ಪುಸ್ತಕದ ಹೆಸರು : ಕುಲದೀಪಕ (ಕಾದಂಬರಿ )
ಲೇಖಕಿ :ಎಸ್. ಮಂಗಳಾ ಸತ್ಯನ್
ಪ್ರಕಾಶನ: ಸಾಗರಿ ಪ್ರಕಾಶನ
ಪ್ರಥಮ ಮುದ್ರಣ :2013
ಮುದ್ರಕರು :ಕಮಲ್ ಇಂಪ್ರೆಷನ್ಸ್, ಮೈಸೂರ.
ಬೆಲೆ :310/-₹.
ಈ ಕಾದಂಬರಿಯಲ್ಲಿ ಒಟ್ಟು ಮೂರು ಕಥಾ ಕಾದಂಬರಿಗಳು ಕೂಡಿವೆ.
1. ದೇವ ಮಂದಿರ
2. ಪ್ರೇಮಸಾಗರ
3. ಪುತ್ರಕಾಮಿ
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಮಹಿಷ ಪುರದ ಜನಪ್ರಿಯ ಲೇಖಕಿ ಶ್ರೀಮತಿ ಮಂಗಳಾ ಸತ್ಯನ್ ಅವರ ಲೇಖನಿಯಿಂದ ಹರಿದು ಬಂದ ನೇರ,ದಿಟ್ಟ ನಿರಂತರ ತ್ರಿವಳಿ ಕಾದಂಬರಿಗಳೇ ಈ “ಕುಲದೀಪಕ”.
ಇವರ ಕಾದಂಬರಿಗಳು ಎಂದರೆ ಅವು ಎಂದೆಂದಿಗೂ ಅರಳಿದ ಹೂಗಳೇ!!!! ಎಂದು ಪ್ರಕಾಶಕರು ತಮ್ಮ ಅಭಿಪ್ರಾಯದ ನುಡಿಯನ್ನು ಹೇಳಿದ್ದಾರೆ.
ಈ ಕಾದಂಬರಿಯಲ್ಲಿ ಒಟ್ಟು ಪುಟಗಳು 512.
☘ಕುಲದೀಪಕ☘
ಕುಲದೀಪಕ ಕಾದಂಬರಿಯಲ್ಲಿ ಸುಮಾರು 249 ಪುಟಗಳು ಕಥೆಯನ್ನು ಹೊಂದಿದೆ.
ಇದನ್ನು ತುಂಬಾ ವಿಸ್ತರವಾಗಿ ಬರೆದಿದ್ದಾರೆ. ಈ ಕುಲದೀಪಕದಲ್ಲಿ ವಿನಾಯಕನ ಪಾತ್ರವೇ ತುಂಬಾ ಮಹತ್ವವಾಗಿದೆ. ಉಳಿದಂತೆ ಅಕ್ಕ-ತಂಗಿಯರ ತಾಯಿಯ ತಂದೆಯ ಪಾತ್ರವೂ ಅವರಿಗೆ ತಕ್ಕಂತೆ ಕಥೆ ಮುಂದುವರಿಸಿಕೊಂಡು ಹೋಗಿದೆ.
ಈ ಕಾದಂಬರಿಯನ್ನು ಒಂದೇ ಸಾರಿ ಓದಿದರೆ ಅರ್ಥವಾಗದು ಎರಡು ಮೂರು ಸಾರಿ ಓದಿದಾಗ ಮಾತ್ರ ಪೂರ್ಣ ಕಥೆ ಮನದಟ್ಟಾಗುತ್ತದೆ.
☘☘☘☘☘
ಶ್ರವಣಬೆಳಗೊಳದ ಪ್ರಾಥಮಿಕ ಶಾಲೆ ಅಂತರದಲ್ಲಿ ಉಪಾಧ್ಯಾಯನಾಗಿದ್ದ ಶ್ರೀನಿವಾಸನಿಗೆ ಅವನ ಸಂಸಾರವೂ ಬರುತ್ತಿದ್ದ ವೇತನಕ್ಕೆ ಸರಿದೂಗುವಂತೆ ಚಿಕ್ಕದಾಗಿತ್ತು,ಗಂಡ ಹೆಂಡತಿ ಒಂದು ಮಗು.
ವಿನಾಯಕ ಚೌತಿಯ ದಿವಸ ಜನಿಸಿದ್ದರಿಂದ ಮಗನಿಗೆ ವಿನಾಯಕನೆಂದು ಹೆಸರಿಟ್ಟಿದ್ದರು.
ಮನ ಒಪ್ಪುವ ಮಡದಿ ಮನೆತನಕ್ಕೆ ಮೆಚ್ಚುಗೆಯಾಗುವಂತಹ ಮಗ ಶ್ರೀನಿವಾಸನ ಮುದಗೊಂಡ ಈ ಸಂಸಾರ ವಿಧಿಗೆ ಸೈರಣೆ ತರದಾಯಿತು. ಊರಿಗೆ ಬಂದ ಕಾಲರ ಬೇನೆಯಿಂದ ತಾಯಿಯನ್ನು ತನ್ನ ಬಾಯಿಗೆ ಹಾಕಿಕೊಂಡಿತು.
ಪ್ರೀತಿಯ ಮಗನ ಒಳತಿಗಾಗಿ ಎರಡನೆಯ ಮದುವೆ ಮಾಡಿಕೊಳ್ಳುವುದೇ ಬೇಡವೆಂದು ಶ್ರೀನಿವಾಸ ನಿರ್ಧಾರ ತಳೆ ದಿ ದ್ದನಾದರೆ ಸಮುದ್ರದ ದಂಡೆಯ ಮರಳಿನ ಮೇಲೆ ಬರೆದ ಅಕ್ಷರವನ್ನು ಅಳಿಸುವ ಅಲೆಯಂತೆ ಅವನ ದೇಹದ ತುಂಬಿ ತುಂಬಿಕೊಂಡಿದ್ದ ಪ್ರಾಯದ ಅಲೆ ಶ್ರೀನಿವಾಸನ್ ನಿರ್ಧಾರವನ್ನು ತೊಡೆದು ಹಾಕಿತು.
ಶ್ರೀನಿವಾಸನು ಮುಂದೆ ತನ್ನ ಜೀವನದಲ್ಲಿ ಎರಡನೇ ಮದುವೆ ಆದನೊ ಅಥವಾ ಇಲ್ಲ ಎಂಬುದು ಈ ಕಾದಂಬರಿ ಪೂರ್ತಿ ಓದಿದರೆ ಅರ್ಥವಾಗುತ್ತದೆ.
☘ಪುತ್ರಕಾಮಿ ☘
ಈ ಕಾದಂಬರಿಯಲ್ಲಿ ಸಂಪ್ರದಾಯಸ್ಥರಾಗಿದ್ದ ಶ್ರೀಮಂತ ತಂದೆ ತಾಯಿಗಳಿಗೆ ಒಬ್ಬನೇ ಮಗನಾಗಿದ್ದ.
ನಾಗೇಂದ್ರ ಬಿಕಾಂ ಕೊನೆಯ ಹಂತದ ಪರೀಕ್ಷೆಯಲ್ಲಿ ಅನುತ್ತೀರ್ಣನಾದಾಗ ವಿದ್ಯೆಯ ಗೆಲುವನ್ನು ಬದಿಗೊತ್ತಿ ವ್ಯಾಪಾರದ ಬಲವನ್ನು ಮನಸ್ಸಿಗೆ ಅಂಟಿಸಿಕೊಂಡನು.
ನಾಗೇಂದ್ರ ಚಿಕ್ಕವನಾಗಿದ್ದಾಗ ತಂದೆಯನ್ನು ಕಳೆದುಕೊಂಡಿದ್ದ, ನಾಗೇಂದ್ರನಿಗೆ ತನಗೆ ಹಿರಿಯವರೊಬ್ಬರಾಗಿ ಇದ್ದ ತಾಯಿ ಸುಬ್ಬಮ್ಮ ನವರ ಮನವೊಲಿಸಿಕೊಳ್ಳುವುದು ಈ ವಿಷಯದಲ್ಲಿ ಹೆಚ್ಚೇನು ನಾಗೇಂದ್ರನಿಗೆ ಕಷ್ಟವಾಗಲಿಲ್ಲ.
ನಂತರ ನಾಗೇಂದ್ರನು ಕಡಿಮೆ ಬಂಡವಾಳದಲ್ಲಿ ಚಿಕ್ಕದಾಗಿ ಮಂಗಳೂರಿನಲ್ಲಿ ಪ್ರಾರಂಭ ಮಾಡಿದ ಮೈಸೋಪು ತಯಾರಿಕೆಯ ಉದ್ಯಮ ನಾಲ್ಕಾರು ವರ್ಷಗಳಲ್ಲಿ ನೂರಾರು ಕಾರ್ಮಿಕರಿಗೆ ಅನ್ನ ಕೊಡುವಂತಾಯಿತಲ್ಲದೆ ನಾಗೇಂದ್ರ ನ ಶ್ರೀಮಂತಿಕೆ ಹಾಗೂ ಅವನ ವ್ಯಕ್ತಿತ್ವವನ್ನು ಅಭಿವೃದ್ಧಿಗೊಳಿಸಿತು. ನಾಗೇಂದ್ರ ಕೇವಲ ಅವನ ಮಟ್ಟಿಗೆ ಅವನಾಗದೆ ಮೈಸೋಪು ಕಾರ್ಖಾನೆಯ ಮಾಲೀಕನಾದಾಗ ಮನೆತನದಿಂದ ಮೈಗೂಡಿ ಬಂದ ಸ್ವಭಾವವು ಅಥವಾ ದುಡಿಮೆಯ ಫಲದಿಂದ ನೀಡಿದ ಧರ್ಮ ಬುದ್ಧಿಯೋ ಎಂಬಂತೆ ಅಷ್ಟೇ ಉದಾರನು ಆದ… ಮಕ್ಕಳ ಅನಾಥಾಶ್ರಮ, ಅಂಗವಿಕಲರ ಸಂಘ ಸಂಸ್ಥೆಗಳು, ಮಹಿಳೆಯರ ಅಬಲಾಶ್ರಮಗಳಲ್ಲಿ ನಾಗೇಂದ್ರನ ಹೆಸರು ಮೊದಲ ಸಾಲಿನಲ್ಲಿ ಇರ ತೊಡಗಿತು.
ಇದರಿಂದ ನಾಗೇಂದ್ರನ ತಾಯಿ ಸುಬ್ಬಮ್ಮನವರಿಗೆ ತುಂಬಾ ಸಂತೋಷವಾಗಿತ್ತು. ದಿನಕ್ಕೊಂದು ಹೆಣ್ಣಿನ ಜಾತಕ ತಮ್ಮೊಂದಿಗೆ ಬರತದ ವೈಯಕ್ತಿಕ ಅನುಗುಣವಾಗಿ ಮಗನ ಒಂಟಿ ಬಾಳಿಗೆ ಮಂಗಳ ಹಾಡಿ ಜಂಟಿ ಹಾಕುವ ಆಲೋಚನೆ ಸುಬ್ಬಮ್ಮನವರ ಅಂತರಂಗದಲ್ಲಿ ಬರ ತೊಡಗಿತ್ತು.
ಸುಬ್ಬಮ್ಮ ಈ ಮಾತನ್ನ ತನ್ನ ಮಗ ನಾಗೇಂದ್ರನು ಊರಿನಿಂದ ಬರುವ ದಾರಿಯನ್ನೆ ಕಾಯುತ್ತಿದ್ದಳು ಏಕೆಂದರೆ ಈ ಮದುವೆ ವಿಷಯವನ್ನು ಪ್ರಸ್ತಾಪ ಮಾಡಲು.
ಈ ಕಥೆಯಲ್ಲಿ ಮುಂದೆ ನಾಗೇಂದ್ರನ ಮನೆಗೆ ಬಂದಾಗ ಏನಾಯಿತು ಮತ್ತು ಎಷ್ಟೊಂದು ಬದಲಾವಣೆ ತಂದಿತು ಜೊತೆಗೆ ಮುಂದಿನ ಭವಿಷ್ಯ ತಿಳಿಯಲು ಈ ಕಾದಂಬರಿಯನ್ನು ಓದಲೇಬೇಕು.
☘ದೇವಮಂದಿರ ಪ್ರೇಮಸಾಗರ☘
ಈ ದೇವಮಂದಿರ ಪ್ರೇಮಸಾಗರದಲ್ಲಿ ಎಂಟು ಭಾಗಗಳಾಗಿ ಕಥೆಗಳನ್ನು ಬರೆದಿದ್ದಾರೆ.
ಈ ಕಾದಂಬರಿಯಲ್ಲಿ ಅರ್ಚನಾ ಎನ್ನುವವಳು ಸಿನಿಮಾನಟಿ. ಆಕೆ ತನ್ನ ಬದುಕಿನಲ್ಲಿ ಹೇಗೆ ತನ್ನ ವೃತ್ತಿಯ ಜೊತೆಗೆ ತನ್ನ ಪ್ರೇಮವನ್ನು ಸಾಕಾರಗೊಳಿ ಸಿದಳು ಎಂಬುದು ಈ ಕಾದಂಬರಿಯಲ್ಲಿ ವ್ಯಕ್ತವಾಗಿದೆ.
ಈಕೆ ವಯಸ್ಸಿನಲ್ಲಿ ಚಿಕ್ಕವಳಾಗಿದ್ದರು ಹಿ ರಿಯ ವ್ಯಕ್ತಿಯನ್ನು ಮದುವೆಯಾಗುತ್ತಾಳೆ ಅದು ಕೂಡ ಅವನ ಚರ್ಮವು (ತನ್ನು )ಬಿಳಿ ಚರ್ಮ ತನ್ನಿಂದ ಕೂಡಿರುತ್ತೆ.
ಈತನ ಮಗನೇ ಸಂದೀಪ್ ಎಂಬವನು ನಟ ಅರ್ಚನಾಳನ್ನು ತುಂಬಾ ಇಷ್ಟಪಟ್ಟಿರುತ್ತಾನೆ.ಆದರೆ ತನ್ನ ತಂದೆಯ ಸಹಾಯ ಮಾಡಿದ ಕಾರಣದಿಂದ ಅವನನ್ನೇ ಮದುವೆಯಾಗಲು ಅರ್ಚನ ಇಷ್ಟಪಡುತ್ತಾಳೆ.
ಇವರಿಬ್ಬರ ಸಂಭಾಷಣೆಯನ್ನು ಪುಸ್ತಕದಲ್ಲಿ ಹೇಗೆ ಇದೆ ಎಂಬುದು ನಿಮಗೆ ಹೇಳುತ್ತಿದ್ದೇನೆ.
ನೀವು ನನ್ನೊಂದಿಗೆ ಆಡ್ತಾ ಇದ್ದ ಮಾತು ವರ್ತನೆ ಪ್ರೀತಿ ವಿಶ್ವಾಸಗಳನ್ನು ಗಮನಿಸಿದಾಗ ನನ್ನನ್ನೇ ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕೆನ್ನು ಆಸೆ ಇದೆ ಅಂತ ತಿಳಿದೆ. ನನ್ನ ಬಾಳಿಗೆ ತಿರುಗು ಕೊಟ್ಟ ನಿಮಗೆ ವಂಚಿಸುವುದು ಸರಿಯಲ್ಲ ಅಂತ ತಿಳಿದು ಒಂದು ತೀರ್ಮಾನಕ್ಕೆ ಬಂದು ಮುಂದೆ ನೀವು ನನ್ನನ್ನು ಕೇಳಬಹುದು ಹಾಗೂ ಯಾವ ಕಾರಣಕ್ಕೂ ನಿಮ್ಮಿಂದ ನನ್ನ ಮನಸ್ಸು ಚಂಚಲವಾಗದೆ ಇರಲಿ ಅಂತ ನನ್ನ ಹೃದಯ ಮಂದಿರದಲ್ಲಿ ನಿಮ್ಮನ್ನ ನೆಲೆ ಮಾಡಿಕೊಂಡೆ. ಅದೇ ರೀತಿ ನನ್ನ ಚಿತ್ರಗಳಲ್ಲಿ ನನ್ನ ಜೊತೆ ನಾಟಕವಾಡೋ ಸಂದೀಪ ಬಗ್ಗೆ ಪುತ್ರ ವಾತ್ಸಲ್ಯ ಬೆಳೆಸಿಕೊಂಡೆ. ಈಗ ಹೇಳಿ ನಾನು ಏನು ಮಾಡಬೇಕು ಅಂತೀರಾ…..
ಅಲ್ಲೇ ಇದ್ದ ಸಂದೀಪ್ ವ್ಯತಥನಾಗಿ ನುಡಿದ.
ಛೇ!ಎಂತಹ ಕೆಲಸ ಮಾಡಿಬಿಟ್ಟೆ ಅರ್ಚನಾ. ಹೋಗಿ ಹೋಗಿ ನಮ್ಮಪ್ಪನ ಮದುವೆ ಮಾಡಿಕೊಳ್ಳುತ್ತೀಯಲ್ಲ ಏನು ಹೇಳಲಿ ನಿನಗೆ?? ಅವರ ಮೈಯಲ್ಲಿತೊ ನ್ನು ಕೂಡ ಇದೆ. ನಿನ್ನ ವಯಸ್ಸೇನು?ಇವರ ವಯಸ್ಸೇನು? ಮುಂದೆ ನಿನ್ನ ಭವಿಷ್ಯ ಏನಾಗುತ್ತದೆ ಅಂತ ತಿಳಿದಿದ್ದಿ!.
ಹೀಗೆ ಈ ಕಾದಂಬರಿಯಲ್ಲಿ ಸುಂದರವಾಗಿ ಕಥೆ ಹೆಣೆದಿದ್ದಾರೆ.
ಧನ್ಯವಾದಗಳು
ಸವಿತಾ ಮುದ್ಗಲ್
ಗಂಗಾವತಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.
ಧನ್ಯವಾದಗಳು ಸರ್, ನಮ್ಮ ಎಲ್ಲ ಬರಹಗಳನ್ನು ಪ್ರಕಟಿಸಿ ನಮಗೆ ಪ್ರೋತ್ಸಾಹ ನೀಡುವ ಸಾಹಿತ್ಯ ಸೇವೆಗೆ ಧನ್ಯವಾದಗಳು 🙏🏻💐🎉
ಧನ್ಯವಾದಗಳು 🙏🏻