You are currently viewing ಹೊಸ ವರುಷ – ಹರುಷದ ಹನಿ

ಹೊಸ ವರುಷ – ಹರುಷದ ಹನಿ

ಹಳೆಯ ನೆನಪಿನ ಪುಟವನು ಮಡಚಿ
ಹೊಸತು ಕನಸಿನ ದೀಪವ ಹಚ್ಚಿ
ಬಂದಿದೆ ನೋಡಿ ಹೊಸ ವರುಷ
ತುಂಬಲಿ ಎಲ್ಲೆಡೆ ಬರಿ ಹರುಷ!

ಬಾಡಿದ ಹೂವು ಅರಳಲಿ ಮತ್ತೆ
ಕಮರಿದ ಆಸೆ ಚಿಗುರಲಿ ಮತ್ತೆ
ಕಹಿ ನೆನಪುಗಳ ಗಾಳಿಯ ಬೀಸಿ
ಸಿಹಿ ಸಡಗರದ ರಂಗನು ಪೂಸಿ.

ಮತ್ಸರ ದ್ವೇಷ ದೂರಾಗಲಿ
ಪ್ರೀತಿಯ ಸೆಲೆಯು ಹರಿಯಲಿ
ಬಾಳಿನ ದಾರಿಯು ಹಸನಾಗಲಿ
ನೆಮ್ಮದಿ ಮನೆಮನ ಬೆಳಗಲಿ.

ಹೊಸ ಸಂಕಲ್ಪದ ಹೆಜ್ಜೆಯ ಇಡೋಣ
ಸಾಧನೆಯ ಶಿಖರವ ಏರೋಣ
ನಗುತಲಿ ಬಾಳುವ ಪಣವ ತೊಡೋಣ
ಹೊಸ ವರುಷವ ಸಡಗರದಿ ಬರಮಾಡಿಕೊಳ್ಳೋಣ!

ರೇಖಾ ಹುಲಿಕೆರೆ









Leave a Reply