You are currently viewing ಜಗಜ್ಯೋತಿ ಬಸವಣ್ಣ

ಜಗಜ್ಯೋತಿ ಬಸವಣ್ಣ

ಕೈಲಾಸ ದೊಡ್ಡದಲ್ಲ
ಕಾಯಕವೇ ದೊಡ್ಡದೆಂದು ಸಾರಿದವರು
ಕತ್ತಲೆಯ ಊರಿಗೆಲ್ಲಾ ಬೆಳಕನ್ನು
ಬೆಳಗಿದವರು ಬಸವಣ್ಣ

ಧರ್ಮ ದೊಡ್ಡದಲ್ಲ
ದಯವೇ ದೊಡ್ಡದೆಂದು ಹೇಳಿದವರು
ಅಜ್ಞಾನದ ಓಣಿಗೆ ಜ್ಞಾನದ
ಅಕ್ಷರ ಬಿತ್ತಿದವರು ಬಸವಣ್ಣ

ಅರಿವು ದೊಡ್ಡದಲ್ಲ
ಆಚಾರ ದೊಡ್ಡದೆಂದು ತಿಳಿಸಿದರು
ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ
ಮಾಡಿದವರು ಬಸವಣ್ಣ

ಅಧಿಕಾರ ದೊಡ್ಡದಲ್ಲ
ಅಭಿಮಾನ ದೊಡ್ಡದೆಂದು ರೂಪಿಸಿದವರು
ಎಲ್ಲರನ್ನೂ ನಮ್ಮ ಮನೆಯ
ಮಗನೆಂದು ಕರೆದವರು ಬಸವಣ್ಣ

ಸನ್ಮಾನ ದೊಡ್ಡದಲ್ಲ
ಸಂಸ್ಕಾರ ದೊಡ್ಡದೆಂದು ತೋರಿಸಿದವರು
ಜಾತಿ ಪದ್ಧತಿಯ ಬೇರುಗಳನ್ನು
ಕಿತ್ತು ಎಸೆದವರು ಬಸವಣ್ಣ

ಹಣ ದೊಡ್ಡದಲ್ಲ
ಗುಣ ದೊಡ್ಡದೆಂದು ಗುರುತಿಸಿದವರು
ಅಂತರ್ಜಾತಿ ವಿವಾಹ ಮಾಡಿ
ಸಮಾನತೆ ತಂದವರು ಬಸಣ್ಣ

ಮನೆ ದೊಡ್ಡದಲ್ಲ
ಮನ ದೊಡ್ಡದೆಂದು ನಿರ್ಣಯಿಸಿದವರು
ಪ್ರಾಣಿಗಳ ಮೇಲೆ ಕರುಣೆಯ ದಯೇ
ಇರಲಿ ಎಂದವರು ಬಸವಣ್ಣ

ವಿದ್ಯ ದೊಡ್ಡದಲ್ಲ
ಅನುಭವ ದೊಡ್ಡದೆಂದು ದೃಡಿಕರಿಸಿದವರು
ಅನುಭವ ಮಂಟಪದಲ್ಲಿ ಸಾವಿರಾರು
ಶರಣರಿಗೆ ಸ್ಥಾನ ಕೊಟ್ಟವರು ಬಸವಣ್ಣ

ಮಹಾಂತೇಶ ಬೇರಗಣ್ಣವರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



Leave a Reply