You are currently viewing ಜ್ಞಾನದಾತರು

ಜ್ಞಾನದಾತರು

ವಿದ್ಯಾಲಯ ನಮ್ಮ ಜ್ಞಾನದ ಆಲಯವೆನ್ನಬೇಕು
ತಾಯಿ ಶಾರದಾ ದೇವಿಗೆ ಕರವ ಮುಗಿಯಬೇಕು
ಅಜ್ಞಾನದ ಅಂಧಕಾರದ ಕತ್ತಲೆಯ ಕಳೆಯಬೇಕು
ಸುಜ್ಞಾನದ ಬೆಳಕನು ಜಗಕೆಲ್ಲ ಪಸರಿಸಬೇಕು

ವಿದ್ಯಾ ಬುದ್ದಿಯ ಅರಿವು ಮೂಡಿಸುವವರು
ತಿದ್ದಿ ತೀಡಿ ವಿದ್ಯೆಯ ಕಲಿಸುವ ಜ್ಞಾನದಾತರಿವರು
ಜ್ಞಾನವೆಂಬ ದೇಗುಲದಿ ಶಿಕ್ಷಣವ ಕಲಿಸುವವರು
ಸನ್ಮಾರ್ಗದ ಹಾದಿಯ ತೋರುವ ಗುರುಯಿವರು

ಅಆಇಈಉ ಕನ್ನಡ ಅಕ್ಷರಗಳ ಬರೆಸುವವರು
ಕಲೆ- ವಿಜ್ಞಾನ ವಿಷಯಗಳ ಭೋದಿಸುವವರು
ವಿದ್ಯಾರ್ಥಿಗಳಿಗೆ ಶಿಸ್ತನ್ನು ಕಲಿಸುವ ಶಿಕ್ಷಕರಿವರು
ಸಂಗೀತ, ನೃತ್ಯ ಕಲಿಯಲು ಪ್ರೋತ್ಸಾಹಿಸುವವರು

ಗುರುಗಳಿಗೆ ವಂದಿಸುತ ಗೌರವ ಕೊಡಬೇಕು
ಜ್ಞಾನ ದಾತರಿಗೆ ಶರಣು ಶರಣು ಎನ್ನಬೇಕು
ಶಿಕ್ಷಕರ ದಿನಾಚರಣೆಯನ್ನು ಆಚರಿಸಬೇಕು
ಶಿಕ್ಷಕರನ್ನು ಅಭಿನಂದಿಸಿ ಸನ್ಮಾನ ಮಾಡಬೇಕು

ಪೂರ್ಣಿಮಾ ರಾಜೇಶ್
ಬೆಂಗಳೂರು