ನಾನೊಂದು ಕವಿತೆ ಬರೆಯಲು ಏಕಾಂಗಿಯಾಗಿ
ಹೊರಟೆ ಎತ್ತ ನೋಡಿದರೂ ಮತ್ಸರ
ಕೋಪ ಜಗಳ ಸಮರಗಳೇ ಕಂಡವು
ಏಕಾಂತ ಪರಿಸರ ಹುಡುಕಲು ಬಹುದೂರ
ಸಾಗಬೇಕಿದೆ ನಡೆಯಲು ಕಾಲು ಸೋತಿವೆಯಲ್ಲ
ಕವಿಯಾಗದೆ ಹಿಂದಿರುಗಲು ಮನಸ್ಸಿಲ್ಲ
ಇಲ್ಲೇ ಜನಜಂಗುಳಿಯಲ್ಲಿ ಉಳಿದರೆ
ಆ ಮತ್ಸರದ ರಾಡಿಗೆ ಬೀಳಬೇಕು
ನನ್ನ ಕವಿತೆಯು ರಾಡಿ ಆದಿತು ಎಂದು ಸುಮ್ಮನಾದೆ
ಒಂದೊಮ್ಮೆ ಮನಸಾದಾಗಲೆಲ್ಲ ನಿದ್ದೆಯಲ್ಲೂ
ಎದ್ದು ಗೀಚುತ್ತಿದ್ದೆ ಬೆಳಿಗ್ಗೆ ಎದ್ದು ನೋಡಿದರೆ
ಕವಿತೆ ಕಾಣದೆ ಹುಡುಕಾಡುತ್ತಿದ್ದೆ
ಕನಸಿನಲ್ಲಿ ಬರೆದ ಕವಿತೆ ಎಷ್ಟೊಂದು
ಸುಂದರ ಯಾರೂ ಓದಲಾರದ ಮನಸ್ಸಿಗೆ
ಮುದ ನೀಡುವ ಭಾವನೆಗಳ ಹಂದರ
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.