ಗುರುಗಳ ಹಬ್ಬ ಬಂದೈತೊ
ಸಡಗರ ಸಂಭ್ರಮ ತಂದೈತೊ
ಅರಿವಿನ ಬುತ್ತಿ ಹಂಚಿ ತಿನಿಸುವ
ಗುರುವಿಗೆ ನಮನ ಹೇಳೈತೊ
ಮನೆಯೇ ಮೊದಲ ಪಾಠಶಾಲೆ
ತೊದಲ ಮಾತು ಮಕ್ಕಳ ಲೀಲೆ
ಮಾತು ಬಿತ್ತಿ ಭಾಷೆಯ ಕಲಿಸಿದ
ತಾಯಿಗೆ ನಮನ ಹೇಳೈತೊ
ಆರಕೆ ತುಳಿದ ಶಾಲೆಯ ಮೆಟ್ಟಿಲು
ಅಕ್ಷರ ಮರದ ಬೀಜ ಬಿತ್ತಲು
ಹಾಡಿಸಿ ಕುಣಿಸಿ ಕಥೆಯನು ಹೇಳಿದ
ಗುರುವಿಗೆ ನಮನ ಹೇಳೈತೊ
ಹೃದಯ ಹೃದಯದ ಭಾವಲೋಕದ
ದಾರಿಯ ಮಾಡಿ ಜೀವನ ರೂಪಿಸಿ
ಭಯವನು ಓಡಿಸಿ ಸೇತುವೆ ಕಟ್ಟಿದ
ಗುರುವಿಗೆ ನಮನ ಹೇಳೈತೊ
ತ್ಯಾಗ ನ್ಯಾಯದ ಮೂರುತಿ ತಾನು
ಓದು ಬರಹಕೆ ಎಲ್ಲೆ ಇಲ್ಲದ ಬಾನು
ಪ್ರೀತಿಸಿ ಕರುಣಿಸಿ ತಪ್ಪನು ಮನ್ನಿಸಿದ
ಗುರುವಿಗೆ ನಮನ ಹೇಳೈತೊ
ಭುವನೇಶ್ವರಿ ರು. ಅಂಗಡಿ (ಶಿಕ್ಷಕಿ)
ಸರಕಾರಿ ಪ್ರೌಢಶಾಲೆ ಕಲಹಾಳ
ತಾ:ರಾಮದುರ್ಗ ಜಿ:ಬೆಳಗಾವಿ
9945095539