You are currently viewing ಕಾವ್ಯಲತೆ

ಕಾವ್ಯಲತೆ

ಕವನ ಸಂಕಲನ.
ಲತಾ ಕೆ ಎಸ್ ಹೆಗಡೆ
ಬೆಂಗಳೂರು.
ಪ್ರಕಾಶನ :ಎಚ್ ಎಸ್ ಆರ್ ಎ ಪ್ರಕಾಶನ, ಬೆಂಗಳೂರು
ಮೊಬೈಲ್ ಸಂಖ್ಯೆ :8123231935

ಭಾವದಲೆಗಳ ನರ್ತನಕೆ
ಪದಗಳಲರಳಿದೆ ಚಿತ್ತಾರ ನಾಡದೇವಿಯ ಮಂದಿರಕೆ
ಕಾವ್ಯಲತೆಯ ನಮಸ್ಕಾರ

ಮೂಲತಃ ಇವರು ದಕ್ಷಿಣ ಕನ್ನಡ ದವರಾದ ಕೆ ಶಾಮ್ರಾವ್ ಮತ್ತು ಪ್ರೇಮ ದಂಪತಿಗಳ ಕಿರಿಯ ಮಗಳಾಗಿದ್ದು, ಇವರು ವಕೀಲ ವೃತ್ತಿಯ ಜೊತೆಗೆ ಕನ್ನಡ ಸಾಹಿತ್ಯದಲಿ ಕೂಡ ತಮ್ಮ ಹೆಜ್ಜೆಯನ್ನು ಈ ಸುಂದರ ಕಾವ್ಯಲತೆಯೊಂದಿಗೆ ನಮ್ಮೆಲ್ಲರಿಗೂ ವಿವಿಧ ಕಾವ್ಯಗಳಿಂದ ತಂಬೆರೆಲು ಸೂಸಿದ್ದಾರೆ.

ಸುಗಂಧ ಪುಷ್ಪಗಳ ಬಯಸಲಿಲ್ಲ
ಪಂಚ ಭಕ್ಷಗಳನ್ನು ಶಿವ ಕೇಳಲಿಲ್ಲ
ವಜ್ರಭೂಷಣಗಳ ಬೇಡಿಕೆ ಇಲ್ಲ
ನಿತ್ಯ ಜಲಾಭಿಷೇಕ ಸಾಕೆನ್ನುವವನಲ್ಲ.

ಎಂಬ ಸಾಲುಗಳು ಶಿವ ಬಾಹ್ಯ ಆಡಂಬರಕ್ಕಿಂತ ಭಕ್ತಿಯನ್ನು ಮೆಚ್ಚುವನೆಂದು ಸಾರುತ್ತದೆ. ತೈತರಿಯ ಉಪನಿಷತ್ತಿನ ವಾಕ್ಯಗಳಾದ ಮಾತೃದೇವೋಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎಂಬುದು ಸಾರ್ವಕಾಲಿಕ ಸತ್ಯ ಸಂದೇಶಗಳನ್ನು ಇದಕ್ಕಅನುಗುಣವಾಗಿ ತಾಯಿಯ ಹಿರಿಮೆ ತಂದೆಯ ಗರಿಮೆ ಹಾಗೂ ಗುರುವಿನ ಮಹಿಮೆಯ ಕಂಪು ಸೂಸುವ ಕವನ ಕುಸುಮಗಳು ಇಲ್ಲಿವೆ ನಮ್ಮ ಬಾಳನ್ನು ರೂಪಿಸುವಲ್ಲಿ ಈ ಮೂವರ ಪಾತ್ರ ಎಲ್ಲರಿಗಿಂತಲೂ ಹಿರಿದು ಇದನ್ನು ಸ್ಮರಿಸುವುದು ಎಲ್ಲರ ಕರ್ತವ್ಯವು ಹೌದು ಈ ಕೆಲಸವನ್ನು ಕವಯಿತ್ರಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಪದ್ಮನಾಭ ಡಿ ಸಾಹಿತಿಗಳು ಇದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ.

ಕವಿವಾಣಿಯಂತೆ ಕನ್ನಡ ಉಳಿಸಿ ಎಂದು ಹೇಳಿದರೆ ಸಾಲದು ನಿತ್ಯವೂ ಬಳಸಿ ಬಳಸಬೇಕು ಹಾಗೆಯೇ ಈ ಕನ್ನಡ ಭಾಷೆ ಹಾಗೂ ಪರಿಸರವನ್ನು ಹಾಳು ಮಾಡದೆ ನಿರಂತರ ಕನ್ನಡದ ಕೃಷಿ ಮಾಡುತ್ತಾ ನಾಡು ನುಡಿಯನ್ನು ಗೌರವಿಸಬೇಕು ಆ ದಿಕ್ಕಿನಲ್ಲಿ ಸಾಗುತ್ತಿರುವ ಹಲವು ಕವಿವರ್ಯರು ಬರೆಯಲು ಸಾಹಿತಿಗಳ ನಡುವೆ ನಮಗೆ ಕಾಣಿಸಿಕ್ಕದ್ದು ಶ್ರೀಮತಿ ಲತಾ ಕೆಎಸ್ ಹೆಗಡೆ ಎಂದು ಸಾಹಿತಿಗಳಾದ ಹರಿ ನರಸಿಂಹ ಉಪಾಧ್ಯಾಯ ಸಂಬೂರು ಬಂಡವಾಳ ತಾಲೂಕಿನವರು ಬೆನ್ನುಡಿಯನ್ನು ಬರೆದಿದ್ದಾರೆ.

ಕಾವ್ಯಲತೆ ಸಂಕಲನದಲ್ಲಿ ಒಟ್ಟು 76 ಕವನಗಳು ಕೂಡಿವೆ. ಇದರಲ್ಲಿ ದೇವರ ಕವನಗಳು,ಪ್ರಕೃತಿ,ರಾಜಕೀಯ, ಮಹಿಳೆ ಹೀಗೆ ಹಲವು ವಿವಿಧ ಆಯಾಮಗಳಿಗೂ ಸಂಬಂದಿಸಿದ ಕವನಗಳು ಪ್ರಕಟವಾಗಿವೆ.

ಮೊದಲನೇ ಕವನ ವಿಘ್ನ ವಿನಾಶಕ ಗಣಪತಿಗೆ ಸಂಬಂಧಿಸಿದಂತೆ,ನಂತರ ಅಮ್ಮ ಮತ್ತು ತಂದೆ ಕವನಗಳು ತುಂಬಾ ಭಾವಪೂರ್ಣವಾಗಿ ಬರೆದಿದ್ದಾರೆ.

ಸ್ವಾಭಿಮಾನದ ಸಾರಥಿ ಅಮ್ಮನವಳು,ಸಂಸಾರ ರಥದ ಕಣ್ಣಾಗಿಹಳು, ಶಿಸ್ತಿನಲ್ಲಿ ಸೇನೆಯ ಸಿಪಾಯಿ ಇವಳು,ಪ್ರೀತಿಯಲ್ಲಿ ಮುತ್ತ ನಿಟ್ಟವಳು ಇದು ತಾಯಿಗಾಗಿ ಇದ್ದರೆ, ಗುರಿಯನ್ನು ತೋರುವ ಗುರುವಾಗಿ ನೀನು,ನಿನ್ನ ಸರಿಯ ಹೆಮ್ಮೆಯ ರಕ್ಷೆಯಲ್ಲಿ ನಾನು,ಅಭಿಮಾನದ ಅಕ್ಕರೆಗೆ ಸುರಿದಂತೆ ಜೇನು ಅಪ್ಪ ಎಂದು ಬಿಗಿದಪ್ಪಲು ಸಂಭ್ರಮವೇನು ಎನ್ನುತ್ತಾ ತಂದೆಗಾಗಿ ಬರೆದ ಸಾಲುಗಳು ಮನಸೆಳೆಯುತ್ತೆ.

ಇನ್ನು ಉಳಿದಂತೆ ಕನ್ನಡ ಭಾಷೆ ಉಳಿವಿಗಾಗಿ ಬರೆದ ಕವನಗಳು ಕನ್ನಡಿಗರು ನಾವು ಕನ್ನಡಿಗರು, ನಾವೆಲ್ಲರೂ ಒಂದೇ ಮತ್ತು ನಮ್ಮ ಭಾರತೀಯರ ಹಬ್ಬಗಳಿಗೆ ಸಂಬಂಧಿಸಿದ ಗೌರಿ ಹಬ್ಬದ ಸಂಭ್ರಮ, ಸಂಕ್ರಾಂತಿ, ನಿಜದಿ ದೀಪಾವಳಿ, ಹೊಂಬೆಳಕು,ದೇವರಾರು ಹೆಣ್ಣಿನ ಬಾಳು,ನಿವೇದನೆ ಹೀಗೆ ಹಲವು ಕವನಗಳು ತುಂಬಾ ಸೊಗಸಾಗಿ ಬರೆದಿದ್ದಾರೆ.
ಅವರಿಂದ ಇನ್ನಷ್ಟು ಕೃತಿಗಳು ಬರಲೆಂದು ಹಾರೈಸುವೆ.

ಸವಿತಾ ಮುದ್ಗಲ್
ಗಂಗಾವತಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.




This Post Has 2 Comments

  1. ಲತಾ ಕೆ.ಎಸ್.ಹೆಗಡೆ

    ಚೆಂದದ ಕೃತಿ ಪರಿಚಯ. ಧನ್ಯವಾದಗಳು🙏🏻💐

    1. admin kbp

      ಧನ್ಯವಾದಗಳು 🙏🏻

Comments are closed.