You are currently viewing ಖ್ಯಾತ ಕವಯಿತ್ರಿ ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ

ಖ್ಯಾತ ಕವಯಿತ್ರಿ ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ

ಕವನ ಸಂಕಲನ ಕೃತಿಯ ಹೆಸರು-ನೆರಳಿಗಂಟಿದ ಭಾವ
ಲೇಖಕರು-ಶ್ರೀಮತಿ ಸವಿತಾ ಮುದ್ಗಲ್
ಪ್ರಥಮ ಮುದ್ರಣ-೨೦೨೩
ಪ್ರಕಾಶಕರು-ನಿರಂತರ ಪ್ರಕಾಶನ

ಮುಖಪುಟದ ಸಾಹಿತ್ಯ ಬಳಗಗಳಿಂದ ಪರಿಚಿತರಾದಂತ ಸ್ನೇಹಮಯಿ ನಗುಮೊಗದ ಒಡತಿ ಖ್ಯಾತ ಕವಯಿತ್ರಿ ಶ್ರೀಮತಿ ಸವಿತಾ ಮುದ್ಗಲ್ ಅವರ ಚೊಚ್ಚಲ ಕವನ ಸಂಕಲನ ಕೃತಿ ನೆರಳಿಗಂಟಿದ ಭಾವ ಪುಸ್ತಕದಲ್ಲಿ ಒಟ್ಟು ೮೪ ವಿಭಿನ್ನ ವಿಶೇಷ ವಿಷಯಗಳ ಚಂದದ ಕವನಗಳಿವೆ.

ಮೊದಲ ಕವನ ಸರಸ್ವತಿ ಮಾತೆಯ ಕುರಿತಾದ ಸುಂದರ ರಚನೆಯ ಸೊಗಸಾದ ಪದಗಳಿಂದ ಕೂಡಿದ ಕವನ ಜಗದ ಮನದ ಅಜ್ಞಾನ ತೊಲಗಿಸು ಜಗದಲ್ಲಿ ತುಂಬಿರುವ ಮೂಢರನು ಅಳಿಸು ಅನ್ನುವ ಕವನವಿದೆ

ಸ್ನೇಹ, ಒಲವು, ಪ್ರೀತಿ, ತಾಯ್ತನದ, ಹಂಬಲ, ಹಾಗೂ
ಹೆಣ್ಣಿನ ಮನದ ತುಡಿತ ಮಿಡಿತ ಅಂತರಂಗದ ಭಾವಗಳನ್ನು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.
ಲಿಪಿಗಳ ರಾಣಿ ಕನ್ನಡ, ಬಾಳೊಂದು ಚದುರಂಗ, ಹೆಣ್ಣಿನ ಅಂತರಾಳ ,ನಕಲಿ ಮನಸಲಿ ಅಸಲಿ ಭಾವ,
ಪ್ರಾಯದ ವಯಸ್ಸು ಪ್ರಣಯದ ಕನಸು ,ಹಾಗೂ ವಿಭಿನ್ನ ವಿಶೇಷವಾದ ನಕ್ಷತ್ರ ಆಕಾರದಲ್ಲಿ ರಚಿಸಿರುವ ತಂಬೆಲರಿನ ಮರೆಯಲ್ಲಿ, ಚಂದದ ಶೀರ್ಷಿಕೆಯ ಸುಂದರ ಕವನ ಬಲು ಸೊಗಸಾಗಿದೆ.

ಮುಖಪುಟದ ಖ್ಯಾತ ಕವಯತ್ರಿ ಶ್ರೀಮತಿ ಆಶಾಶಿವುಗೌಡ ಅವರು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕೃತಿಯಿದು ಎಂದು ತುಂಬು ಹೃದಯದಿಂದ ಕವಯತ್ರಿ ಸವಿತಾಗೆ ಹರಸಿ ಹಾರೈಸಿದ್ದಾರೆ.

ಈ ಚಂದದ ಕೃತಿಯಲ್ಲಿರುವ ಹಲವಾರು ಕವನಗಳಲ್ಲಿ ನನಗೆ ಬಹಳ ಇಷ್ಟವಾದ ಎರಡು ಕವನಗಳೆಂದರೆ

೧)ತಾಯಿಗರ್ಭ ಗುಲಾಬಿ ತೋಟ

ಅಮ್ಮನ ಒಡಲಿನಲ್ಲಿ ವಿಧವಿಧ ರೂಪ ಪಡೆದು ತಾಯಿ
ಗರ್ಭದ ತೋಟದಲ್ಲಿ ಮೊಗ್ಗಾಗಿ ಅರಳುವ ವಿಸ್ಮಯ ಲೋಕವಿದು ಎಂದು ಬಹಳ ಅರ್ಥಪೂರ್ಣವಾಗಿ ಕವನ ರಚಿಸಿರುವರು

೨) ಒಲವಿನ ಚೆಲುವು

೨)ಒಲವಿನ ಚೆಲುವು ಕವನದಲ್ಲಿ ಹೆಣ್ಣು ದೇವತೆಯಂತೆ ಹೆಣ್ಣು ಮಗುವೆ ನಮಗೆ ಸಂಪತ್ತು ,ಶಿಕ್ಷಣವ ಕೊಡಿರಿ ಹೆಣ್ಣಿಗೆ ಮರೆಯದಂತೆ ಅನ್ನುವ ಚಂದದ ಅರ್ಥಪೂರ್ಣ ಸಾಲುಗಳಿವೆ.

ತಾಯಿ ಗರ್ಭ ಗುಲಾಬಿ ತೋಟ

ಬಿಂದುವಾಗಿ ಸೇರಿದೆ
ಅಮ್ಮನ ಒಡಲಿಗೆ
ವಿಧವಿಧದ ರೂಪವು
ಪಡೆದೆ ನಿನ್ನಲಿ

ತಾಯಿ ಗರ್ಭದ
ಗುಲಾಬಿ ತೋಟದಲಿ
ಮೊಗ್ಗಾಗಿ ಅರಳಿದ
ಸುಂದರ ಲೋಕದಲಿ

ವಿಸ್ಮಯ ಲೋಕದ
ಅಧಿಪತಿ ನಾನಲ್ಲಿ
ಅರಿಯದ ಮನವದು
ಈ ಭುವಿಗೆ ಬಂದೆನಿಲ್ಲಿ

ಹಾಯಾದ ತಾಣದ
ಹಸಿರು ಸೃಷ್ಟಿಯಲಿ
ಮರವಾಗಿ ಬೆಳೆದು
ನೆರಳಾಗುವೆ ಬಾಳಿಗಿಲ್ಲಿ




ಒಲವಿನ ಚೆಲುವು

ಹೆಣ್ಣು ಮಕ್ಕಳೆ ಬಾಳಿಗೆ ಅಂದವು
ಅವರೆ ನಮ್ಮೆಲ್ಲರ ಬಾಳಿಗೆ ಚೆಲುವು
ಆನಂದದಿ ಬದುಕಿದರೆ ನಮಗೆ ಗೆಲುವು
ತಾಯಂದಿರಿಗೆ ಅವರೇ ಎಲ್ಲಿಲ್ಲದ ಬಲವು

ಮುಖದಲ್ಲಿ ತುಂಬಿದೆ ಮುಗ್ಧ ನಗುವು
ವಸ್ತ್ರಾಭರಣದಿಂದ ಹೇಳುತ್ತಿದೆ ಎಲ್ಲವು
ಸಂಸ್ಕೃತಿಗೆ ಉತ್ತರವೇ ಹೆಣ್ಣು ಮಕ್ಕಳು
ಸಂಸ್ಕಾರ ಒಂದಿದ್ದರೆ ಜೀವನಕೆ ಚಂದವು

ಹೆಣ್ಣು ಮಗುವೆ ನಮಗೆ ಸಂಪತ್ತು
ಕಳೆದು ಹೋಗುವುದು ಬಾಳಿನ ಆಪತ್ತು
ಸಮಾಜದಲ್ಲಿ ಇವರಿಗೆ ಒಂದು ಗಮ್ಮತ್ತು
ಹೃದಯದಲ್ಲಿ ಪ್ರೀತಿ ಹಾಡೊಂದು ನುಡಿಸಿತ್ತು

ದೇವತೆಯಂತೆ ಹೆಣ್ಣು ಮಕ್ಕಳಲ್ಲವೇ ಜಗದಿ
ಕುಟುಂಬದ ನಿರ್ವಹಣೆ ಹೊತ್ತಿರುವ ದಿನದಿ
ಕೊಡಿರಿ ಶಿಕ್ಷಣವ ಹೆಣ್ಣಿಗೆ ಮರೆಯದಂತೆ
ಕಲಿತರೆ ಅವಳೇ ನೂರೊಂದು ಶಾಲೆಯಂತೆ

ಹೀಗೆ ಈ ಚಂದದ ಕವನ ಸಂಕಲನ ಕೃತಿಯಲ್ಲಿರುವ ಎಲ್ಲಾ ಕವನಗಳು ಹತ್ತು ಹಲವಾರು ವಿಭಿನ್ನ ವಿಶೇಷವಾಗಿದೆ ಅನಸೂಯ ಜಹಗೀರದಾರ ಹಿರಿಯ ಕವಯಿತ್ರಿಯ.ಕೊಪ್ಪಳ ಜಿಲ್ಲೆಯವರು ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ. ಅನೇಕ ಖ್ಯಾತ ಕವಿ ದಿಗ್ಗಜರು ಈ ಚಂದದ ಕೃತಿಗೆ ಆಶಯ ನುಡಿ ಬರೆದು ಕವಯಿತ್ರಿ ಶ್ರೀಮತಿ ಸವಿತಾ ಮುದ್ಗಲ್ ಅವರಿಗೆ ಹರಸಿ ಹಾರೈಸಿ ಶುಭ ಕೋರಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತ ಸಂಸಾರ ಮನೆ ಮಕ್ಕಳು ಕುಟುಂಬದವರ ಯೋಗಕ್ಷೇಮ ಜವಾಬ್ದಾರಿಯ ಹೊಣೆ ಹೊತ್ತು ಬಿಡುವಿನ ಸಮಯದಲ್ಲಿ ಕಥೆ ಕವನ ಲೇಖನ ಬರೆಯುತ್ತಾ ಓದುಗರ ಮನ ಗೆದ್ದು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಉದಯೋನ್ಮುಖ ಕವಯಿತ್ರಿ ಆತ್ಮೀಯ ಗೆಳತಿಯಾದ ಸವಿತಾ ಅವರಿಂದ ಮತ್ತಷ್ಟು ಉತ್ತಮ ಕೃತಿಗಳು ರಚಿತವಾಗಿ ಲೋಕಾರ್ಪಣೆ ಗೊಳ್ಳಲೆಂದು ಶುಭ ಕೋರಿ ಹರಸಿ ಹಾರೈಸುವೆ.ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುವೆ..

ಧನ್ಯವಾದ

ಪೂರ್ಣಿಮಾ ರಾಜೇಶ್
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ನಮ್ಮ ಇಂದಿನ ಸುಖಿ ಬದುಕು ಬುದ್ಧ ಬಾಬಾಸಾಹೇಬರು ನೀಡಿದ ಭಿಕ್ಷೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



This Post Has 2 Comments

Comments are closed.