ಹನ್ನೆರಡನೆಯ ಶತಮಾನದ ಸಮಾಜ ಸುಧಾರಕ
ಬಿಜ್ಜಳನ ಆಳ್ವಿಕೆಯಲ್ಲಿ ಮೆಚ್ಚುವಂತಹ ಕಾಯಕ
ತತ್ವಜ್ಞಾನಿಯಾಗಿ ಲಿಂಗಾಯತ ಧರ್ಮದ ಸ್ಥಾಪಕ
ಜಾತಿ,ಮೇಲು-ಕೀಳುಗಳನ್ನು ಕಿತ್ತೆಸೆದ ಕನಕ
ಬಸವನ ಬಾಗೇವಾಡಿಯ ಹೆಮ್ಮೆಯ ಕುವರ
ಮಾದರಸ ಮಾದಲಾಂಬಿಕೆಗೆ ಭಗವಂತ ನೀಡಿದ ವರ
ಕೂಡಲ ಸಂಗಮದೇವ ಅಂಕಿತದಿ ಬಾಳಿದ ವಚನಕಾರ
ಸಮಾಜದ ಉದ್ಧಾರಕ್ಕಾಗಿ ಜೀವಿಸಿದ ಬಸವಣ್ಣ ಅಜರಾಮರ
ಕಾಯಕವೇ ಕೈಲಾಸ ಅಂದರು ಬಸವ
ದಯವೇ ಧರ್ಮದ ಮೂಲವೆಂದರು ಬಸವ
ಆಚಾರವೇ ಸ್ವರ್ಗ, ಅನಾಚಾರವೇ ನರಕ ಅಂದರು ಬಸವ
ಮಾತು ಮುತ್ತಿನ ಹಾರದಂತೆ ಇರಬೇಕು ಎಂದರು ಬಸವ
ಸಾಮಾಜಿಕ ಧಾರ್ಮಿಕ ಸುಧಾರಣೆಯ ಜಗಜ್ಯೋತಿ
ಲಂಡನ್ ಥೇಮ್ಸ್ ನದಿಯ ದಡದಿ ನಿಂತಿರುವ ಮೂರ್ತಿ
ಕೂಡಲಸಂಗಮದಿ ಅನುಭವ ಮಂಟಪ ಸ್ಥಾಪಿಸಿದ ಕೀರುತಿ
ಇಡೀ ವಿಶ್ವವೇ ಬೆಳಗುತ್ತಿದೆ ನಿಮಗೆ ಭಕ್ತಿಪೂರ್ವಕ ಆರತಿ
ಗಂಗಾಂಬಿಕೆಯನ್ನು ವಿವಾಹವಾದ ಭಕ್ತಿ ಭಂಡಾರಿ
ಜಾತಿ ಮತಗಳ ಹೊಲಸು ಕಿತ್ತೊಗೆದ ರೂವಾರಿ
ಲಿಂಗ ಸಮಾನತೆ ಸಮುದಾಯ ಬಾಂಧವ್ಯದ ಕಾರ್ಯ ವೈಖರಿ
ಇದೆಲ್ಲದರ ಸಾಧನೆಗೆ ಮನುಕುಲವೇ ನಿಮಗೆ ಆಭಾರಿ
ಕಲಾಂ ಸ್ಥಾಪಿಸಿದರು ಸಂಸತ್ತಿನಲ್ಲಿ ನಿಮ್ಮ ಪ್ರತಿಮೆ
ಬಸವ ಧರ್ಮ ಪೀಠದಿಂದ ನೂರೆಂಟಡಿ ಎತ್ತರದ ಪ್ರತಿಮೆ
ಮಹಾ ಮಾನವತವಾದಿಯಾಗಿ ವಿಶ್ವಕ್ಕೆ ಗುರುವಾಗಿದ್ದ ಹಿರಿಮೆ
ಕ್ರಾಂತಿ ಯೋಗಿಯಾಗಿ ವಿಶ್ವಕ್ಕೆ ಬೆಳಕಾಗಿದ್ದು ಗರಿಮೆ
ಮುತ್ತು ಯ. ವಡ್ಡರ
ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ
ತಾಲೂಕು – ಹುನಗುಂದ
ಜಿಲ್ಲೆ – ಬಾಗಲಕೋಟ
Mob-9845568484
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ