ಅಹವಾಲು ಸ್ವೀಕರಿಸಿ ಅದ್ಬುತವ
ಸೃಷ್ಟಿಸಿದವರು ನೀವು
ಸಹನಗುಣದಿ ಬಾನಿನ
ಅಂಗಳವ ಮುಟ್ಟಿಸಿದವರು ನೀವು
ಗಗನಕ್ಕೆ ಹಾರಿಸಿದೆಯಲ್ಲ
ವಿಕ್ರಮನಲ್ಲಿ ನಂಬಿಕೆಯಿಟ್ಟು
ನಗುತಲಿ ಕಷ್ಟವೆದುರಾದರೂ
ವಿಜಯ ಸಾಧಿಸಿದವರು ನೀನು
ಮೊಗದಿ ಆತಂಕವಿದ್ದರೂ
ಒಳಗೊಳಗೆ ಹರ್ಷದೊನಲು
ಜಗಜ್ಜಾಹೀರಾದ ಪುಣ್ಯಕಾರ್ಯಕ್ಕೆ
ಅಣಿಯಾದವರು ನೀವು
ಪ್ರತಿಹೆಜ್ಜೆಗೂ ಸೋಲುಂಡರೂ
ಮಾಡಿದಿರಿ ವಿಸ್ಮಯವ ಭೀತಿಯಲಿ
ಉಪಗ್ರಹವನ್ನು ಆಗಸಕ್ಲೆ
ಉಡಾಯಿಸಿದವರು ನೀನು
ನಭೋಮಂಡಲದಿ ಮಿನುಗುತ್ತಿದೆ
ಭಾರತದ ಕೀರ್ತಿಪತಾಕೆ
ಅಭಿನವನ ಕಾವ್ಯವಾರಿಧಿಗೆ
ಸ್ಪೂರ್ತಿಯ ಸೆಲೆಯಾದವರು ನೀವು
ಶಂಕರಾನಂದ ಹೆಬ್ಬಾಳ
ತಾ.ಹುನಗುಂದ ಜಿ.ಬಾಗಲಕೋಟ
ಊರು: ಇಲಕಲ್ಲ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
-
- Sale! Add to basket
- ಐತಿಹಾಸಿಕ ಕಾದಂಬರಿ (Historical Novel)
ಇಮ್ಮಡಿ ಪುಲಿಕೇಶಿ
- Original price was: ₹450.00.₹430.00Current price is: ₹430.00.

