You are currently viewing ಹೊತ್ತು ಮುಳುಗಿದರೂ ಹೊತ್ತು ನಡೆದ ದೇವರು ಅಪ್ಪ

ಹೊತ್ತು ಮುಳುಗಿದರೂ ಹೊತ್ತು ನಡೆದ ದೇವರು ಅಪ್ಪ

ನೇಗಿಲ ಯೋಗಿಯು ನನ್ನಪ್ಪ
ದೇಶದ ಬೆನ್ನೆಲುಬು ಇವನಪ್ಪ

ಅಕ್ಷರ ಜ್ಞಾನವ ಅರಿತಿರುವರು
ಬಜನಾ ಪದಗಳ ಬರೆಯುವರು

ಬಡತನ ಭವಣೆಯಲ್ಲಿ ಬೆಳೆದವರು
ಸತಿ ಸುತರಿಗಾಗಿ ದುಡಿದವರು

ಮಕ್ಕಳ ಮನವನ್ನು ಅರಿತವರು
ಸ್ನೇಹಿತರಂತೆ ಬೆಳೆಸಿದವರು

ವಾತ್ಸಲ್ಯದ ಮಳೆಯ ಸುರಿಸುವರು
ಕರುಣೆ ಮಮತೆಯ ಕಡಲಿವರು

ನಾನು ಕಂಡ ಮೊದಲ ಕವಿ ನನ್ನಪ್ಪ
ಕಷ್ಟ ಸುಖಕ್ಕೆ ಹೆಗಲಾದವರು ನನ್ನಪ್ಪ

ಶಿಕ್ಷಣದ ಜೊತೆಗೆ ಸಂಸ್ಕಾರ ಕೊಟ್ಟರು
ಕಲೆ ಸಾಹಿತ್ಯ ಸಂಗೀತದ ಕಲಾಕಾರರು

ಮಕ್ಕಳ ಮನವನ್ನು ಅರಿವರು ಅಪ್ಪ
ಕೇಳುವ ಮುಂಚೆ ತಂದು ಕೊಟ್ಟ ನನ್ನಪ್ಪ

ಮಕ್ಕಳ ಜೊತೆ ಮಕ್ಕಳಂತೆ ಆಡುವರು
ಮೊಮ್ಮಕ್ಕಳ ಜೊತೆ ಕಾಲ ಕಳೆಯುವರು

ಗುರು ಹಿರಿಯರ ಮೇಲೆ ಬಹಳ ಭಕ್ತಿ
ದಾನ ಧರ್ಮವೇ ಅವರ ಜೀವನದ ಯುಕ್ತಿ

ಗುರುಗಳ ಪಾದ ಸೇವೆಯಲ್ಲಿ ಆಸಕ್ತಿ
ಅವರ ಪಾದದಿ ಪಡೆಯುವರು ಮುಕ್ತಿ

ಶಿವಲೀಲಾ ಎಸ್ ಧನ್ನಾ
ಜಾವಳಿ (ಡಿ) ಜಿಲ್ಲಾ :-ಕಲ್ಬುರ್ಗಿ
8867589540


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.