ನಮ್ಮ ಭಾರತದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯದಲ್ಲಿ ಆಚರಿಸುವ ಹಬ್ಬಗಳು ಬೇರೆ ಬೇರೆ ಆದರೂ ಹಬ್ಬದ ಹಿನ್ನೆಲೆ ಮಾತ್ರ ಒಂದೇ ಆಗಿರುತ್ತೆ.
ಹಿಂದೂ ಸಂಪ್ರದಾಯ ಪ್ರಕಾರ ಹೋಳಿ ಹುಣ್ಣಿಮೆಯು ಕಡೆ ಹುಣ್ಣಿಮೆ ಅಂತ ಹೇಳುವರು.ಈ ಖುಷಿಗಾಗಿ ಅಥವಾ ಪೌರಾಣಿಕ ಹಿನ್ನಲೆಯ ಕಥೆಗಳಲ್ಲಿರುವ ಪ್ರಕಾರ ಈ ಹೋಳಿ ಹಬ್ಬ ಮತ್ತು ಆಚರಣೆ ಶುರುವಾಗಿದೆ.
ಹೋಳಿ ಅಂದ್ರೆ ಬಣ್ಣದ ಹಬ್ಬ,ಎಲ್ಲೆಲ್ಲೂ ಬಣ್ಣದೊಂದಿಗೆ ಕಿರಿಯರಿಂದ ಹಿಡಿದು ಎಲ್ಲರೂ ಕೂಡಿ ಸಂಭ್ರಮ ಪಡುವ ಹಬ್ಬ ಈ ಹೋಳಿಯಾಗಿದೆ.
ಹೋಳಿ ಹಬ್ಬದ ಪೌರಾಣಿಕ ಕಥೆ :
ಪ್ರಹ್ಲಾದನು ವಿಷ್ಣುವಿನ ಭಕ್ತ.ಪ್ರಹ್ಲಾದನ ತಂದೆ ಹಿರಣ್ಯ ಕಶ್ಯಪ ಮಗನನ್ನು ಸೇರುತ್ತಿರಲಿಲ್ಲ. ಏಕೆಂದರೆ ಈತನಿಗೆ ಭಗವಾನ್ ವಿಷ್ಣು ಇಷ್ಟವಾಗುತ್ತಿರಲಿಲ್ಲ.ಹೇಗಾದರೂ ಮಾಡಿ ತನ್ನ ಮಗನನ್ನು ಕೊಲ್ಲಬೇಕೆಂದು ತನ್ನ ತಂಗಿಯಾದ ಹೋಲಿಕಾ ಸಹಾಯ ಪಡೆಯುತ್ತಾನೆ. ಏಕೆಂದರೆ ಈಕೆಯು ಬೆಂಕಿ ಈಕೆಯನ್ನು ಸುಡುವುದಿಲ್ಲ,ಈಕೆಯ ಮೇಲೆ ಮಗನನ್ನು ಕೂರಿಸಿ ಸುಟ್ಟರೆ ಸತ್ತು ಹೋಗುವ ಎಂದು ಉಪಾಯ ಮಾಡಿ,ಪ್ರಹ್ಲಾದನನ್ನು ಹೋಲಿಕಾ ತೊಡೆ ಮೇಲೆ ಕೂರಿಸಿ ಬೆಂಕಿ ಹಚ್ಚಿದಾಗ,ಇವನ ಭಕ್ತಿಯಿಂದ ಇವನು ಪಾರಾಗಿ,ಹೋಲಿಕ ತನ್ನ ದುಷ್ಟ ಬುದ್ಧಿಯಿಂದ ಸಾವಿಗೀಡಾಗುತ್ತಾಳೆ.
ಇದೆ ಕಾರಣದಿಂದ ದುಷ್ಟ ಸಂಹಾರ ಆಗಿದೆ ಅನ್ನೋ ಖುಷಿಗೆ ಹೋಕಳಿ ಆಡುವುದು ಶುರುವಾಗಿದೆ ಎನ್ನುವರು.
ಇದಕ್ಕಾಗಿ ಹೋಲಿಕಾ ದಹನ ಉತ್ತರ ಭಾರತದಲ್ಲಿ ಆಚರಣೆ ಮಾಡುವರು.
ಇನ್ನೊಂದು ಕಥೆ ಪ್ರಕಾರ
ಕೃಷ್ಣನ ಚಿಕ್ಕ ಮಗುವಿದ್ದಾಗ ಪೂತನಿ ಎಂಬ ರಾಕ್ಷಸಿಯ ಎದೆ ಹಾಲು ಕುಡಿದು ಆಕೆಯ ವಿಷವೆಲ್ಲ ಕೃಷ್ಣನ ಮೈಸೇರಿದಾಗ ಅವನ ಬಣ್ಣವೂ ಕಪ್ಪು ನೀಲಿ ಬಣ್ಣ ತಿರುಗಿತು.
ಕೃಷ್ಣನು ತನ್ನ ತಾಯಿ ಯಶೋಧ ಬಳಿ ಬಂದು ತನ್ನ ಗೆಳತಿ ರಾಧೆ ಕೂಡ ನೀಲಿ ಬಣ್ಣವಾಗಲೆಂದು ಇಚ್ಛೆ ಪಡುತ್ತಾನೆ. ಅದಕ್ಕೆ ಯಶೋಧ ಮಾತೆಯು ಕೃಷ್ಣನಿಗೆ ನೀಲಿ ಬಣ್ಣದಿಂದ ರಾಧೆಗೆ ಹಚ್ಚಲು ಹೇಳುತ್ತಾಳೆ. ಇದರಿಂದ ರಾಧೇ ಕೂಡ ನೀಲಿ ಬಣ್ಣವಾಗುತ್ತಾಳೆ. ಇವರಿಬ್ಬರ ಈ ಬಣ್ಣದ ಪ್ರೇಮದ ಸಂಕೇತವನ್ನು ಹೋಲಿಕಾ ದಹನ ಆದ ಮರುದಿನ ಬಣ್ಣದಾಟವನ್ನು ಆಚರಿಸುತ್ತಾರೆ.
ಕೃಷ್ಣನು ಕಾರಾಗೃಹದಲಿ ತನ್ನ ಮಾವ ಕಂಸನನ್ನು ಸಂಹಾರ ಮಾಡಿದ ಇದರ ಖುಷಿಯಾಗಿ ಬೃಂದಾವನದಲಿ ರಂಗು ರಂಗಿನ ಹೋಳಿ ಹಬ್ಬ ಆಚರಣೆ ಶುರುವಾಗಿದೆ ಎನ್ನುವದು ಕೂಡ ಶಾಲಾ ದಿನಗಳಲ್ಲಿ ನಮಗೆ ಗುರುಗಳು ಹೇಳಿದ ಕಥೆ ನೆನೆಪಾಗವುದು.
ಪರಿಸರ ಸ್ನೇಹಿಬಣ್ಣಗಳನ್ನು ಉಪಯೋಗಿಸೋಣ!
ಮಾರುಕಟ್ಟೆಗಳಲ್ಲಿ ರಾಸಾಯನಿಕ ಮುಕ್ತ ಬಣ್ಣಗಳು ,ಕೃತಕ ಬಣ್ಣಗಳು ಮತ್ತು ಸಾವಯವ ಬಣ್ಣಗಳನ್ನು ನಾವು ಗುರುತಿಸಿದೆ ಬಳಸುವುದರಿಂದ ನಮ್ಮ ದೇಹಕ್ಕೆ ಆಗುವ ತೊಂದರೆಗಳು ಅನೇಕ.
ಸಾಧ್ಯವಾದಷ್ಟು ಸಾವಯವ ಬಣ್ಣಗಳನ್ನು ಬಳಸಿ ನಮ್ಮ ದೇಹವನ್ನು ಕಾಪಾಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ಬಣ್ಣಗಳೆಂದು ಲೋಗೋವನ್ನು ನೋಡಿ ಖರೀದಿಸದೆ ಎಚ್ಛೆತ್ತುಕೊಳ್ಳಬೇಕು.
ಸಿಂಥಟಿಕ ಬಣ್ಣಗಳನ್ನು ತಯಾರಿಸಲು ಕೆಲವು ರಾಸಾಯನಿಕಗಳನ್ನು ಬಳಸುತ್ತಾರೆ. ಸೀಸದ ಆಕ್ಸೈಡ್ ಕಪ್ಪು ಬಣ್ಣ, ಪಾದರಸ
ದ ಸಲ್ಫೇಟ್ ಕೆಂಪು ಬಣ್ಣ, ತಾಮ್ರದ ಸಫೈಟ್ ನೀಲಿ, ಅಲ್ಯ್ಯುಮಿನಿಯಂ ಬ್ರೋಮೆಯ್ಡ್ ಬೆಳ್ಳಿ, ಮಲಕೈಡ್ ಹಸಿರು, ರೋಡ್ ಮೈನ್ ಬಿ ಗುಲಾಬಿ ಹೀಗಿರುತ್ತವೆ.
ಇಂತಹ ರಾಸಾಯನಿಕಗಳಿಂದ ದೇಹಕ್ಕೆ ಕಿರಿಕಿರಿ ಅಲರ್ಜಿ ಉಂಟಾಗುತ್ತದೆ. ಇಂತಹ ಬಣ್ಣಗಳಿಂದ ನೀರಿನಲ್ಲಿ ತೊಳೆದಾಗ ನೀರು ಕೂಡ ಕಲುಷಿತವಾಗಿ ನೀರಿನಲ್ಲಿರುವ ಮೀನು ಇನ್ನಿತರ ಜಲಚರಗಳಿಗೆ ತೊಂದರೆ ಉಂಟಾಗುತ್ತದೆ.
ಕೆಂಪು ಬಣ್ಣವನ್ನು ಒಣಗಿದ ದಾಸವಾಳದ ಹೂವುಗಳು ಅಥವಾ ಹುಚ್ಚು ಬೇರುಗಳಿಂದ ಪಡೆಯಲಾಗುತ್ತದೆ” ಎಂದು ಅವರು ಹೇಳುತ್ತಾರೆ, “ನೈಸರ್ಗಿಕ ಆಳವಾದ ಹಳದಿ ಬಣ್ಣವನ್ನು ಹೊಂದಿರುವ ಅರಿಶಿನವನ್ನು ಹಳದಿ ಬಣ್ಣವನ್ನು ಮಾಡಲು ಬಳಸಲಾಗುತ್ತದೆ. ಬೇವಿನ ಎಲೆಗಳು ಅಥವಾ ಪಾಲಕದಿಂದ ಹಸಿರು ಬಣ್ಣವನ್ನು ಪಡೆಯಬಹುದು. ನೀಲಿ ಬಣ್ಣವನ್ನು ತಯಾರಿಸಲು ಇಂಡಿಗೋವನ್ನು ಬಳಸಲಾಗುತ್ತದೆ. ನೇರಳೆ ಬಣ್ಣವನ್ನು ಮಾಡಲು, ಬೀಟ್ರೂಟ್ ಅನ್ನು ಬಳಸಬಹುದು. ಗುಲಾಬಿ ಬಣ್ಣವು ಬೀಟ್ರೂಟ್ ಪುಡಿ ಅಥವಾ ಗುಲಾಬಿ ದಳಗಳಿಂದ ಬರುತ್ತದೆ.
ನೈಸರ್ಗಿಕ ಪದಾರ್ಥಗಳನ್ನು ಉತ್ತಮ ಪುಡಿಯಾಗಿ ಪುಡಿಮಾಡಿದ ನಂತರ, ಅವುಗಳನ್ನು ಪೇಸ್ಟ್ ರಚಿಸಲು ನೀರಿನೊಂದಿಗೆ ಬೆರೆಸಲಾಗುತ್ತದೆ. “ಪೇಸ್ಟ್ ಅನ್ನು ನಂತರ ಒಣಗಲು ಬಿಡಲಾಗುತ್ತದೆ, ಮತ್ತು ಅದು ಸಂಪೂರ್ಣವಾಗಿ ಒಣಗಿದ ನಂತರ, ಅದನ್ನು ನೀವು ಬಯಸಿದಂತೆ ಪುಡಿ ರೂಪದಲ್ಲಿ, ಪೇಸ್ಟ್ ಅಥವಾ ದ್ರವದಲ್ಲಿ ಪರಿಸರ ಸ್ನೇಹಿ ಬಣ್ಣಗಳಾಗಿ ಉಪಯೋಗಿಸಿ ಹಬ್ಬವನ್ನು ಆಚರಿಸಬಹುದು.
ಎಲ್ಲರ ಬದುಕು ಬಣ್ಣಮಯವಾಗಿರಲಿ, ಮಾಯಾವಾಗದಿರಿಯಲಿ!.
ಸವಿತಾ ಮುದ್ಗಲ್
ಗಂಗಾವತಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.