You are currently viewing ಕುವೆಂಪು ಕಂಪು

ಕುವೆಂಪು ಕಂಪು

ಯುಗದ ಕವಿಯಾಗಿ
ಜಗದ ರವಿಯಾಗಿ
ಭುವನೇಶ್ವರಿಯ ಸುತನಾಗಿ
ವಿಶ್ವ ಮಾನವತೆಯ ಸಂದೇಶ ಸಾರಿದ
ಕುವೆಂಪು ಕನ್ನಡದ ಕಂಪು || ಪ ||

ಚಂದ್ರಮನ ಚೆಲುವಿನಲಿ
ಚೈತ್ರದ ಚಿಗುರಿನಲಿ
ಮಲೆನಾಡ ಮಡಿಲಿನಲಿ
ಚಂದನವನದ ಮಲ್ಲಿಗೆಯಾಗಿ ಅರಳಿದ
ಕುವೆಂಪು ಕನ್ನಡದ ಕಂಪು ||೧||

ಮಲೆಗಳಲ್ಲಿ ಮದುಮಗಳವಿರಿಸಿ
ಕಾನೂರು ಹೆಗ್ಗಡಿತಿ ಕಾದಂಬರಿ ರಚಿಸಿ
ಶ್ರೀರಾಮಾಯಣ ದರ್ಶನವ ಮಾಡಿಸಿ
ಜ್ಞಾನ ಪೀಠದ ಶಿಖರವೇರಿದ
ಕುವೆಂಪು ಕನ್ನಡದ ಕಂಪು ||೨||

ಮಾನಸ ಗಂಗ್ರೋತ್ರಿಯ ಬೆಳೆಸಿ
ಕನ್ನಡ ಪಠ್ಯಪುಸ್ತಕವ ಪ್ರಕಟಿಸಿ
ಕನ್ನಡ ಮಾಧ್ಯಮ ಕಲಿಕೆಗೆ ಪ್ರೇರೆಪಿಸಿ
ಕನ್ನಡವೆನ್ನದವನೆದೆಯು ಸುಡುಗಾಡೆಂದ
ಕುವೆAಪು ಕನ್ನಡದ ಕಂಪು ||೩||

ಕನ್ನಡ ಡಿಂಡಿಮವ ಬಾರಿಸಿ
ಸತ್ತಂತಿಹರನು ಬಡಿದೆಚ್ಚರಿಸಿ
ಚೆಲುವ ಕನ್ನಡ ನಾಡ ವರ್ಣಿಸಿ
ರಸ ಋಷಿಯಾಗಿ ಕನ್ನಡ ಪಸರಿಸಿದ
ಕುವೆಂಪು ಕನ್ನಡದ ಕಂಪು ||೪||

ರವಿ ಕಂಗಳ
ಸಾಹಿತಿಗಳು, ಬಾದಾಮಿ
9632970226

ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.