ಹಬ್ಬ ಹಬ್ಬ
ಹಬ್ಬ ಹಬ್ಬ
ಹಬ್ಬ ಹಬ್ಬ ಬಂದೈತಿ ನೋಡು ಹಬ್ಬ
ಹೊಲಕ ಹೋಗಿ ಚರಗ ಚೆಲ್ಲೊ ಹಬ್ಬ
ಅದುವೆ ನಮ್ಮ ಎಳ್ಳಾಮಾಸಿ ಹಬ್ಬ
ಮುಂಜಾನೆ ಬೇಗನೆ ಎದ್ದು
ಚಕ್ಕಡಿ ಬಸವನ ಮೈಯನು ತೊಳೆದು
ಭಾರೀ ಜೋರು ಅಲಂಕಾರ ಮಾಡ
ಹೊಂಟೈತಿ ಚಕ್ಕಡಿ ಕುಣ ಕುಣದು ನೋಡ
ಹತ್ತು ಹಲವಾರು ಅಡುಗೆಯ ಮಾಡಿ
ಬಿದರ ಬುಟ್ಟೀಲಿ ತುಂಬೇವ್ರಿ ನೋಡ್ರಿ
ಮನಿ ಮಂದಿಯೆಲ್ಲಾ ಒಟ್ಟಿಗೆ ಕೂಡಿ
ನಕ್ಕು ನಲಿಯುದು ಭಾಳ ಚಂದ ಮೋಡಿ
ಜೋಳದ ರೊಟ್ಟಿ ಸಜ್ಜಿ ರೊಟ್ಟಿ ಚಂದ
ಎಳ್ಳು ಶೇಂಗಾ ಹೋಳಿಗಿ ಇನ್ನೂ ಚಂದ
ಪುಂಡಿಪಲ್ಲೆ ಬೆಲ್ಲದ ಕಡುಬು ಜೋಡಿ
ಚಿಂತಿ ಬಿಟ್ಟು ನಕ್ಕೋತ ಹುಗ್ಗಿ ಹೊಡಿ
ಬಯಲು ಸೀಮೆಯ ಮಂದಿ ನಾವೆಲ್ಲ
ಜೋಳದ ರೊಟ್ಟಿ ಊಟ ಬೇಕು ಹಗಲೆಲ್ಲ
ಪೂಜೆ ಮಾಡ್ತೀವಿ ಜೋಳದ ಹೊಲಕ
ಆಡಿ ನಲಿತೇವಿ ಭೂಮ್ತಾಯಿ ಕೂಡ
ಭುವನೇಶ್ವರಿ. ರು. ಅಂಗಡಿ
ನರಗುಂದ, ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.