ಕನ್ನಡವ ಬೆಳೆಸೋಣ ಬನ್ನಿ
ಕನ್ನಡದ ಮಣ್ಣೆನಗೆ ತುಲ್ಯದಿ ಹೊನ್ನಿಗಿಂತಲು ಮಿಗಿಲೆನುತ ನಾ ನನ್ನೆದೆಯೊಳಗೆ ಕೆತ್ತಿ ನಿತ್ಯವು ಪೂಜೆಗೈಯುವೆನು ರನ್ನಪೊನ್ನರ ಕಾವ್ಯವರಿಯದೆ ತನ್ನತನವನೆ ಮರೆತು ಯಾವುದೊ ಭಿನ್ನ ಭಾಷೆಗೆ ಮನವ ನೀಡೆನು ನಾನು ಕೊನೆಯನಕ ಹತ್ತು ಶತಕಗಳಷ್ಟು ಹಿಂದೆಯೆ ಬತ್ತದುತ್ಸಾಹದಲಿ ನಾಡಿನ- ಲೆತ್ತಲೂ ಕಾವ್ಯಗಳ ಪರಿಣತರಿದ್ದ ತಾಣವಿದು…