You are currently viewing ಹಾಯ್ಕುಗಳು

ಹಾಯ್ಕುಗಳು


ಜೀವನದಲ್ಲಿ
ಸರಸ ಇರಬೇಕು.
ಬಣವಿಯಷ್ಟು.

ಬಡತನವು
ಹಣಕೆ ಸೀಮಿತವೇ ?
ಮನಸಿಗಲ್ಲ.

ಬಡಿವಾರದಿ
ಬದುಕು; ಬಾಳಿನಲ್ಲಿ;
ಬರದ ಭೂಮಿ.

ಕರುಣೆ ತೋರು
ನೋವುಂಡು ಜನರಲಿ,
ನೀ ಪರಮಾತ್ಮ !

ಸುಗ್ಗಿ ಸೊಗಸು
ಇರಲಿ; ತರುಣರ.
ಎದೆಯು, ಪರ್ವ.

ಆಕೆ,ಈತನ
ವಾರೆನೋಟಗಳಲಿ
ಸಾಗ್ರಮಂಥನ.!

ಸುಗ್ಗಿ ಹಿಗ್ಗಿನ
ಸಗ್ಗ,ಸವಿದುಣ್ಣಲು.
ಅಮೃತ ಬನಿ.

ಹೊಲದೊಳಗ
ಚಲ್ಯಾರ ಮೊಸರನು.
ಶ್ರೀ ಕೃಷ್ಣಮೆದ್ದ.

ನಾನು,ಅವಳು;
ಬಾಹು ಬಂಧನದಲ್ಲಿ
ಬರೀ ಅದ್ವೈತ.
೧೦
ಜೋಳದ ತೆನೆ,
ಹೊಲ ತುಂಬಾ ಚೆಲ್ಲಿದ
ಮುತ್ತಿನ ರಾಶಿ.

ಗಂಗಾಧರ ಅವಟೇರ
ಶ್ರೀ ಮಹೇಶ್ವರ ಪ.ಪೂ.ಕಾಲೇಜು ಇಟಗಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.