ಅಮ್ಮಮಾಡಿದ ಕೈರುಚಿಗೆ ಸರಿಸಾಟಿಯಾವುದಿದೆ,
ಉಪ್ಪಿಲ್ಲದೆ ಮಾಡಿದ ಮೃಸ್ಟನ್ನವು ರುಚಿಸುವುದೇ?
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
ಹಿರಿಯರ ಗಾದೆಮಾತು ಎಂದಿಗೂ ನಿಜವಲ್ಲವೇ!
ನೋವುನಲಿವಿಗೆ ಒಡಲಂತೆ ಅವಳು ತಾಯಿ
ಎಲ್ಲವನು ಮಡಿಲಲ್ಲೇ ಹಾಕಿ ಸರಿದೂಗಿಸುವಳು
ಕಣ್ಣೀರು ಬಂದರು ಒಳಗೊಳಗೇ ನುಂಗುವ ತಾಯಿ
ಮಕ್ಕಳ ಮಹೋನ್ನತಿಗೆ ಮುಡುಪಾಗಿ ಬದುಕುವಳು!
ಎಲುಬಿಲ್ಲದ ನಾಲಿಗೆಗೆ ಸಲ್ಲುವ ಮಾತುಗಳಾಡದೆ
ಮನ ನೋಯಿಸಿ ನೀನು ಸಾಧಿಸಿದ್ದಾದರು ಏನು?
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ
ಮತ್ತೆ ಜೋಡಿಸಲು ಸಾಧ್ಯವೇ ಓ ಮನಸೇ ಹೇಳು!
ಕಾಯಕವೇ ಕೈಲಾಸವೆಂದು ನೀ ಮಾಡು ಕೆಲಸವ
ಕೈ ಕೆಸರಾದರೆ ಬಾಯಿ ಮೊಸರೆಂದು ಗೊತ್ತಿಲ್ಲವೇ?
ಮಾಡು ಏನಾದರೊಂದು ಕಾಯಕವ ದಿನವೂ
ಸಂಪಾದಿಸಿ ಸಂಭ್ರಮ ಪಡು ಜೀವನದಲ್ಲಿಯೂ!.
ಸವಿತಾ ಮುದ್ಗಲ್
ಗಂಗಾವತಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.