You are currently viewing ಹೃದಯದ ಬಡಿತವಿದೆ ಅಮ್ಮನಿಗೆ

ಹೃದಯದ ಬಡಿತವಿದೆ ಅಮ್ಮನಿಗೆ

ಜೀವ ಕೊಟ್ಟವಳಾಕೆ ಹೃದಯದ ಬಡಿತವಿದೆ ಆಕೆಗೆ
ಜೀವ ಮೀಸಲಿದೆ ಅಲ್ಲವೇ ಅವ್ವಳಿಗೆ

ನವಮಾಸದ ನೋವಿನಿಂದ ಅವಳಿಗೆ ಮರುಜನ್ಮ ಸಿಕ್ಕಿದೆ
ಗರ್ಭದ ಗುಡಿಯಲಿ ಆಕೆಯೇ ದೇವರು

ನಮ್ಮ ಬದುಕಿನ ಬಂಡಿಯಲಿ ಆಕೆಯು ತೇರಾದಳು
ನಾನೊಂದು ಪುಟ್ಟ ಮೂರ್ತಿಯಾದೆ

ಸಹಾನುಭೂತಿಯ ಸ್ವರೂಪ ಅವಳು
ಭೂಮಿಯ ಭಾರವನು ಹೊತ್ತಂತೆ ಹೊರುವಳು ಎಲ್ಲ ತಪ್ಪುಗಳನು

ಆಕೆಗೆ ಜೀವ ಮೀಸಲಿರುವುದು ನಮ್ಮ ಕರ್ತವ್ಯವಲ್ಲವೇ
ನಗುವಿನ ಬಂಡಿಯಲಿ ಅವ್ವಳು ಸದಾ ನಗುತಿರಲಿ

ತೀರಿಸಲಾಗುವುದೆ ಆಕೆಯ ಋಣವನು
ಬೇಕಿದೆ ಜನ್ಮಜನ್ಮಗಳು ಆಕೆಯ ಋಣ ತೀರಿಸಲು

ನಗುವಿರಲಿ ನಿನ್ನ ಮೂಗದಲಿ ಅವ್ವ ನಾ ಇರುವೆ ಜತೆಯಾಗಿ
ಮತ್ತೆ ಮಗುವಾಗಿ ಮಲಗಲೇ ನಿನ್ನ ಮಡಿಲಲ್ಲಿ

ದೀನಬಂಧು ಎಸ್ ಆದಿ
ಗದಗ-ಬೆಟಗೇರಿ