You are currently viewing ಕಾವ್ಯ ಕಲ್ಪವಲ್ಲರಿ

ಕಾವ್ಯ ಕಲ್ಪವಲ್ಲರಿ

ಸತ್ತು ಸತ್ತವರು ಹಲವಾರು ಮನುಜರಯ್ಯ.
ಇದ್ದು ಸತ್ತವರು ಕೆಲವರು ಕುಲಜರಯ್ಯ.
ಸತ್ತು ಬದುಕಿದವರು ನಮ್ಮ ಶರಣ ಸಂತರಯ್ಯ.
ನಾವು ಸತ್ತರೂ ನಮ್ಮ ಭಾವನೆಗಳು ಬದುಕಬೇಕೆಂಬ ಆಸೆ ಪಟ್ಟವರು ಬರಹಗಾರರಯ್ಯ ಗುರುಸಿದ್ಧ ಬೊಮ್ಮಲಿಂಗೇಶ್ವರ..

ಎನ್ನ ಒಂದು ವಚನಾಮೃತವನ್ನು ನೆನೆಸಿಕೊಳ್ಳುತ್ತಾ.

ಈ ಸಂಕಲನದಲ್ಲಿರುವ ಕೆಲವು ಅಂಶಗಳನ್ನು ನಿಮ್ಮ ಮುಂದೆ ಬಿಚ್ಚಿಡುತ್ತಾ ಹೋಗುತ್ತೇನೆ.
ವೃತ್ತಿಯಿಂದ ಹೊಟ್ಟೆ ತುಂಬಿದರೆ ಪ್ರವೃತ್ತಿಯಿಂದ ಮನಸ್ಸು ತುಂಬುತ್ತದೆ ಎಂಬುವ ಮಾತು ಸತ್ಯವಾಗಿದೆ. ನಮ್ಮ ಸಹೋದರರಾದ ಕೊಟ್ರೇಶ್ ಜವಳಿ ಸರ್ ಅವರು ಬರೆದಿರುವ ಕಾವ್ಯ ಕಲ್ಪವಲ್ಲರಿ ಎಂಬ ಕವನ ಸಂಕಲನ ಮೊದಲನೆಯದಾಗಿ ಹೊರತಂದಿದ್ದಾರೆ.

ಇದಷ್ಟೇ ಅಲ್ಲದೆ ಅವರು ದಿನಚರಿಯ ಊಟದಂತೆ ಹಲವಾರು ಹನಿ ಗವಿತೆಗಳು ತತ್ವಪದಗಳು ಹಾಸ್ಯ ಚಟಾಕಿಗಳು ಹೀಗೆ ಹತ್ತು ಹಲವಾರು ಪ್ರಕಾರದ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಅವರ ಬರಹದಲ್ಲಿ ಒಂದು ಗತ್ತು ಮತ್ತು ಗಮ್ಮತ್ತು ತುಂಬಿರುತ್ತದೆ ಎಂದು ಹೇಳಲು ನಾನು ಇಷ್ಟಪಡುತ್ತೇನೆ.

ಬರಹವೆಂದರೆ ಬರಿ ಒಂದಕ್ಕೆ ಮಾತ್ರ ಸೀಮಿತವಾಗಿರದೆ ಹತ್ತು ಹಲವಾರು ನವರಸಗಳನ್ನು ತುಂಬಿರಬೇಕು ಎನ್ನುವದು ಸಹೋದರರ ಬರಹವನ್ನು ನೋಡಿದ ಮೇಲೆ ತಿಳಿದು ಬರುತ್ತದೆ. ತುಂಬಾ ಕ್ರಿಯಾಶೀಲತೆಯಿಂದ ಬರಹದ ಕಾರ್ಯವೈಖರಿಯನ್ನು ಮೈಗೂಡಿಸಿಕೊಂಡಿದ್ದಾರೆ.

ಸಹೋದರರು ಬರೆದಿರುವ ದ್ರೌಪದಿ ಶೀರ್ಷಿಕೆಯನ್ನು ಒಳಗೊಂಡ ಕವಿತೆಯು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಹೆಣ್ಣಿನ ಅರ್ಥನಾದ ಅಳಲನ್ನು ಅಕ್ಷರಕ್ಷರ ಸಹ ಸರವಾಗಿ ಪೋಣಿಸಿದಂತೆ ಸಹೋದರರಿಗೆ ಹೆಣ್ಣಿನ ಮೇಲೆ ಇರುವ ಅಂತ ಕರಣ ಇಲ್ಲಿ ನಾವು ಕಾಣಬಹುದು.

ಭವದ ಸಂತೆ ನಾ ಬರಬಾರದಿತ್ತು ಈ ಊರಿಗೆ ಬದುಕೊಂದು ಬಂಡಿ ಕಲಾವಿದ ಕಮ್ಮಾರ ಎಂಬ ಕವಿತೆಗಳು ಸಂಪೂರ್ಣವಾಗಿ ತತ್ವಪದವನ್ನು ಹೋಲುತ್ತದೆ ಬದುಕಿನ ಸತ್ಯ ದರ್ಶನ ನಿದರ್ಶನಗಳನ್ನು ಇದರಲ್ಲಿ ಅಡಕವಾಗಿಸಿದ್ದಾರೆ.

ಸಹೋದರರು ಬರೆದಿರುವ ಎಲ್ಲಾ ಕವಿತೆಗಳನ್ನು ನಾನು ಓದಿದ್ದೇನೆ ಕವಿಯು ತನ್ನ ಮನದ ಬಾಲ್ಯದ ಭಾವನೆಗಳ ಬುತ್ತಿಯನ್ನು ಬಿಚ್ಚಿ ಉಣಬಡಿಸಿದ್ದಾರೆ. ಹೇಗೆ ನದಿಯ ನೀರು ತನಗೆ ಇಷ್ಟ ಬಂದ ಕಡೆ ಕಡಿವಾಣವಿಲ್ಲದೆ ಹರಿಯುತ್ತಾ ಹೋಗುತ್ತಿದೆಯೋ ಹಾಗೆ ಕವಿಯು ತನ್ನ ಭಾವನೆಗಳನ್ನು ಬಿತ್ತರಿಸುತ್ತಾ ಹೋಗುತ್ತಾನೆ. ಇಲ್ಲಿ ಯಾರು ಸಾಹಿತ್ಯವನ್ನು ಸಂಪೂರ್ಣವಾಗಿ ಅರೆದು ಕುಡಿದವರಲ್ಲ ಕಲಿಯುತ್ತಾ ಕಲಿಸುತ್ತಾ ಬೆಳೆಯುತ್ತಾ ಬೆಳೆಸುತ್ತಾ ಹೋಗಬೇಕಾಗಿದೆ ಅಷ್ಟೇ.. ನನಗೆ ಅನಿಸಿರುವ ಒಂದೆರಡು ಸಾಲುಗಳನ್ನ ಬರೆದಿರುವೆ ತಪ್ಪುಗಳನ್ನಾದರೆ ದಯವಿಟ್ಟು ಮನ್ನಿಸಿ ನಿಮ್ಮ ಮನೆಯ ಮಗಳೆಂದು.. ಇಂತಿ ನಿಮ್ಮ ಸಹೋದರಿ..

ಶಿವಲೀಲಾ ಧನ್ನಾ
ಜಿಲ್ಲಾ :-ಕಲ್ಬುರ್ಗಿ. ಕಲ್ಯಾಣ ಕರ್ನಾಟಕ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



Leave a Reply