ಬಂದಿತೊ ಬಂದಿತೊ ಹೊಸ ವರ್ಷ ಬಂದಿತೊ
ತಂದಿತೊ ತಂದಿತೊ ಹೊಸ ಹರುಷವ ತಂದಿತೊ
ನಿನ್ನೆಗಳ ನೆನಪುಗಳ ಮರೆಯಿ ಸಿತೊ
ನಾಳೆಗಳ ಭರವಸೆಯ ಬೆಳಕು ಚೆಲ್ಲಿತೊ.
ಹೊಸ ವರುಷಕೆ ಹೊಸ ಆಲೋಚನೆಗಳ ಹೊನಲು ಹರಿಯಲಿ
ನವ ಬಂಧಗಳ ಉಲ್ಲಾಸಗಳು ಜಿನುಗುತಿರಲಿ
ಹೊಸ ಹೊಸ ಕನಸುಗಳು ಚಿಗುರೊಡೆಯಲಿ
ಸಂತಸ ನಲಿವುಗಳ ಸುರಿಮಳೆ ಸುರಿಯುತ್ತಿರಲಿ.
ಹಿಂದಿನ ವರ್ಷ ಮಾಡಿದ ತಪ್ಪುಗಳು ಮರಳಿ ಬಾರದಂತೆ
ದ್ವೇಷ ಅಸೂಯೆಗಳ ಮರೆತು ನಲಿವಂತೆ
ಕಾಯಕದಿ ಸುವಿಚಾರಗಳ ಸನ್ಮಾರ್ಗಗಳ ಹಾದಿ ಹಿಡಿಯುವಂತೆ
ಆ ಭಗವಂತ ಹೊಸ ವರ್ಷಕ್ಕೆ ನಿಮ್ಮನ್ನು ಆಹ್ವಾನಿಸಿ ಕಾಪಾಡಲಿ.
ಪಾಶ್ಚಿಮಾತ್ಯರ ಆಚರಣೆಗೆ ನಿಮ್ಮ ಮನ ಮರುಳಾಗದಿರಲಿ
ನಮ್ಮ ಹೊಸ ವರ್ಷ ಆರಂಭ ಯುಗಾದಿ ಮರೆಯದಿರಲಿ
ಕೇಕ್ ಕಟ್ ಮಾಡಿ ಕುಡಿದು ದುಂದು ವೆಚ್ಚ ಮಾಡಿ ಹಾಳಾಗದಿರಿ
ಬಡಬಗ್ಗರಿಗೆ ಅನಾಥರಿಗೆ ವೃದ್ಧರಿಗೆ ಸಹಾಯ ಮಾಡಿರಿ.
ವರ್ಷದಲ್ಲಿ ಒಂದಿನ ಹೊಸ ವರ್ಷ ಆಚರಣೆ ಆಗದಿರಲಿ
ಪ್ರತಿ ದಿವಸ ಪ್ರತಿ ನಿಮಿಷ ಹೊಸತನ ಸುಂದರ ಜೀವನದಲ್ಲಿ ಹೊಮ್ಮುತಿರಲಿ
ಹೊಸ ವರ್ಷಕ್ಕೆ ಪ್ರತಿಜ್ಞೆ ಮಾಡಿಕೊಳ್ಳಿ ಕನ್ನಡಿಗರೇ
ನಮ್ಮ ನಾಡು ನುಡಿಗೆ ಹೋರಾಟ ಮಾಡಿ ಕನ್ನಡವ ಉಳಿಸಿ ಬೆಳೆಸಲು
ಕಂಕಣಬದ್ಧ ರಾಗಲು ಕನ್ನಡದ ಮನಸುಗಳು ಮುಂದಾಗಲಿ
ಎಲ್ಲರಿಗೂ ಹೊಸ ವರ್ಷ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಜ್ಯೋತಿ ಸಂಜು ಮುರಾಳೆ