ಹಸಿರ ಸೊಬಗಿಗೆ ಸುಂದರ ತೈಲ ಚಿತ್ರ ಬರೆದವರಾರು ಗೆಳೆಯಾ
ಉಸಿರ ನೀಡುವ ಸಂಭ್ರಮಕೆ ನೆಟ್ಟು ಪೊರೆದವರಾರು ಗೆಳೆಯಾ
ಧರೆಯ ಸೌಂದರ್ಯಕೆ ಮನಸೋಲದಿರುವರೇ ಹೇಳು
ಧಾರೆಯಾಗಿ ಇಳಿಜಾರಿನಿಂದ ಹರಿಯುವುದ ಕರೆದವರಾರು ಗೆಳೆಯಾ
ಮಾತೆತ್ತಿದರೆ ನಿಸರ್ಗ ರಮಣೀಯ ನೋಡಬೇಕು ಎನುತಿದ್ದೆಯಲ್ಲವೆ
ಕತ್ತೆತ್ತಿ ನಿಂತ ಮರಗಳಲಿ ರಿಮ್ ಜಿಮ್ ಸಂಗೀತವ
ಎರೆದವರಾರು ಗೆಳೆಯಾ
ಒಂದೇ ಬಣ್ಣದಲಿ ಮನಮೋಹಕ ದೃಶ್ಯ ಸೆಳೆಯುತಿದೆ ನೋಡು
ಇಂದೇಕೋ ಸಂತಷದ ಕಹಳೆ ಊದಿ ಮನ ತೆರೆದವರಾರು ಗೆಳೆಯಾ.
ಪ್ರತಿನಿಮಿಷ ಹರುಷ ಕಡಲಾಗಿ ಒಡಲ ತುಂಬಿದೆ ಜಯಳಿಗೆ
ಶೃತಿ ಸೇರಿಸಿ ಪ್ರೀತಿ ಭರವಸೆ ಬೆಸೆದು ಮೊರೆದವರಾರು ಗೆಳೆಯಾ
ಜಯಶ್ರೀ ಭ ಭಂಡಾರಿ
ಬಾದಾಮಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.