You are currently viewing ದೇವರನಾಡು ಕಣ್ಮರೆಯಾಗಿದೆ

ದೇವರನಾಡು ಕಣ್ಮರೆಯಾಗಿದೆ

ಕೇರಳದ ವಯನಾಡು ಗುಡ್ಡ ಭೂಕುಸಿತವಿದು
ಸತತ ಜೋರು ಮಳೆಯ ರೌದ್ರ ನರ್ತನವಿದು
ಧಾರಾಕಾರ ಸುರಿಮಳೆ ಕೆಸರಿನ ಓಕುಳಿಯದು
ಮರಗಳು ಉರುಳಿ ಬಿದ್ದು ಬಟ್ಟ ಬಯಲಾಗಿಹುದು

ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದವರೆಷ್ಟೋ
ಮೃತಪಟ್ಟವರೆಷ್ಟೋ ಅನಾಥರಾದವರೆಷ್ಟೋ
ಎಲ್ಲೆಲ್ಲೂ ಹೆಣಗಳ ರಾಶಿ ನರಕ ಸದೃಶವಾಗಿದೆ
ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ

ಘನಘೋರ ದುರಂತ ದೃಶ್ಯ ಮನಕಲಕುವಂತಿದೆ
ಮನೆ -ಮಠ ದೇಗುಲಗಳು ನೀರಿನಲ್ಲಿ ಮುಳುಗಿದೆ
ಬೆಲೆಬಾಳುವ ಆಸ್ತಿ-ಪಾಸ್ತಿ ನೀರಲ್ಲಿ ಕಾಣದಾಗಿದೆ
ಎಲ್ಲೆಲ್ಲೂ ಸಾವು -ನೋವು ನರಳಾಟ ಯಾತನೆಯಿದೆ

ಬೀದಿಗೆ ಬಿದ್ದ ಜನರ ಬದುಕು ಅಯೋಮಯವಾಗಿದೆ
ಹಸು -ಕರು ಪ್ರಾಣಿ ನೀರಿನಲ್ಲಿ ಕೊಚ್ಚಿ ಮೃತಪಟ್ಟಿದೆ
ಜಾನುವಾರುಗಳು ಮಣ್ಣಿನಲ್ಲಿ ಹುದುಗಿಹೋಗಿದೆ
ದೇವರನಾಡಿನಲ್ಲಿ ದೇಗುಲಗಳೇ ಕಣ್ಮರೆಯಾಗಿದೆ

ಭೂಪ್ರಳಯ ಸಾವಿನ ಸಂಖ್ಯೆ ಲೆಕ್ಕಕ್ಕೆ ಸಿಗದಾಗಿದೆ
ನಿಸರ್ಗ ರಮಣೀಯ ದೃಶ್ಯ ವೈಭವ ಮಾಯವಾಗಿದೆ
ವರುಣನ ಆರ್ಭಟ ಅವಕೃಪೆ ಆತಂಕ ಮನೆಮಾಡಿದೆ
ಸುಂದರ ವಯನಾಡು ಸ್ಥಳವಿಂದು ಮಸಣದಂತಾಗಿದೆ

ಪೂರ್ಣಿಮಾ ರಾಜೇಶ್
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ