You are currently viewing ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ

ಮನೆ ಮಾಡಿದೆ ಎಲ್ಲೆಲ್ಲೂ
ಸಡಗರ ಸಂಭ್ರಮ
ಮಕರ ಸಂಕ್ರಾಂತಿ ಹಬ್ಬದ
ಇಂದಿನ ಶುಭದಿನ
ನೇಸರನು ಬದಲಾಯಿಸುವನು
ತನ್ನಯ ಪಥವ
ದಕ್ಷಿಣದಿಂದ ಉತ್ತರದೆಡೆಗೆ
ಪುಣ್ಯೋತ್ತಮದ
ಉತ್ತರಾಯಣದ ಪರ್ವಕಾಲವಿದು
ಮಾಗಿದ ಚಳಿಯಲ್ಲಿ ಬೀಗುತಾ ಹೋಗಿ
ಪವಿತ್ರ ನದಿಯ ಸ್ನಾನವ ಮಾಡಿ
ತಳಿರು ತೋರಣಗಳಿಂದ
ಮನೆಯ ದ್ವಾರವನ್ನಲಂಕರಿಸಿ
ಎಳ್ಳು – ಬೆಲ್ಲವ ಸವಿದು
ಅಂದ ಚೆಂದದಿ
ಕಬ್ಬನ್ನು ಅಗಿದು ತಿನ್ನುತ್ತ
ಪ್ರೀತಿಯ ಸವಿ ಮಾತನಾಡುತ
ಖುಷಿ – ಖುಷಿಯಾಗಿ
ಸಂತೊಷವನ್ನು ಹಂಚೋಣ
ಸಹಬಾಳ್ವೆಯ ಬಾಳೋಣ
ಭಾರತದ ಭವ್ಯತೆಯ ಮೆರೆಯೋಣ.

ಹೆಚ್ ಆರ್. ಬಾಗವಾನ
ಶಿಕ್ಷಕ ಸಾಹಿತಿ
ಮುದ್ದೇಬಿಹಾಳ ಜಿಲ್ಲೆ



ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.