ಶುದ್ಧ ಬರಹಗಳನ್ನು ಬರೆಸಿ
ಗದ್ಯ ಪದ್ಯಗಳನ್ನು ತಿಳಿಸಿ ಸಮಾಸ
ಸಂಧಿಗಳ ಸಂದಿಗ್ದತೆಯನ್ನು ಬಿಡಿಸಿ
ಹೇಳಿದ ಕನ್ನಡ ಗುರುವಿಗೆ ನನ್ನ ವಂದನೆಗಳು
ಗತಕಾಲದ ವೈಭವ ತಿಳಿಸಿ..
ಕ್ರಿಸ್ತ ಶಕೆ ಶಾಸನಗಳ ಶಿಲ್ಪ ಕಲೆಗಳ
ಪರಿಚಯಿಸಿದ ಇತಿಹಾಸ ತಿಳಿಸಿದ
ಗುರುವಿಗೆ ನನ್ನ ವಂದನೆಗಳು
ಅಜ್ಞಾನ ಅಳಿಸಿ ಅರಿವು ತಿಳಿಸಿ
ವಿಜ್ಞಾನ ತಂತ್ರಜ್ಞಾನದ ಖನಿಜ ಖಗೋಳ
ಶಾಸ್ತ್ರದ ಜ್ಞಾನದ ದೀವಿಗೆಯ ಮೊಳಗಿಸಿದ
ವಿಜ್ಞಾನದ ಗುರುಗಳಿಗೆ ನನ್ನ ವಂದನೆಗಳು
ಕೂಡಿ ಕಳಿಸಿ ಗುಣಿಸಿ ಭಾಗಿಸಿ
ಚಕ್ರ ಬಡ್ಡಿ ಅಂಕಗಣಿತದ ಅಂಕಗಳನ್ನು
ಎಣಿಸಿ ಸೂತ್ರ ರೇಖಾ ಗಣಿತ ತಿಳಿಸಿಕೊಟ್ಟ
ಗಣಿತ ಗುರುಗಳಿಗೆ ನನ್ನ ವಂದನೆಗಳು
ಹೆಚ್ಚಿನ ಜ್ಞಾನಕ್ಕೆ ಎಬಿಸಿಡಿ ಕಲಿಸಿ
ಗ್ರಾಮರ್ ಸೆಂಟೆನ್ಸ್ ಗಳ ಸಾರ ತಿಳಿಸಿ
ಸ್ಪೆಲಿಂಗ್ ಮಿಸ್ಟೇಕ್ ಆದ್ರೆ ಸ್ಟ್ಯಾಂಡ್ ಆಗಿ
ನಿಲ್ಲಿಸಿದ ಇಂಗ್ಲೀಷ್ ಗುರುಗಳಿಗೆ ನನ್ನ ವಂದನೆಗಳು
ರಾಷ್ಟ್ರೀಯ ಭಾಷೆಯ ಉಳಿಸಿ..
ಅಂತರಾಷ್ಟ್ರೀಯ ಅಂದರ್ ಬಾಹರ್
ಖುಬ್ ಸೂರತ್ ಭಾಷೆಯ ಬಾತಮಿಯ
ತಿಳಿಸಿ ಹಿಂದಿ ಹೇಳಿದ ಗುರುಗಳಿಗೆ ನನ್ನ ವಂದನೆಗಳು
ಸರ್ವ ಗುರು ವೃಂದಕ್ಕೆ ಶಿರಸಾ ನಮನಗಳು
ಶಿವಲೀಲಾ ಎಸ್ ಧನ್ನಾ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ