You are currently viewing ಕರ್ನಾಟಕ ರಾಜರತ್ನ

ಕರ್ನಾಟಕ ರಾಜರತ್ನ

ರಂಗಿನ ಚಿತ್ತಾರದೊಳಗೆ ಬಾಲ ಹೆಜ್ಜೆ ಯಿಟ್ಟವರು
ಮಹಾಶೂರರಂತೆ ಧೀರರಂತೆ ಬೊಬ್ಬಿರಿದು
ಆಬ್ಬರಿಸಿ ತ್ಯಾಗದ ಧೀಮಾಕು ತೋರಿಸುವ
ಢೋಂಗಿ ನಟರೆಲ್ಲರಿಗೆ ಆದರ್ಶವಾಗಬೇಕಾದವರು ರಾಜ್

ಅಧಿಕಾರವೆಂಬುದು ಅರಸಿ ಹಾಸಿಗೆ ಹಾಸಿದರೂ
ನಯವಾಗಿ ಮಾತಿನಲ್ಲಿಯೇ ದೂರ ಸರಿಸಿ
ನಾನು ಕಲ್ಲುಸಕ್ಕರೆ ಯೆಂಬುದನು ತಿಳಿಸಿ
ಸರ್ವರಿಗೆ ಅಪ್ಯಾಯಮಾನವಾದ
ಮಾಣಿಕ್ಯ ರಾಜ್

ಬಾವುಟ ಬೀಸಿ ಬೊಬ್ಬಿರಿಯುವ
ಕನ್ನಡ ಉಳಿವೇ ನನ್ನ ಜೀವನವೆಂದು
ಹಾರಾಡಿ ಹೋರಾಡುವ ನವೆಂಬರ್ ಕನ್ನಡಿಗರಿಗೆ
ಮೌನವಾಗಿ ಚಳುವಳಿ ಮಾಡಿ ಕನ್ನಡದ ಪ್ರತೀಕವಾದವರು ರಾಜ್

ಸ್ವಯಂಘೋಷಿತ ಸಂಘಗಳ ಮೂಲಕ
ಕಾದಾಟ ಹೆಚ್ಚಿಸಿ ಹೆಸರು ಮಾಡುವ ನಿರ್ಮಾಪಕರಿಗೆ ಮೋಸ ಮಾಡುವ
ಮಸಲತ್ತಿನ ಮಂದಿಯೊಳಗೆ ಮುತ್ತಾಗಿ
ಉಳಿದವರು ರಾಜ್

ಅಕ್ಕರದ ಸುಲಲಿತ ಮಂಜುಳ ಧ್ವನಿಯ
ನೋವುಂಡೆ ನಗೆಯ ಹೂ ಚೆಲ್ಲಿದ
ಕಲೆಗೆ ನೆಲೆ ಬೆಲೆಯನು ತೋರಿಸಿ
ಕನ್ನಡನಾಡಿನ ಗೌರವ ಹೆಚ್ಚಿಸಿದ ಕರ್ನಾಟಕ ರಾಜರತ್ನ

ಡಾ. ನಾಹೀರಾ
ಕುಷ್ಟಗಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.