ಚನ್ನಗಿರಿ ತಾಲ್ಲೂಕಿನ ಹೂದಿಗೆರೆ ಗ್ರಾಮದವರು
ನಾರಾಯಣ ಭಟ್ಟ ನಾಗರತ್ನಮ್ಮ ದಂಪತಿಯ ಪುತ್ರರು
ಕನ್ನಡದ ಪ್ರಖ್ಯಾತ ಸಾಹಿತಿಗಳು ಕವಿ ದಿಗ್ಗಜರಿವರು
ಹೆಚ್ ಎಸ್.ವಿ.ಎಂದಿವರು ಚಿರಪರಿಚಿತರಾದವರು
ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿನವರು
ಉಪನ್ಯಾಸಕರಾಗಿ ಪ್ರಾಧ್ಯಾಪಕರಾಗಿ ಸೇವೆಗೈದವರು
ಕನ್ನಡ ಚಲನಚಿತ್ರ ಗೀತೆರಚನೆಕಾರರೆಂದು ಪ್ರಖ್ಯಾತರು
ತೂಗು ಮಂಚದಲ್ಲಿ ಕೂತು ಹಾಡಿನ ರಚನೆಕಾರರು
ಕಥನ ಕವನಗಳು ಕುರಿತಾದ ಸಂಶೋಧನೆ ನಡೆಸಿದವರು
ಕವಿತೆ, ನಾಟಕ ಮತ್ತು ಪ್ರಬಂಧ, ಕಾದಂಬರಿಕಾರರಿವರು
ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದವರು
ಫಿಲಂಫೇರ್ ಹಾಗೂ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು
ಭಾವಗೀತೆಗಳ ಮೂಲಕ ಕೇಳುಗರ ಮನವಗೆದ್ದವರು
ಕನ್ನಡ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆಯ ನೀಡಿದವರು
ಅಪಾರ ಅಭಿಮಾನಿಗಳನ್ನು ತೊರೆದು ಇಂದು ನಿಧನರಾದರು
ಪೂರ್ಣಿಮಾ ರಾಜೇಶ್
ಕಾವ್ಯ ನಾಮ-ಬಸು-ಮಲ್ಕಿ
ಬೆಂಗಳೂರು