ನನ್ನ ಪ್ರೀತಿಯ ದೇವತೆಯೇ
ಇಲ್ಲಿ ಗಮನ ಕೊಡುವೆಯಾ
ನಾನು ಎಷ್ಟು ಬೇಡಿದರೂ
ನೀನು ಸದಾ ಕೊಡುತಿಯಾ
ಆದರೆ ನಿನಗೇನು ಬೇಕೆಂದು
ನನ್ನ ನೀನು ಕೇಳುವೆಯಾ
ಜನರ ಎಲ್ಲಾ ಕಷ್ಟಗಳ ನೀನು ಪರಿಹಾರ ಮಾಡುವೆಯ
ನಿನ್ನ ಕಷ್ಟಗಳ ಯಾರಿಗೆ ನೀ ಹೇಳುವೆಯಾ
ಹೇಳು ನನ್ಞ ಪ್ರೀತಿಯ ದೇವತೆಯೇ
ನಾ ನಿನ್ನ ಮುದ್ದು ಅಲ್ಲವೇನು
ನಾನು ನಿನಗೊಂದು ಪ್ರಶ್ನೆ ಕೇಳುವೆ ನಾನು
ನೀನು ಒಳ್ಳೆಯವರನ್ನು ಏಕೆ ಕಿತ್ತುಕೊಳ್ಳುವೆ
ಕೆಟ್ಟವರನ್ನು ಇಲ್ಲಯೇ ಏಕೆ ಬಿಡುವೆ
ಓ ನನ್ನ ದೇವತೆಯ ಸ್ವಲ್ಪ ಇಲ್ಲಿ ಗಮನ ಕೊಡುವೆಯಾ
ಪ್ರಣತಿ ಎಸ್ ಎನ್
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ