ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಜನಿಸಿದವರು
ಬಾನು ಮುಷ್ತಾಕ್ ಎಂಬ ನಾಮಧೇಯದವರು
ಕನ್ನಡದ ಪ್ರಸಿದ್ಧ ಲೇಖಕಿ ಬರಹಗಾರ್ತಿಯಿವರು
ಸಾಮಾಜಿಕ ಕಾರ್ಯಕರ್ತೆ ವೃತ್ತಿಯಲ್ಲಿ ವಕೀಲೆಯಿವರು
ಕನ್ನಡ ಹಿಂದಿ,ಉರ್ದು ಮತ್ತು ಇಂಗ್ಲಿಷ್ ಭಾಷೆಯ ಪ್ರವೀಣರು
ಹಲವಾರು ಸಣ್ಣಕಥೆಗಳು ಲೇಖನಗಳ ಬರೆದವರು
ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ಮಹಿಳೆಯಿವರು
ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು
ಜಾತಿ ಮತ್ತು ಧಾರ್ಮಿಕ ದಬ್ಬಾಳಿಕೆಯ ಪ್ರತಿಭಟಿಸಿದವರು
ಲಂಕೇಶ್ ಪತ್ರಿಕೆಯ ವರದಿಗಾರರಾಗಿ ಸೇವೆಗೈದವರು
ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು
ಎದೆಯ ಹಣತೆ ಸಣ್ಣಕಥಾಸಂಕಲನದ ರಚನೆಕಾರರು
ಹಾರ್ಟ್ ಲ್ಯಾಂಪ್ ಇಂಗ್ಲೀಷ್ ಗೆ ಅನುವಾದ ಕೃತಿಗಾಗಿಯಿವರು
ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಪಡೆದವರು
ಕರುನಾಡಿನ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ರವರು
ಧನ್ಯವಾದ
ಪೂರ್ಣಿಮಾ ರಾಜೇಶ್
ಕಾವ್ಯ ನಾಮ-ಬಸು-ಮಲ್ಕಿ