ಭರ್ರನೆ ಬಿರುಗಾಳಿಗೆ ಮುರಿದು ಬಿದ್ದವು ಕಂಡ ಅಸಂಖ್ಯಕನಸು
ಸುಂಟರಗಾಳಿಗೆ ಹಾರಿ ಹೋದವು ಮನಸ್ಸಿನ ಅಸಂಖ್ಯ ಕನಸು.
ವಿಷದ ಹಾವುಗಳು ಅಡ್ಡಡ್ಡ ಹರಿದಾಡುತ್ತಿವೆ ಕಾಲ ದಾರಿಯಲ್ಲಿ
ದ್ವೇಷದಲ್ಲಿ ಹಲ್ಲು ಮುರಿಯುತ್ತಾ ಕೈ ಹಿಸುಕಿ ಸುಟ್ಟರು ಅಸಂಖ್ಯ ಕನಸು.
ನೆಮ್ಮದಿಯ ನೆರಳಿಗೆ ಹೋಗಿ ನಿಲ್ಲಲು ಬಿಡುತ್ತಿಲ್ಲ ಈ ಜನರು
ಹಿಂದಿನಿಂದ ಕೂಗು ಹಾಕಿ ಮನಸ್ತಾಪಕ್ಕೆ ಶಾಪವಾದವು ಅಸಂಖ್ಯಕನಸು.
ನಲಿವಿಲ್ಲದ ನಿತ್ಯ ನರಳಾಟದ ಪಾಪ ಹೊತ್ತ ದುಷ್ಟ ಕ್ರೂರ ಪಾಪಿಷ್ಠ ನಾನು
ಗೆಲುವಿಲ್ಲದ ಜೀವನದಲ್ಲಿ ಜೊತೆಯಿಲ್ಲದೆ ಮುಳುಗಿದವು ಅಸಂಖ್ಯ ಕನಸು.
ಪಂಚಭೂತದಲ್ಲಿ ಪಂಚರಂಗಿಯಾಟದ ವಿಧಿ ಕೂಟಕ್ಕೆ ಸಿಲುಕಿದವನು
ಶತೃ ಕಾಟಕ್ಕೆ ನಲುಗಿದ ನತದೃಷ್ಟಕ್ಕೆ ಕುಗ್ಗಿಹೋದ ಕಾಂತನ ಅಸಂಖ್ಯ ಕನಸು.
ಶ್ರೀಕಾಂತಯ್ಯ ಮಠ
ಲಿಂಗಸೂಗುರು ರಾಯಚೂರು ಜಿಲ್ಲೆ