You are currently viewing ಕಾವ್ಯ ಬಸವಣ್ಣ

ಕಾವ್ಯ ಬಸವಣ್ಣ

ಹಾನೆರಡನೇ ಶತಮಾನದ ಬೆಳಕು
ಉದಯ, ಮಾದರಸ ಮಾದಲಾಂ
ಬಿಕೆ ಸುಪುತ್ರ ಲೋಕದ ಡೊಂಕು
ಕೊಂಕು ಅಳಿಸಿದವನು

ಬಾಲ್ಯದ ದಿಂದ ಸಮಾಜ ವಾದಿ
ದ್ವಿಜ ಶಾಸ್ತ್ರ ದಿಕ್ಕರಿಸಿ ಧೀರನಾದೆ.
ಮನೆ ತೊರೆದು, ಲೋಕ ಸಂಚಾರ ಮಾಡಿದೆ
ಅರಿವು ಹುಡುಕುತ್ತ ಹೋದೆ

ಜಾತಿ ಧರ್ಮ ಬೀಜ ಕಿತ್ತು ಒಗದೆ
ಅಂತರ್ಜಾತಿ ವಿವಾಹ, ಭೋಜನ ಮಾಡಿದೆ
ನುಡಿದಂತೆ ನೆಡೆ ಹೇಳಿದೆ ಅನ್ನ
ಅಕ್ಷರ ಅಧ್ಯಾತ್ಮ ದಾಸೋಹ ಮಾಡಿದೆ

ಅನುಭವ ಮಂಟಪ ಸ್ಥಾಪಿಸಿದೆ.
ಅಕ್ಕ ಅಲ್ಲಮ ಚೆನ್ನ ಬಸವ ಸತ್ಯಕ್ಕ
ಮೋಳಿಗೆ ಮಾರ್ ಐಹ ಜೊತೆ
ಸಂವಾದ ಚರ್ಚೆ ನೆಡ್ಸಿದೆ

ವಚನ ಅಮೃತ ಸಾಗರ ಉಂನಿಸಿದೆ
ದಯವೇ ಧರ್ಮ ಮೂಲ ವೆಂದೆ
ಕಾಲೆ ಕಂಬ ಎಂದೇ ದೇಹವೇ ದೇಗುಲ
ಸಾರಿದೆ, ಆತ್ಮ ಲಿಂಗ ಪೂಜಿಸಿದೆ

ಸಮಾಜ, ಧಾರ್ಮಿಕ, ರಾಜಕೀಯ,
ಸುಧಾರಣೆ ನೀ ತಂದೆ ಬಸವಣ್ಣ
ಕಲ್ಯಾಣ ಕ್ರಾಂತಿ ನಾಂದಿ ಹಾಡಿದೆ
ಕೂಡಲಸಂಗಮ ಐಕ್ಯ ವಾದೆ

ಶತಮಾನಸಂದರು ನೀ ಪ್ರಸ್ತುತ
ಆರದ ನಂದಾ ದೀಪ ನೀ ಆದೆ
ಶರಣ ಭಕ್ತರ ಪಾಲಿಗೆ ದೀವಿಗೆ
ಅನಂತ ಕೋಟಿ ನಮನಗಳು

ಪ್ರೀತಿ ಭರತ್ ಜವಳಿ
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.