ಪ್ರೀತಿ ಕುರುಡು ಜಿಟಿ-ಜಿಟಿ ಮಳೆಯಂತೆ ನೊಂದು ನುಡಿದೆಯಾ
ಕಾಮನಬಿಲ್ಲು ಮೂಡಿ ರಂಗು ರಂಗಿನ ಬಣ್ಣ ಮೂಡಲು ಬಂದು ನೋಡಿದೆಯಾ
ಗುಂಡಿಗೆಯ ಗೂಡಲ್ಲಿ ಕುಳಿತ ಲಲನೆ ನೆತ್ತರ ಒತ್ತಲು ಬಿಡಲಿಲ್ಲವೇಕೆ
ಪ್ರೀತಿಯ ಅರ್ಥ ತಿಳಿಯಲು ಹೊತ್ತಿಗೆಯ ಅರೆ ನಿದ್ದೆಯಲ್ಲೇ ಇಂದು ಓದಿದೆಯಾ
ಸುಂಟರಗಾಳಿಗೆ ಸಿಲುಕಿದ ತರಗೆಲೆಯಂತೆ ಗಿರ-ಗಿರ ಸುತ್ತಿ ನೆಲಕ್ಕುರುಳಿದೆ
ಸಂಜೆ ಹೊತ್ತಿನ ಗೋಧೂಳಿ ಸಮಯದಲಿ ಅಂದು ನಡೆದೆಯಾ
ಕಣ್ಣ ಮುಂದೆ ಹಾದು ಹೋದರು ಮಂದಹಾಸ ಬೀರದೆ ಸುಮ್ಮನಿದ್ದೆ
ಹಿಮದ ತಪ್ಪಲಲಿ ಬಿಳಿಯ ಮಂಜು ಮುಸುಕಿದೆ ಎಂದು ಓಡಿದೆಯಾ
ಒಲವಿನ ಚೆಲುವೆ ಕಂಸನ ಶ್ರೀರಕ್ಷೆ ಬೇಕೆಂದು ಬಯಸಿ ಬಂದಳು
ತುಂತುರು ಹನಿಗಳಲಿ ನೆನೆಯದೇ ಕೊಡೆಯ ಮುಂದು ಮಾಡಿದೆಯಾ
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ್
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.