ಡಾ: B,R,ಅಂಬೇಡ್ಕರ್ ಅವರ ದಿವ್ಯ ಲೇಖನ
ಸಂವಿಧಾನ ಜಾರಿಗೆ ಬಂದ ಈ ಶುಭ ದಿನ.
ನಮಗೆಲ್ಲರಿಗೂ ಹೊಸತನ ನವಚೇತನ.
ಇದುವೇ ಗಣರಾಜ್ಯೋತ್ಸವದ ಸವಿದಿನ.!!
ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೇಷ
ಭೇಧ ಹಲವಿದ್ದರೂ ಬಿಡೋಣ ನಮ್ಮಲ್ಲಿಯ ದ್ವೇಷ
ಸಾಧನೆಗೆ ಹಾದಿಯಲ್ಲಿ ನಮ್ಮಲ್ಲಿವೆ ವೈವಿಧ್ಯಮಯ ಕನಸು
ಒಂದೇ ಎನ್ನುವ ಏಕತಾ ಭಾವ ತರದು ಯಾರಲ್ಲೂ ಮುನಿಸು
ಪ್ರಜೆಗಳನ್ನು ಆಳಲಿಕ್ಕೆ ಇದೆ ಶಾಸಕಾಂಗ
ಸಾಮಾನ್ಯನಿಗೂ ನ್ಯಾಯ ಕೊಡಲು ನ್ಯಾಯಾಂಗ
ಜನರಿಗಾಗಿ ಅನವರತ ದುಡಿಯುವ ಕಾರ್ಯಾಂಗ
ಜಗತ್ತನ್ನೆ ಬೆರಗುಗೊಳಿಸಿದೆ ಸಂವಿಧಾನದ ಸರ್ವಾಂಗ
ಬಾನಂಗಳದಿ ಹಾರುತಿದೆ ಭಾರತದ ಬಾವುಟ
ಅನುದಿನವೂ ಸಾರುತಿದೆ ಸಮಾನತೆಯ ಪಾಠ
ದಶದಿಕ್ಕಲೂ ಹೊಮ್ಮಿದೆ ದೇಶ ಪ್ರೇಮದ ಭಾಷಣ
ನಮ್ಮಯ ದೇಶವು ವಿವಿಧ ಸಂಸ್ಕೃತಿಗಳ ಹೂರಣ
ದೇಶದ ರಕ್ಷಣೆಗಾಗಿ ಒಗ್ಗಟ್ಟಿನಿಂದ ಹೋರಾಡೋಣ
ಶತೃಗಳನು ಮೆಟ್ಟಿ ನಿಂತು ಮುಂದೆ ಸಾಗೋಣ
ಹುತಾತ್ಮ ವೀರ ಯೋಧರ ತ್ಯಾಗವ ನೆನೆಯೋಣ
ಸ್ವಾತಂತ್ರ್ಯಕ್ಕೆ ಹೋರಾಡಿದವರ ನಿತ್ಯವೂ ಸ್ಮರಿಸೋಣ.
ರಹಿಮಾನ್ ನದಾಫ್
ವಿದ್ಯಾರ್ಥಿ, ಇಲಕಲ್
M-6360523334
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಇತಿಹಾಸ (History)
Dakshinapatheshwar Immadi Pulikeshi
- Original price was: ₹200.00.₹190.00Current price is: ₹190.00.