ಹೆಂಗದೇರಿ ಮಹಾತ್ಮಾ ಗಾಂಧಿ
ಆಹಾ! ನೀವ ನಡದಿದ್ದ ಎಂತ ಹಾದಿ
ಆದ್ರ ಇದೆಂತ ವಿಧಿ
ನೀವ ಹೋದ ಮ್ಯಾಲ ನಿಮ್ಮ ಆದರ್ಶ ಎಲ್ಲ
ಸುಟ್ಟಬೂದಿ
ನಮ್ಮ ದೇಶ ರಾಮರಾಜ್ಯ ಆಗಲಿ ಅಂತ ಕನಸ ಕಂಡ್ರಿ
ಸತ್ಯ ಆಹಿಂಸೆ ಅಂತ ಪ್ರಾಣಾನ ಬಿಟ್ರಿ ಖರೆ
ಹೇಳಾಕ್ ಧೈರ್ಯ ಕೊಟ್ರಿ ಅಹಿಂಸಾ
ಮಾರ್ಗ ತೋರಿಸಿ ಶಾಂತಿದೂತನಾಗಿಬಿಟ್ರಿ
ರಾಮಾಯಣ ಮಹಾಭಾರತ ನಡೆದ ನಾಡು
ಇಂದ ಕೊಲಿ ಸುಲಿಗಿ ನಡದಾವ ನೋಡು
ಒಂದಲ್ಲ ಎರಡಲ್ಲ ಏನೇನ ಹೇಳಲಿ ತಿಳಿವಾತ
ಎಲ್ಲ ಬರದರ ಪತ್ರ ಹೋಗಿ ಹೊತ್ತಿಗಿ ಆದೀತ
ಏನೋ ಸಾಧಸ್ತೇವಿ ಅಂತಾರ್ ನಮ್ಮ ಜನಾ ಅಂತೂ
ಹೆಣ್ಣಿಗಿ ಕಿಮ್ಮತ್ತ ಇಲ್ಲದ ದೇಶ ಏನ ಸಾಧಿಸೀರ ಏನ ಬಂತು?
ರೇಖಾ ಮಾನಕೋಜಿ