ವಿಷಯ :-ಜ್ಞಾನಜ್ಯೋತಿ ಬಸವಣ್ಣ
ಬಸವನ ಬಾಗೇವಾಡಿಯಲ್ಲಿ ಜನಿಸಿದ ಬಸವ
ಮಾದರಸ ಮಾದಲಾಂಬಿಕೆಯ ಶಿಶುವ
ಕರುನಾಡ ತುಂಬಾ ಹರಡಿದ ಭಕ್ತಿಯ ಕಸುವ
ಇವರು ಮುಟ್ಟಿದ್ದೆಲ್ಲ ಆಗುವದು ಪರುಷವ
ಚಾಲುಕ್ಯರ ರಾಜಧಾನಿಯಾದ ಕಲ್ಯಾಣ
ಬಿಜ್ಜಳ ರಾಜನ ಆಡಳಿತದಲ್ಲಿರುವ ತಾಣ
ಮುಖ್ಯಮಂತ್ರಿ ಸ್ಥಾನದಲ್ಲಿರುವರೇ ಬಸವಣ್ಣ
ಕಲ್ಯಾಣವಾಗ ಅಸಂಖ್ಯಾತ ಶರಣರ ನಿಲ್ದಾಣ
ಏಳುನೂರಾಯಪ್ಪತ್ತಏಳು ಅಮರ ಗಣಂಗಳ ಮೇಳ
ಅರವತ್ತು ವಚನಕಾರರು ಒಟ್ಟುಗೂಡಿದ ದಾಳ
30 ನಾರಿ ಮಣಿ ವಚನ ಗಾರ್ತಿಯರ ಸಮ್ಮೇಳ
ಕಲ್ಯಾಣವಾಗಿತ್ತು ಸಮಾನತೆಯ ತಿಳಿಗೊಳ
ಬರೆದಿಟ್ಟರು ಹಲವಾರು ವಚನಗಳ ಕಟ್ಟು
ಜನರ ಮನದ ಮೌಡ್ಯತೆ ಯನ್ನು ಸುಟ್ಟು
ಸದಾ ಗುರುಲಿಂಗ ಜಂಗಮರ ಮೇಲೆ ಭಕ್ತಿ ಇಟ್ಟು
ಜಾತಿಭೇದವನ್ನು ಮನದಿಂದ ಆಚೆಗೆ ಅಟ್ಟು
ಅಂದು ಮೊಳಗಿಸಿದರು ಸಮಾನತೆ ಯ ದೀಪ್ತಿ
ಜಗದ ಜನಕೆಲ್ಲ ಇವರ ಭಕ್ತಿಯೇ ಸ್ಫೂರ್ತಿ
ಕರುನಾಡಿನ ತುಂಬೆಲ್ಲ ಇವರದೇ ಕೀರ್ತಿ
ಜಗತ್ತಿಗೆ ಜ್ಯೋತಿಯಾಗಿರುವ ಸಾಕಾರ ಮೂರ್ತಿ
ಶಿವಲೀಲಾ ಎಸ್ ಧನ್ನಾ
ಜವಳಿ (ಡಿ) ಜಿಲ್ಲಾ :-ಕಲ್ಬುರ್ಗಿ
ಕಲ್ಯಾಣ ಕರ್ನಾಟಕ.
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.