You are currently viewing ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಎಲ್ಲರಿಗೂ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ, ನಮ್ಮ ಭಾರತದ ಸ್ವಾತಂತ್ರ್ಯ ಇತಿಹಾಸ ಬರೆಯಲ್ಪಟ್ಟಾಗ ಮಹಿಳಾ ಹೋರಾಟಗಾರರು ಮಾಡಿದ ತ್ಯಾಗಅತೀ ಹೆಚ್ಚು ಅನ್ನಬಹುದು.ಇವರ ಶ್ರಮ, ತ್ಯಾಗದ ಜೀವನ ಅಗ್ರಸ್ಥಾನಕ್ಕೆ ಏರುತ್ತದೆ.

ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕೈಯಲ್ಲಿ ಶಸ್ತ್ರ ಹಿಡಿದು ಹಗಲಿರುಳು ದುಡಿದ ಪ್ರತಿಫಲ ಈ ನಮ್ಮ ಸ್ವಾತಂತ್ರ್ಯ ಅಂದರೆ ಸುಳ್ಳಾಗದು.ಇದರಲ್ಲಿ ನಮ್ಮ ಕರ್ನಾಟಕ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಅಷ್ಟೇ ಪ್ರಮುಖವಾಗಿದ್ದಾರೆ.

ಇವರಿಬ್ಬರ ಸ್ವಾತಂತ್ರ್ಯ ಮಹಿಳಾ ಸಾಧಕಿಯರ ಬಗ್ಗೆ ತುಂಬಾ ಇಷ್ಟವಾಗುತ್ತದೆ.

1. ಝಾನ್ಸಿರಾಣಿ ಲಕ್ಷ್ಮಿ ಬಾಯಿ..
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಾಭಿಮಾನ ಶೌರ್ಯ ಸಾಹಸಗಳಿಂದ ಉತ್ತಮ ಸಂಘಟನೆಗಳಿಂದ ಬ್ರಿಟಿಷರೊಡನೆ ಹೋರಾಡಿದ ಸಾದ್ವಿಮಣಿ, ಅಸಾಧಾರಣ ಶೂರೇ ಕೇವಲ 22 ವರ್ಷ ಬದುಕಿ ಭಾರತೀಯರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತ ಸ್ಥಾನ ಪಡೆದ ವೀರ ಮಹಿಳೆ ಝಾನ್ಸಿರಾಣಿ ಲಕ್ಷ್ಮಿ ಬಾಯಿ!!.
ಲಕ್ಷ್ಮೀಬಾಯಿ 1835 ನವಂಬರ್ 19 ರಂದು ಪೇಶ್ವೆಗಳ ಮನೆತನಕ್ಕೆಸದ ಸೇರಿದ ಮುರೋಪಂತ ಮತ್ತು ಭಾಗಿರತಿ ಬಾಯಿಯವರ ಪುತ್ರಿಯಾಗಿ ಜನಿಸಿದಳು.
ಈಕೆಯ ಮೊದಲ ಹೆಸರು ಮನುಬಾಯಿ.
ನಾಲ್ಕು ವರ್ಷದವರಿದ್ದಾಗಲೇ ತಾಯಿಯನ್ನು ಕಳೆದುಕೊಂಡಳು. ಈಕೆಯು ಶಿಕ್ಷಣ ಹಾಗೂ ಯುದ್ಧ ಕೌಶಲ್ಯಗಳಾದ ಕತ್ತಿ ವರಸೆ, ಬಂದೂಕು ಗುರಿ, ಕುದುರೆ ಸವಾರಿ ಇತ್ಯಾದಿ ಸಾಧನೆಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿದಳು.
ಏಳನೆಯ ವಯಸ್ಸಿನಲ್ಲಿದ್ದಾಗಲೇ ಮನುಭಾಯಿ ಜ್ಯಾಂತಿಯ ಮಹಾರಾಜ ಗಂಗಾಧರಾಯರೊಂದಿಗೆ ಬಾಲ್ಯ ವಿವಾಹವಾದಳು.
ಮದುವೆಯ ನಂತರವೇ ಲಕ್ಷ್ಮಿಬಾಯಿ ಎಂದು ನಾಮಕರಣ ಹೊಂದಿದಳು.
ಅಧಿಕಾರ ದಾಹ ಹೊಂದಿದ ಇಂಗ್ಲಿಷರು ಹಿಂದುಸ್ಥಾನದಲ್ಲಿ ವಿಸ್ತರಣೆ ನೆಪದಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದರು.
ಲಕ್ಷ್ಮೀಬಾಯಿಗೆ ಗಂಡು ಮಗು ಹುಟ್ಟಿದರು ಅದು ಬದುಕಲಿಲ್ಲ.
ಲಾರ್ಡ್ ಡಾಲ್ ಹೌಸಿ ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನಿಯಮ ದಂತೆ ಜಾನ್ಸಿಯ ಮಹಾರಾಜ ಮಕ್ಕಳಿಲ್ಲದೆ ಸತ್ತರೆ ಆ ಸಾಮ್ರಾಜ್ಯ ಇಂಗ್ಲೀಷರ ಕೈವಶವಾಗುತ್ತಿತ್ತು.
ಬ್ರಿಟಿಷ್ ನೀತಿಯನ್ನು ವಿರೋಧಿಸಿ ದಾಮೋದರನನ್ನು ದತ್ತು ಪುತ್ರನನ್ನಾಗಿ ಸ್ವೀಕರಿಸಿ ಕೂಸನ್ನು ಬೆನ್ನಿಗೆ ಕಟ್ಟಿಕೊಂಡೆ ಪುರುಷರಂತೆ ವೇಷ ದರಿಸಿದ್ದ ರಾಣಿ ಈ ವೀರ ಕೇಸರಿಯನ್ನು ಕೆಣಕಿ ಬದುಕಬಲ್ಲಿರಾ?…ಎಂದು ಸಿಂಹ ಘರ್ಜನೆ ಮಾಡಿ ಜವಹರ ಸಿಂಹ ಮುಂತಾದರೊಡನೆ ಸೇರಿ ಹೋರಾಟವನ್ನು ನಡೆಸಿದಳು.
ಬ್ರಿಟಿಷ್ ಅಧಿಕಾರಿ ಸರ್ ಸೂರಸ್ ಭಾರತೀಯ ಸೈನಿಕರನ್ನು ಸೋಲಿಸಿ ವಾಲಿಯರನ್ನು ಮುಟ್ಟಿದನು. ಕೊನೆಗೆ ಕಾಲ್ಪಿಯಲ್ಲಿ ನಡೆದ ಕದನದಲ್ಲಿ ವೀರ ವೇಷದಿಂದ ಕಾದಾಡುತ್ತ ಲಕ್ಷ್ಮಿಬಾಯಿ ಜೂನ್ 1858 ರಂದು ನಿಧನಲಾದಳು.
ಬ್ರಿಟಿಷರೇ ಕೊನೆಗೆ ಈಕೆಯನ್ನು ದಂಗೆಕೋರರಲ್ಲಿ ಶ್ರೇಷ್ಠ ಎಂದು ಹೊಗಳಿದ್ದಾರೆ.



2. ಕಿತ್ತೂರು ಚೆನ್ನಮ್ಮ
ವೀರರಾಣಿ ಚೆನ್ನಮ್ಮ ಕಾಕತಿ ದೇಸಾಯಿ ಅವರ ಮನೆತನದಲ್ಲಿ 1778 ರಲ್ಲಿ ಜನಿಸಿದಳು. ತಂದೆ ಧೂಳಪ್ಪ ಗೌಡರು ಚೆನ್ನಮ್ಮನಿಗೆ ಉತ್ತಮ ಶಿಕ್ಷಣ ಕೊಡಿಸಿ 16ನೇ ವಯಸ್ಸು ತಲುಪುವುದರಲ್ಲಿ ಸಂಸ್ಕೃತಿ ಸಾಹಿತ್ಯ, ರಾಜಕೀಯ, ಸಂಗೀತ ಯುದ್ಧ ಕೌಶಲ್ಯಗಳಾದ ಕುದುರೆ ಸವಾರಿ,ಕತ್ತಿ ವರಸೆ,ಇನ್ನಿತರ ಕಲೆಗಳ ಬಗ್ಗೆ ಅಪಾರಾಶಕ್ತಿ ಹೊಂದಿದಳು.
ಕಿತ್ತೂರಿನ ದೊರೆ ಮಲ್ಲಸರ್ಜನು ಚನ್ನಮ್ಮನ ಸೌಂದರ್ಯವನ್ನು ನೋಡಿ ಸಂತಸಗೊಂಡು ಎರಡನೆಯ ರಾಣಿಯನ್ನಾಗಿ ಮಾಡಿಕೊಂಡು ಕಿತ್ತೂರಿಗೆ ಕರೆತಂದನು.
ಮಲ್ಲಸರ್ಜನ್ ಹಿರಿಯ ರಾಣಿ ರುದ್ರಮ್ಮ ಚೆನ್ನಮ್ಮನನ್ನು ಪ್ರೀತಿಯಿಂದ ಸ್ವಾಗತಿಸಿದಳು. ಚೆನ್ನಮ್ಮ ರಾಜಕೀಯ ಆಸಕ್ತಿಯನ್ನು ಹೊಂದಿದ್ದಳು. ರುದ್ರಮ್ಮಳಿಗೆ ರಾಜಕೀಯ ಆಸಕ್ತಿ ಇರಲಿಲ್ಲ.
ಕೇಶವಗಳು ಕಿತ್ತೂರಿನ ಮೇಲೆ ದಾಳಿ ಮಾಡಿ ಮಲ್ಲಸಜ್ಜನನ್ನು ಸೆರೆಹಿಡಿದು ಹೋದಾಗ ಆತನಿಗೆ ತೀವ್ರ ರೋಗವಿತ್ತು. ಮಲ್ಲಸರ್ಜಾ ಮನೆಗೆ ಬರುವಾಗಲೇ ಮರಣಾವಸ್ಥೆಯಲ್ಲಿದ್ದು ಮನೆಯಲ್ಲಿ ಹೆಂಡತಿಯನ್ನು,ಮಗನಾದ ಶಿವಲಿಂಗ ರುದ್ರಸರ್ಜನನ್ನು ಕಣ್ತುಂಬ ನೋಡಿ ಪ್ರಾಣ ಬಿಟ್ಟನು.
ಚೆನ್ನಮ್ಮನಿಗೆ ದಿಕ್ಕೇ ತೋಚದಂತಾಗಿ ಹಿರಿಯ ರಾಣಿಯ ಮಗ ಶಿವಲಿಂಗ ರುದ್ರ ಸರ್ಜಾನನ್ನು ಪಟ್ಟಧಿಕಾರಿಯನ್ನಾಗಿ ನೇಮಿಸಿ 1816ರಿಂದ 1824ರ ರಾಜಡಳಿತ ನಡೆಸಿದಳು.
ಚೆನ್ನಮ್ಮ ಹಿತಶತ್ರುಗಳ ಸ್ವಾರ್ಥಿಗಳ ದ್ರೋಹಕ್ಕೆ ಬಲಿಯಾದರೂ ಸಹ ಸಂಗೊಳ್ಳಿ ರಾಯಣ್ಣನಂತಹ ಹಲವಾರು ಕಲ್ಲಿಗಳ ಸಹಾಯದಿಂದ ಯುದ್ಧ ಮಾಡಿ ಬ್ರಿಟಿಷರನ್ನು ಕಂಗೊಳಿಸಿದಳು. ಬ್ರಿಟಿಷರು ಚೆನ್ನಮ್ಮಾಳನ್ನು ಬೈಲಹೊಂಗಲ ಸೆರೆಮನೆಯಲ್ಲಿಟ್ಟರು ನಂತರ 1829 ಫೆಬ್ರವರಿ ಎರಡರಂದು ರಾಣಿ ಚೆನ್ನಮ್ಮ ಮರಣ ಹೊಂದಿದಳು.
ಬ್ರಿಟಿಷರ ಬಲಾಟೆ ಸೈನ್ಯವನ್ನು ಧೈರ್ಯದಿಂದ ಎದುರಿಸಿದ ವೀರ ಮಹಿಳೆ ವೀರರತ್ ತ್ಯಾಗ ಸಾಹಸ ಅಭಿಮಾನ ದೇಶಪ್ರೇಮ ಎಲ್ಲಾ ಜನರಿಗೂ ಜಾಗೃತಿಯನ್ನು ಉಂಟು ಮಾಡಲು ಎಷ್ಟೇ ಕಷ್ಟ ಬಂದರೂ ಧೈರ್ಯದಿಂದ ಹೆದುರಿಸಿ ಭಾರತೀಯ ಕ್ಷೇತ್ರ ತೇಜಸ್ಸನ್ನು ಜಗತ್ತಿಗೆ ತಿಳಿಸಿದ ವೀರ ಮಹಿಳೆ ಚೆನ್ನಮ್ಮ.

ಸವಿತಾ ಮುದ್ಗಲ್
ಗಂಗಾವತಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.