You are currently viewing ಗಝಲ್

ಗಝಲ್

ಬದುಕಿನ ಕಾವಲಿಯಲಿ ಬೆಂದು ನೊಂದ
ಭಕ್ತನಿಗೆ ಸುಖ ತಂದೀತೇ ಶಿವರಾರಾತ್ರಿ
ಬಿದ್ದು ಹೋಗುವ ಮರಕ್ಕೆ ಎದ್ದು ನಿಲ್ಲಲು
ನವ ಚೈತನ್ಯವ ನೀಡೀತೇ ಶಿವರಾತ್ರಿ

ತ್ರಿಶೂಲ ಧಾರಿ ಮುಕ್ಕಣ್ಣನ ಲೀಲಾ
ವಿನೋದಗಳ ಕೊಂಡಾಡುವ ಮಹಾರಾತ್ರಿ
ತ್ರಿದಲ ಬಿಲ್ವಪತ್ರೆ ಅರ್ಪಿಸೇ ತ್ರಿಜನ್ಮ
ಪಾಪಗಳ ನಾಶ ಮಾಡೀತೇ ಶಿವರಾತ್ರಿ

ದುಷ್ಟ ದಕ್ಷಬ್ರಹ್ಮನು ಕೈಲಾಸದೊಡೆಯ
ಶಿವನಿಗೆ ಅವಮಾನಿಸಲು ಮುಂದಾದನೇ
ಸತಿಗೌರಿಗೆ ಪಿತನಿಗಿಂತ, ಪತಿ ವಾಕ್ಯದ
ಪಾಲನೇ ಮೆಲೆಂದು ಸಾರೀತೇ ಶಿವರಾತ್ರಿ

ಹರನೊಲಿದರೆ ತಿರುಕನು ಅರಸನಾಗಿ
ರಾಜ್ಯಭಾರ ಮಾಡಬಲ್ಲನಲ್ಲವೇ
ಕರಮುಗಿದು ನಿರ್ಮಲ ಭಾವದಿ ಬೇಡಲು
ಮನಗಳ ಕಷ್ಟವ ನುಂಗೀತೇ ಶಿವರಾತ್ರಿ

ಜೀವನದ ಏಳು ಬೀಳುಗಳ ತಿರುವುಗಳಲ್ಲಿ
ದಾರಿಕಾಣದೆ ಬಿಜಲಿ ಕಂಗೆಟ್ಟಿರುವನು
ಜ್ಯೋತಿರ್ಲಿಂಗದ ತ್ರಿನೇತ್ರನ ತೇಜಸ್ಸು
ಸತ್ಸಂಗದ ಹಾದಿಯ ತೋರೀತೇ ಶಿವರಾತ್ರಿ

ಈರಪ್ಪ ಬಿಜಲಿ
ಕೊಪ್ಪಳ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



This Post Has One Comment

  1. ಈರಪ್ಪ ಬಿಜಲಿ

    ನನ್ನ ಗಝಲ್ ನು ಚಂದವಾಗಿ ಪ್ರಕಟಣೆ ಮಾಡಿದಕ್ಕಾಗಿ ಧನ್ಯವಾದಗಳು ಸರ್

Comments are closed.