You are currently viewing ಎಸ್.ವಿ.ಪಾವಟೆ ಯವರ ವಚನಾಮೃತ-1ಕೃತಿಯ ಪರಿಚಯ

ಎಸ್.ವಿ.ಪಾವಟೆ ಯವರ ವಚನಾಮೃತ-1ಕೃತಿಯ ಪರಿಚಯ

ವಚನಾಮೃತ-೧
ವಚನಗಳ ಅರ್ಥ ವಿವರಣೆ
ಲೇಖಕರು-: ವಿ.ಎಸ್.ಪಾವಟೆ
ಮೊದಲ ಮುದ್ರಣ-; 2022
ಬೆಲೆ-50
ಪ್ರತಿಗಳು-500
ಪ್ರಕಾಶರು-: ಪೂಜ್ಯ ಶ್ರೀ ಗುರುಬಸವ ಪ್ರಕಾಶನ ಬಾಗಲಕೋಟೆ-264/ಎ.ಅಮರ ಶೆಟ್ಟಿ ಗಲ್ಲಿ ಬಾಗಲಕೋಟೆ 587101
ಮುದ್ರಕರು-: ಬಸವಲಿಂಗ ಆಫ್ ಸೆಟ್ ಪ್ರಿಂಟರ್ಸ್
ಬಿ.ವ್ಹಿ ವ್ಹಿ.ಸಂಘ ಬಾಗಲಕೋಟೆ

12ನೇ ಶತಮಾನದ ಶರಣ ಸಂಸ್ಕೃತಿಯ ಬದುಕಿನ ವಿಹಂಗಮ ನೋಟ ಶರಣ ಶರಣೆಯರ ವಚನಗಳ ವಚನಾವಲೋಕನದ ಕೃತಿ ವಚನಾಮೃತ
ಸದಾಶಯ ನುಡಿ -:ಡಾ/ವೀರಣ್ಣ ಸಿ.ಚರಂತಿಮಠ ಶಾಸಕರು ಹಾಗೂ ಕಾರ್ಯಾಧ್ಯಕ್ಷರು
ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಬಾಗಲಕೋಟೆ

ವಿ.ಎಸ್.ಪಾವಟೆ ವಿಶ್ರಾಂತ ಪ್ರಾಚಾರ್ಯ ಅಧ್ಯಕ್ಷರು
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಬಾಗಲಕೋಟೆ
ನೂರು ವಚನಗಳ ವಿವರಣಾ ಸಂಗ್ರಹವಿರುವ ಈ ಗ್ರಂಥವು ಸಹೃದಯ ಕವಿಮಿತ್ರರೆಲ್ಲರ ಓದುಗರ ಮೆಚ್ಚುಗೆಗೆ ಪಾತ್ರವಾಗುತ್ತದೆ.

1) ಬ್ರಹ್ಮ ಪದವಿಯನೊಲ್ಲೆ
2) ಅಗ್ನಿಯ ಕೂಡಾಡಿ 3) ಕತ್ತೆ ಬಲ್ಲುದೆ
4) ಅಗ್ಘವಣಿ ಪತ್ರೆ ಪುಷ್ಪ 5) ಕೆಡದಿರೇ ಕೆಡದಿರೇ
ಹೀಗೆ ಇನ್ನೂ ಅನೇಕ ವಿಭಿನ್ನ ವಿಶೇಷ ಉತ್ತಮ ರಚನೆಯ ಸಂದೇಶ ಸಾರುವ ಅರ್ಥಪೂರ್ಣ ಚಂದದ ವಚನಗಳಿವೆ.

ವಚನಾಮೃತ-7
ಶಿವಶರಣೆ ಅಕ್ಕಮ್ಮ

ತಾ ಮಾಡುವ ಕೃಷಿಯ ಮಾಡುವನ್ನಬರ ಮಾಡಿ
ಕೃಷಿ ತೀರಿದ ಮತ್ತೆ ಗುರು ದರ್ಶನ ಲಿಂಗಪೂಜೆ ಜಂಗಮಸೇವೆ ಶಿವಭಕ್ತರ ಸುಖ ಸಂಭಾಷಣೆ ಶರಣರ ಸಂಗ ಈ ನೇಮವನರಿತಿಪ್ಪುದು ಸದ್ಭಕ್ತನ ಸದಾತ್ಮನ ಯುಕ್ತಿ ಆಚಾರವೆ ಪ್ರಾಣವಾಗಿಪ್ಪ
ರಾಮೇಶ್ವರಲಿಂಗಕ್ಕೆ ಆತನೇ ಚೇತನಭಾವ

ಅಕ್ಕಮ್ಮ ಬಸವಣ್ಣನವರ ಪ್ರಭಾವಕ್ಕೆ ಒಳಗಾದ ‘ಏಲೇರಿ ‘ಎಂಬ ಊರಿನ ಶರಣೆ ಕಲ್ಯಾಣದಲ್ಲಿದ್ದು ಶರಣಯೆನಿಸಿ ಅಲ್ಲಿಯೇ ಲಿಂಗೈಕ್ಯಳಾದವಳು, ಈ ಶರಣೆಯ ವಚನಗಳಲ್ಲಿ ವೃತ ನಿಯಮಗಳಿಗೆ ಶೀಲ- ಚಾರಿತ್ರ್ಯಕ್ಕೆ ಆಚಾರವೆ ಬಹಳ ಮಹತ್ವ ನೀಡಿದ್ದು ಕಂಡು ಬರುತ್ತದೆ. ಅಂತೆಯೇ ಶರಣಂ ಅಯ್ಯಪ್ಪ ಅಕ್ಕಮ್ಮನ ವಚನಾಂಕಿತವು “ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರ ಲಿಂಗ “ಎಂದಿದೆ .ಈ ಮೇಲಿನ ವಚನದಲ್ಲಿ ಅಕ್ಕಮ್ಮ ಸರಳ ಪವಿತ್ರ ಬದುಕನ್ನು ಕಟ್ಟಿಕೊಳ್ಳುವ ಮಾರ್ಗವನ್ನು ದರ್ಶಿಸಿದ್ದಾಳೆ.
ಕೃಷಿ ಕಾಯಕವನ್ನು ಮಾಡುವಷ್ಟು ಮಾಡಿ ಉಳಿದ ಸಮಯವನ್ನು ಹೇಗೆ ಸದುಪಯೋಗಪಡಿಸಿ ಕೊಳ್ಳಬೇಕೆಂಬುದನ್ನು ಬಹಳ ಸರಳವಾಗಿ ಹೇಳುತ್ತಾಳೆ. ಕಾಯಕ್ಕೆ ಮೊದಲ ಆದ್ಯತೆ ನೀಡಿದ್ದಾಳೆ. ಕಾಯಕದ ನಂತರ ಗುರು ದರ್ಶನ ಪಡೆಯಬೇಕು

ಯಾರು ಸನ್ಮಾರ್ಗ ಸದ್ಗತಿಯ ತೋರಿದ್ದಾರೆ. ಅವರೇ ಗುರು ಅವರ ದರ್ಶನ ಪಡೆಯಬೇಕು ಮತ್ತು ಮಾರ್ಗದರ್ಶಿಯಾದ ಮಾತುಗಳನ್ನು ಕೇಳಬೇಕು ಎನ್ನುತ್ತಾಳೆ. ಅವರ ಮಾರ್ಗದರ್ಶನದಂತೆ ಲಿಂಗ ಪೂಜೆಯಲ್ಲಿ ತೊಡಗುವುದು ಲಿಂಗ ಪೂಜೆ ಎಂದರೆ ಒಂದರ್ಥದಲ್ಲಿ ಇಷ್ಟಲಿಂಗ ನಿರೀಕ್ಷೆಯ ಮೂಲಕ “ಆತ್ಮಶೋಧನೆ” ಆಗಿದೆ ಒಳಿತು ಕೆಡಕುಗಳನ್ನು ವಿಮರ್ಶಿಸಿ ಸರಿದಾರಿ ಹಿಡಿಯುವುದೇ ಆಗಿದೆ.. ಹಾಗೆಯೇ ಜಂಗಮ ಸೇವೆಯಲ್ಲಿ ತೊಡಗುವುದು ಅಂದರೆ “ದಾಸೋಹಂ” ಭಾವದಲ್ಲಿದ್ದು ಸಕಲ ಜೀವಿಗಳ ಸೇವೆಗೈವುದು ಹಂಚಿಕೊಂಡು ಬದುಕುವ ಕಲೆಯೇ ದಾಸೋಹ ಮತ್ತೆ ಶಿವಭಕ್ತರೊಡನೆ ಸುಖ ಸಂಭಾಷಣೆಯಲ್ಲಿ ಇರುವುದು ಎಂದರೆ ಸದ್ಗತಿಯ ಚರ್ಚೆಯಲ್ಲಿ ತೊಡಗುವುದು ಇದು ಅನುಭವುಗಳ ವಿನಿಮಯವೇ ಆಗಿದೆ. ಅಂತ ಮಾತುಗಳೇ ‘ಸುಖದ’ ಶಾಶ್ವತ ಸುಖದ ಸಂಭಾಷಣೆ ‘ಅನುಭಾವದ’ ಚರ್ಚೆಯಲ್ಲಿರುವುದು ಶರಣರ ಸಂಗದಲ್ಲಿ ಇರುವುದು ಯಾರು ಲಿಂಗ ಜ್ಞಾನಿಗಳು ಯಾರು ಶಿವಾರ್ಪಿತರು ಅಂಥವರೊಡಗೂಡಿ ಇರುವುದು ಎಂದು ಹೇಳುತ್ತಾರೆ. ಅಕ್ಕಮ್ಮ. ಈ ರೀತಿಯಾಗಿ ಸದ್ಭಕ್ತನು ತಿಳಿದು ಆಚರಿಸಬೇಕು ಇಂಥ ‘ಯುಕ್ತಿ’- ಸಾಧನೆ -ಸದ್ಭಕ್ತನಿಗೆ ಚೇತನ ಶಕ್ತಿಯಾಗಿ ಪರಿಣಮಿಸುತ್ತದೆ. ಎಂದು ಹೇಳಿದ ಶಿವಶರಣೆ ಅಕ್ಕಮ್ಮನ ಈ ವಚನವು ಲೌಕಿಕ- ಪಾರಮಾರ್ಥಿಕ ಎರಡು ಬದುಕನ್ನು ಬೆಸೆಯುವ ಬಂದರ ಭಾವ -ಬಂಧವಾಗಿದೆ ಜೀವನವನ್ನು ಸ್ವರ್ಗಕ್ಕೇರಿಸುವ ಏಣಿಯಾಗಿದೆ.. ಭೂಮಿಯನ್ನು ಸ್ವರ್ಗವಾಗಿಸುವ ಸುಗಮ ಮಾರ್ಗವಾಗಿದೆ.

ಶಿವಶರಣೆ ಅಕ್ಕಮ್ಮನ ಕುರಿತಾದ ವಚನವು ಆತ್ಮ ಶೋಧನೆ ದಾಸೋಹದ ಲೌಕಿಕ -ಪಾರಮಾರ್ಥಿಕ ಬದುಕಿನ ಆಗು ಹೋಗುಗಳ ಸುಗಮ ಮಾರ್ಗ ದರ್ಶನ ನೀಡುವಂತ ಜನ ಸಾಮಾನ್ಯರಿಗೂ ಅರ್ಥ ವಾಗುವಂತ ರಚನೆಯ ಅರ್ಥಪೂರ್ಣ ಚಂದದ ವಚನಾಮೃತವಿದು .

ಇನ್ನೂ ಇಂತಹ ಹಲವಾರು ಉತ್ತಮ ರಚನೆಯ ಸೊಗಸಾದ ಪದಗಳಿಂದ ಕೂಡಿದ ವಿಭಿನ್ನ ವಿಶೇಷವಾದ ಉತ್ತಮ ಸಂದೇಶ ಸಾರುವ ಅರ್ಥಪೂರ್ಣ ವಚನಾಮೃತಗಳಿರುವ ವಚನಕಾರರ ಪರಿಚಯ ಅವರ ಕಾಯಕ ವಿವರಣೆ ಸಹಿತ ವಚನದ ಭಾವಾರ್ಥ ವನ್ನು ಈ ಚಂದದ ಕೃತಿಯ ಮೂಲಕ ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆಯನ್ನು ನೀಡಿದ್ದಾರೆ ..
ಶ್ರೀಯುತ ವಿ.ಎಸ್. ಪಾವಟೆ ಅವರಿಂದ ಇಂತಹ ಉತ್ತಮ ರಚನೆಯ ಮತ್ತಷ್ಟು ಕೃತಿಗಳು ಲೋಕಾರ್ಪಣೆ ಯಾಗಲೆಂದು ಶುಭ ಕೋರುವೆ

ಧನ್ಯವಾದ

ಪೂರ್ಣಿಮಾ ರಾಜೇಶ್
ಕವಯಿತ್ರಿ, ಹವ್ಯಾಸಿ.ಬರಹಗಾರ್ತಿ
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



Leave a Reply