ಅಹಂ ಅಹಂಕಾರವು ದೂರ ತಳ್ಳಿ
ದ್ವೇಷ ಮದ ಮತ್ಸರ ಮೋಹ ಅಳಿಸಿ
ಚಂದಿರನ ಹಾಗೆ ಬಂದು ಉಸಿರು ನೀಡಿ
ಅಂಜದೆ ಅಳುಕದೆ ಬದುಕು ಕಲಿಸಿದು
ಕತ್ತಲೆಯ ಬದುಕಿಗೆ ಬೆಳಕಿನ ಜೀವ
ಸೂರ್ಯನ ಕಿರಣದಂತೆ ನನ್ನ ಬಾಳಿಗೆ
ಪ್ರೀತಿಯ ಮಮತೆಯ ಧೈರ್ಯ ನೀಡಿ
ಆತ್ಮವಿಶ್ವಾಸ ತುಂಬಿದ ಸ್ವರೂಪ ನೀಡಿ
ನಾ ಮಣ್ಣಿನ ಮುದ್ದೆಯಾಗಿದ್ದ ನನಗೆ
ಜ್ಞಾನ ದೀಪದ ಬತ್ತಿಯು ನನಗೆ ನೀಡಿ
ಈಗ ಹೃದಯದ ಗೂಡಲ್ಲಿ ಬೆಚ್ಚುಗೆಯ
ಹರ್ಷ ತಂದಿದೆ ಗುರುವಿನ ದಾರಿ ನನಗೆ
ನನಗೆ ಜ್ಞಾನವು ತುಂಬಿದ ಗುರುವಿಗೆ
ನನ್ನ ಜೀವನವು ವಸಂತ ಋತುವಿಗೆ
ತಳ್ಳಿದ ಆ ದೇವರ ರೂಪದ ಗುರುವಿಗೆ
ಕೋಟಿ ಕೋಟಿ ಪ್ರಣಾಮಗಳು ಗುರುವಿಗೆ
ಮಹಾಂತೇಶ ಖೈನೂರ
ಅತ್ಯುತ್ತಮ ಸಾಹಿತ್ಯ ಸರ್