You are currently viewing ಗುರು ವೃಂದಕ್ಕೆ ವಂದನೆ

ಗುರು ವೃಂದಕ್ಕೆ ವಂದನೆ

ಗುರು ಎಂದರೆ ಹೇಗಿರಬೇಕು…
ಮಸ್ತಕಕ್ಕೆ ಪುಸ್ತಕದ ಆಹಾರ ಕೊಟ್ಟು
ಸ್ವಾಸ್ಥ್ಯ ಜೀವನಕ್ಕೆ ದಾರಿದೀಪವಾಗಬೇಕು..

ಗುರು ಎಂದರೆ ಹೇಗಿರಬೇಕು..
ಅಜ್ಞಾನದಿಂದ ಸುಜ್ಞಾನದ ಕಡೆ
ಕೊಂಡೊಯ್ಯುವ ಸಂಜೀವಿನಿ ಯಾಗಬೇಕು…

ಗುರು ಎಂದರೆ ಹೇಗಿರಬೇಕು..
ತಪ್ಪು-ಒಪ್ಪುಗಳನ್ನ ತಿದ್ದಿ ತಿಡಿ ತಿಳುವಳಿಕೆಯ
ಕೊಳದಡೆ ಕೊಂಡೊಯ್ಯುವ ಹರಿಗೋಲಿನಂತಿರಬೇಕು..

ಗುರು ಎಂದರೆ ಹೇಗಿರಬೇಕು..
ಮನದ ಮಲಿನತೆಯನ್ನು ಹೋಗಲಾಡಿಸಿ
ಹೊಸ ಬದುಕಿಗೆ ನಾಂದಿಯಾಗಬೇಕು..

ಗುರು ಎಂದರೆ ಹೇಗಿರಬೇಕು..
ಮೌಡ್ಯ ಮೂಢನಂಬಿಕೆಗಳನ್ನು ಹೊಡೆದೋಡಿಸಿ
ಆಚಾರ ವಿಚಾರದ ಅರಿವು ಮೂಡಿಸುವಂತಿರಬೇಕು…

ಗುರು ಎಂದರೆ ಹೇಗಿರಬೇಕು..
ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ
ತಂತ್ರಜ್ಞಾನದ ವಿದ್ಯುಲತೆಯು ತಾನಾಗಿರಬೇಕು…

ಹರ ಮುನಿದರೆ ಗುರು ಕಾಯುವನು
ಗುರು ಮುನಿದರೆ ಕಾಯುವವರಾರು
ಎಂಬಂತೆ ಎಲ್ಲಾ ನನ್ನ ಗುರು ವೃಂದಕ್ಕೆ

ಶಿಕ್ಷಕರ ದಿನಾಚರಣೆಯ ಶುಭಾಶಯಗಳು..

ಶಿವಲೀಲಾ ಎಸ್ ಧನ್ನಾ
ಜವಳಿ (ಡಿ) ಜಿಲ್ಲಾ :-ಕಲ್ಬುರ್ಗಿ
ಕಲ್ಯಾಣ ಕರ್ನಾಟಕ.


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.