ಸಾಲುದೀಪ
ಅವ್ವ ನೀ ಎಂದೂ ತೀರದ ಪ್ರೇಮದ ಖಣಿ ನಿನ್ನೊಡಲು ಥೇಟ್ ಕಡಲು ಅವ್ವ ನೀ ಹಚ್ಷಿದ ಹಣತೆ ನಮ್ಮ ಬಾಳ ಹಾದಿಯ ಕತ್ತಲು ನುಂಗಿದ್ದು ಅವ್ವ ನೀನು ಸಾಲು ಸಾಲು ಸೋಲುಗಳುಂಡರೂ ನಮ್ಮ ಬಾಳಿಗೆ ಸಾಲುದೀಪವಾದೆ ನೀನು ಬದುಕಿದ ರೀತಿ ನೋಡಿದರೆ…
ಅವ್ವ ನೀ ಎಂದೂ ತೀರದ ಪ್ರೇಮದ ಖಣಿ ನಿನ್ನೊಡಲು ಥೇಟ್ ಕಡಲು ಅವ್ವ ನೀ ಹಚ್ಷಿದ ಹಣತೆ ನಮ್ಮ ಬಾಳ ಹಾದಿಯ ಕತ್ತಲು ನುಂಗಿದ್ದು ಅವ್ವ ನೀನು ಸಾಲು ಸಾಲು ಸೋಲುಗಳುಂಡರೂ ನಮ್ಮ ಬಾಳಿಗೆ ಸಾಲುದೀಪವಾದೆ ನೀನು ಬದುಕಿದ ರೀತಿ ನೋಡಿದರೆ…
ನವಮಾಸಗಳು ನನ್ನನು ತನ್ನೊಡಲಲಿ ಹೊತ್ತವಳು ನನ್ನ ಹೆತ್ತು ಹೊತ್ತವಳಿಗೆ ಕೋಟಿ ನಮನಗಳು ಜೀವಕ್ಕೆ ಜೀವ ಕೊಟ್ಟು ಜೀವವ ಉಳಿಸುವಳು ಹಸುಕಂದನ ನಗುಮೊಗವ ಕಂಡು ಹರ್ಷಿಸುವಳು ತನ್ನೆಲ್ಲ ನೋವು ಸಂಕಟವ ಮರೆತು ನಗುವಳು ಸಹನೆ , ಕರುಣೆ ಮತ್ತು ತಾಳ್ಮೆಗೆ ಹೆಸರಾದವಳು ಅವ್ವ…
ಹೊತ್ತವಳು, ಹೆತ್ತವಳು ತುತ್ತು ಮಾಡಿ ಉಣಿಸಿದವಳು ಮುತ್ತನ್ನಿಕ್ಕಿ ಪ್ರೀತಿಯ ತೋರಿದವಳು ಅತ್ತು ನೊಂದಾಗ ಸಮಾಧಾನಿಸಿದವಳು ಮತ್ತೆ ಕೈಯ್ಯನ್ನು ಹಿಡಿದು ಮುನ್ನಡೆಸಿದವಳು ಹೊತ್ತಿಗೂ ಮುಂಚೆ ಏಳುವಳು ಕತ್ತು ಹೊರಳದಂತೆ ದುಡಿಯುವವಳು ನಿತ್ಯದ ಮನೆಗೆಲಸವನು ಪೂರೈಸುವಳು ಹೊತ್ತ ಕನಸುಗಳನು ನನಸಾಗಿಸುವವಳು ಹೆತ್ತ ಮಕ್ಕಳನ್ನು ತಿದ್ದಿ…
ಸೂರ್ಯನಿಗಿಂತ ಮೊದಲೇ ಎದ್ದೇಳುವಳು ಚಂದಿರ ಬಂದರೂ ಮಲಗದವಳು ರಂಗೋಲಿ ಹಾಕುತ್ತಾ ಸುಪ್ರಭಾತ ಹಾಡುತ್ತಾ ಎಬ್ಬಿಸುವಳು ನಾ ಎದ್ದಾಗ ನಗು ನಗುತ್ತ ನನ್ನಪ್ಪ ಎಂದವಳು ನನ್ನವ್ವ ರುಚಿ ಶುಚಿ ಮಾಡಿ ಹಾಕಿದವಳು ತನಗೆ ಉಳಿಯದಿದ್ದಾಗ ಹಸಿವಿಲ್ಲ ಎಂದವಳು ಹಣೆಯಲ್ಲಿ ಸೂರ್ಯನಂತೆ ಕುಂಕುಮ ದರಿಸಿದವಳು…