಕೆ ಇಲ್ಲ?

ಜಾತಿಯನ್ನು ಮರೆತು
ಸ್ನೇಹಿದಿಂದ ಸದಾ ಜೊತೆಗಿರುವ
ಮಕ್ಕಳ ಹಾಗೇ ನಾವೇಕೆ ಇಲ್ಲ?

ಧರ್ಮವನ್ನು ಮರೆತು
ಒಂದೇ ತಟ್ಟೆಯಲ್ಲಿ ಕೂಡಿ ಉಣ್ಣುವ
ಮಕ್ಕಳ ಹಾಗೇ ನಾವೇಕೆ ಇಲ್ಲ?

ಸಿರಿತನ ಬಡತನ ಮರೆತು
ಕೈ ಕೈ ಹಿಡಿದುಕೊಂಡು ಬೆರೆಯುವ
ಮಕ್ಕಳ ಹಾಗೇ ನಾವೇಕೆ ಇಲ್ಲ?

ಯಾರಿಗೂ ಕೇಡು ಬಯಸಿದೆ
ಅರಳಿ ಹೂವಿನ ನಗುವನ್ನು ಬೀರುವ
ಮಕ್ಕಳ ಹಾಗೇ ನಾವೇಕೆ ಇಲ್ಲ?

ಮನೆಗೆ ಸಂಭ್ರಮ ತಂದು
ಎಲ್ಲರ ಮನಸ್ಸು ಹಗುರಾಗಿಸುವ
ಮಕ್ಕಳ ಹಾಗೇ ನಾವೇಕೆ ಇಲ್ಲ?

ನಮ್ಮ ಅಹಂಕಾರದ
ಗರ್ವವನ್ನು ನಾವೇ ಸುಟ್ಟುಕೊಂಡು
ಮಕ್ಕಳ ಹಾಗೇ ದೇವರಾಗಿ ಬಿಡೋಣ

ಮಹಾಂತೇಶ ಬೇರಗಣ್ಣವರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



Leave a Reply