You are currently viewing ಗೆದ್ದ ಬುದ್ಧ

ಗೆದ್ದ ಬುದ್ಧ

ವೈಶಾಖಮಾಸ
ಶುಕ್ಲಪಕ್ಷ ಹುಣ್ಣಿಮೆ
ಜನನವಾಯ್ತು
ಬುದ್ಧನೆಂಬ ಜ್ಞಾನಿಯ
ದಿನವದು ಹಬ್ಬವು

ಶುದ್ಧೋದನನ
ಮಗನಿವ ಸಿದ್ಧಾರ್ಥ
ಮಾಯಾದೇವಿಯ
ಸುಕುಮಾರನಿವನು
ಮಹಾಬುದ್ಧ ಇವನು

ಬಿಹಾರದಲ್ಲಿ
ಬೋಧಗಯಾದಲ್ಲಿನ
ಭೋಧಿವೃಕ್ಷದಿ
ಜ್ಞಾನೋದಯವಾಯಿತು
ಧರ್ಮೋಪದೇಶವಾಯ್ತು

ಗೌತಮ ಬುದ್ಧ
ಶಾಂತಿ ಮಂತ್ರಕೆ ಎದ್ದ
ಸರಳತೆಯ
ಜೀವನವನ್ನು ಗೆದ್ದ
ಅಹಿಂಸಾ ತತ್ವ ಬದ್ಧ

ನಳಿನಾ ದ್ವಾರಕನಾಥ್
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.