You are currently viewing ಮಹಾಮಹಿಮ ಶ್ರೀಕೃಷ್ಣನು

ಮಹಾಮಹಿಮ ಶ್ರೀಕೃಷ್ಣನು

ಶುಭ ಶ್ರಾವಣ ಮಾಸದ ಕೃಷ್ಣ ಪಕ್ಷದಲ್ಲಿ
ಅಷ್ಟಮಿ ತಿಥಿಯಂದು ಮಧ್ಯರಾತ್ರಿಯಲ್ಲಿ
ಶ್ರೀಕೃಷ್ಣನ ಜನ್ಮ ಚಂದ್ರ ರೋಹಿಣಿ ನಕ್ಷತ್ರದಲ್ಲಿ
ವಸುದೇವ ಮತ್ತು ದೇವಕಿಯ ಗರ್ಭದಲ್ಲಿ

ಅಷ್ಟಪುತ್ರ ರತ್ನವಾಗಿ ಜನಿಸಿದ ಸಿದ್ದಿಪುರುಷನು
ಭೂಮಿಗೆ ಬಂದ ದೇವಕಿಯ ಕಂದ ಶ್ರೀಕೃಷ್ಣನು
ಸಾಕುತಾಯಿ ಯಶೋಧೆಯ ಮಡಿಲಲ್ಲಿ ಬೆಳೆದವನು
ಗೊಲ್ಲರೊಡನೆ ಗೋವ ಕಾಯ್ದ ಬಾಲಗೋಪಾಲನು

ಗೋವರ್ಧನ ಗಿರಿಯನ್ನು ಕಿರುಬೆರಳಲ್ಲಿ ಎತ್ತಿದವನು
ಗೋಪಾಲಕೃಷ್ಣ ಗಿರಿಧಾರಿ ಗೊಲ್ಲ ಗೋಪಿಲೋಲನು
ಕೊಳಲನು ನುಡಿಸುವ ಮುರುಳಿ ಮುರಾರಿಯಿವನು
ಬೆಣ್ಣೆ ಮೊಸರು ಕದ್ದ ಕಳ್ಳಕೃಷ್ಣ ನವನೀತ ಚೋರನು

ಜಯ ಜನಾರ್ದನ ಜಗದ್ದೋದ್ಧಾರಕ ಜಗದರಕ್ಷಕನು
ನೀಲಮೇಘ ಶ್ಯಾಮ ಪುರುಷೋತ್ತಮ ಮಹಿಮನು
ನಾರಾಯಣ ಕೇಶವನು ಶ್ರೀ ಹರಿ ಸರ್ವೋತ್ತಮನು
ವಂದೇ ವಿಷ್ಣು ಜಗದ್ಗುರು ಶ್ರೀಕೃಷ್ಣ ವಾಸುದೇವನು

ಪೂರ್ಣಿಮಾ ರಾಜೇಶ್
ಕವಿಯಿತ್ರಿ ಹವ್ಯಾಸಿ ಬರಹಗಾರ್ತಿ
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ