You are currently viewing ಜಗಜ್ಯೋತಿ ಬಸವಣ್ಣ

ಜಗಜ್ಯೋತಿ ಬಸವಣ್ಣ

ಬಸವನೆಂದರೆ ಮತ್ತೇನು ಅಲ್ಲ
ಕತ್ತಲೆಯ ದಾರಿಗೆ ಹುಣ್ಣಿಮೆಯ ಬೆಳಕು ತಂದವರು
ಬಸವನೆಂದರೆ ಇಷ್ಟೇ ಅಲ್ಲ
ಅಜ್ಞಾನದ ಊರಿಗೆ ಅಕ್ಷರ ದೀಪವನ್ನು ಹಚ್ಚಿದವರು

ಬಸವನೆಂದರೆ ಮತ್ತೇನು ಅಲ್ಲ
ಮಾಡುವ ಕಾಯಕವನ್ನೇ ಕೈಲಾಸ ಎಂದು ಹೇಳಿದವರು
ಬಸವನೆಂದರೆ ಇಷ್ಟೇ ಅಲ್ಲ
ಬರಡು ಭೂಮಿಯಲ್ಲಿ ಭಕ್ತಿ ಮಳೆಯನ್ನು ಸುರಿಸಿದವರು

ಬಸವನೆಂದರೆ ಮತ್ತೇನು ಅಲ್ಲ
ಮೌಡ್ಯ ಆಚರಣೆಗಳಿಗೆ ನಿಷೇಧವನ್ನು ಹೇರಿದವರು
ಬಸವನೆಂದರೆ ಇಷ್ಟೇ ಅಲ್ಲ
ಜಾತಿ ಪದ್ಧತಿಯನ್ನು ಹೋಗಲಾಡಿಸಲು ಪಣ ತೊಟ್ಟವರು

ಬಸವನೆಂದರೆ ಮತ್ತೇನು ಅಲ್ಲ
ನಾಡಿನ ಶರಣರಿಗೆ ಅನುಭವ ಮಂಟಪ ಸ್ಥಾಪಿಸಿದವರು
ಬಸವನೆಂದರೆ ಇಷ್ಟೇ ಅಲ್ಲ
ವಚನ ರಚನೆ ಮೂಲಕ ಸಮಾಜಕ್ಕೆ ಜಾಗೃತಿ ತಂದವರು

ಬಸವನೆಂದರೆ ಮತ್ತೇನು ಅಲ್ಲ
ಅಂತರ್ಜಾತಿ ವಿವಾಹ ಮಾಡಿ ಸಮಾನತೆ ತಂದವರು
ಬಸವನೆಂದರೆ ಇಷ್ಟೇ ಅಲ್ಲ
ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯ ಮಾಡಿದವರು

ಬಸವನೆಂದರೆ ಮತ್ತೇನು ಅಲ್ಲ
ಸಕಲ ಪ್ರಾಣಿಗಳ ಮೇಲೆ ದಯೆ ಇರಲಿ ಎಂದು ಸಾರಿದವರು
ಬಸವನೆಂದರೆ ಇಷ್ಟೇ ಅಲ್ಲ
ಸಮಾಜಕ್ಕೆ ವಚನದ ಸಂದೇಶ ಕೊಟ್ಟು ಜಗಜ್ಯೋತಿಯಾದವರು

ಶಿವಲೀಲಾ ಎಸ್ ಧನ್ನಾ
8867589540


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ


Leave a Reply