ವರುಷದ ಮಳೆ ಹರುಷ ತರದೆ
ಕೊರತೆಯಾಗಿ ಬರಗಾಲ ಕಾಡಿದೆ
ಕಾಡ್ಗಿಚ್ಚಿನಿಂದ ಗಿಡ ಮರ ಬಳ್ಳಿಗಳೆಲ್ಲ
ಬೆಂದು ಒಣ ಹವೆ ಮೂಡಿದೆ
ನೀರಲಿರುವ ಮೀನು ನೆಲದ ಮೇಲೆ
ಉಸಿರು ಹಿಡಿದು ಬದುಕಲಾದೀತೇ
ಒಣ ಮರದ ಮೇಲೆ ಕೋಗಿಲೆಯೊಂದು
ಕುಕೀಲರಾಗವಾ ಹಾಡಿದೆ
ಹಸಿವಿನಿಂದ ಕಂಗೆಟ್ಟ ಪ್ರಾಣಿಗಳು
ಆಹಾಕಾರದಿ ನಾಡಿಗೆ ನುಗ್ಗಿವೆ
ಜಿಂಕೆಯೊಂದು ಬಾಯಾರಿಕೆಯಾಗಿ
ನೀರು ಕುಡಿಯಲು ಓಡಿದೆ
ಕಾನನವ ಕಡಿದು ವನಮಹೋತ್ಸವ
ಮಾಡಲು ಹೊರಟ ಮೂರ್ಖ ಮನುಜ
ತುಂಟ ಮರಿ ಸಾವಿನ ಭಯವಿಲ್ಲದೆ
ಎಗ್ಗಿಲ್ಲದ ಚೆಲ್ಲಾಟ ಆಡಿದೆ
ವಿಧಿಬರಹವನ್ನು ಕಂಸನಿಗೆ
ಬದಲಾಯಿಸಲಾದೀತೆ ಮರುಳೆ
ಖಗಮೃಗಗಳಿಗೆ ಪ್ರಕೃತಿ ವಿಕೋಪದಿಂದ
ಸೃಷ್ಟಿಯೇ ಪಾಠ ಮಾಡಿದೆ
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ್
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.